ಸ್ವಾತಂತ್ರಕ್ಕಾಗಿ ತಮ್ಮ ಜೀವವನ್ನು ನೀಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ತತ್ವಾದರ್ಶ ಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಜಿ. ಹಂಪಯ್ಯ ನಾಯಕ ಹೇಳಿದರು.

ಕವಿತಾಳ: ಸ್ವಾತಂತ್ರಕ್ಕಾಗಿ ತಮ್ಮ ಜೀವವನ್ನು ನೀಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ತತ್ವಾದರ್ಶ ಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಜಿ. ಹಂಪಯ್ಯ ನಾಯಕ ಹೇಳಿದರು.

ಸಮೀಪದ ಕಡ್ಡೋಣಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹನೀಯರ ಆದರ್ಶಗಳನ್ನು ಪಾಲಿಸುವುದು ಅಗತ್ಯ ಸಮಾಜ ಕಟ್ಟುವ ಕೆಲಸದಲ್ಲಿ ಪ್ರಮುಖ ಪಾತ್ರ ವಹಿಸುವ ಯುವ ಜನರು ಮಹನೀಯರ ಆದರ್ಶ ಗುಣಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

ಗ್ರಾಮದ ಕನಕ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ಮೂರ್ತಿ ಮತ್ತು ಭಾವಚಿತ್ರದ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ಕುಂಭ, ಕಳಶ, ಡೊಳ್ಳು ಮತ್ತಿತರ ಮಂಗಳವಾದ್ಯಗಳೊಂದಿಗೆ ನಡೆದ ಮೆರವಣಿಗೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಗ್ರಾಮಸ್ಥರು ಸಂಭ್ರಮದಿಂದ ಭಾಗವಹಿಸಿದ್ದರು.

ಮುಂಡರಗಿ ಶಿವರಾಯನ ಮಠದ ಶಿವಪ್ರಸಾದ ತಾತ, ಕೊಳಿಹಾಳದ ಬೀರಪ್ಪ ತಾತ, ವಾತಾಪುರದ ಶಿವಶಂಕರಪ್ಪ ತಾತ, ಮಲ್ಲಯ್ಯ ತಾತ, ಮಾನ್ವಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಕೆ.ಅಮರೇಶಪ್ಪ, ಮುಖಂಡ ರಾದ ಜಕ್ಕಲದಿನ್ನಿ ಮಲ್ಲಿಕಾರ್ಜುನ, ಮಾಳಪ್ಪ ತೋಳ, ಯಮನಪ್ಪ ದಿನ್ನಿ, ಗಂಗಪ್ಪ ದಿನ್ನಿ, ಶಿವಣ್ಣ ವಕೀಲ, ಕರಿಯಪ್ಪ ಯಕ್ಲಾಸಪುರ, ಶರಣು ಸಾಹುಕಾರ ಚಿಂಚರಿಕಿ, ಪರಮಣ್ಣ, ಮಲ್ಲಯ್ಯ, ಹುಚ್ಚಪ್ಪ ಹಾಲಾಪುರ, ನಿಂಗಪ್ಪ ಪೂಜಾರಿ, ಸಾಬಣ್ಣ ಪೂಜಾರಿ, ಮಲ್ಲಯ್ಯ, ಸಿದ್ದಪ್ಪ ದಡ್ಯಾಳ ಇನ್ನಿತರರಿದ್ದರು.