ಪಾತಾಳೇಶ್ವರ ದೇಗುಲದಲ್ಲಿ ಕಡೆಕಾರ್ತಿಕ ವಿಶೇಷ ಪೂಜೆ

| Published : Nov 21 2025, 01:15 AM IST

ಪಾತಾಳೇಶ್ವರ ದೇಗುಲದಲ್ಲಿ ಕಡೆಕಾರ್ತಿಕ ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿವರ್ಷದಂತೆ ಈ ವರ್ಷವೂ ಸಹ ಶ್ರೀ ಪಾತಾಳೇಶ್ವರ ಸೇವಾ ಟ್ರಸ್ಟ್ ವತಿಯಿಂದ ಶಿವಲಿಂಗಕ್ಕೆ ಕ್ಷೀರಾಭಿಷೇಕ, ಪಂಚಾಭಿಷೇಕ, ಪುಷ್ಪಾರ್ಚನೆ, ಬಿಲ್ಬಾರ್ಚನೆ ಸೇರಿದಂತೆ ವಿಶೇಷ ಹೂವಿನ ಅಲಂಕಾರದೊಂದಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು. ಇದೇ ಸಂದರ್ಭ ಬಂದಂತ ಭಕ್ತಾದಿಗಳಿಗೆ ಪ್ರಸಾದವಾಗಿ ಉಪ್ಪಿಟ್ಟು ಕೇಸರಿ ಬಾತ್ ಸೇರಿದಂತೆ ಪಂಚಾಮೃತ ವಿತರಿಸಿದರು. ಶ್ರೀ ಪಾತಾಳೇಶ್ವರ ಸೇವಾ ಟ್ರಸ್ಟ್ ವತಿಯಿಂದ ವಿಶೇಷ ಪೂಜೆ ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಬೇಲೂರು ಪಟ್ಟಣದ ಕೆಂಪೇಗೌಡ ರಸ್ತೆಯಲ್ಲಿರುವ ಶ್ರೀ ಪಾತಾಳೇಶ್ವರ ದೇಗುಲದಲ್ಲಿ ಕಡೆ ಕಾರ್ತಿಕ ಮಹೋತ್ಸವದ ಅಂಗವಾಗಿ ಶ್ರೀ ಪಾತಾಳೇಶ್ವರ ಸೇವಾ ಟ್ರಸ್ಟ್ ವತಿಯಿಂದ ವಿಶೇಷ ಪೂಜೆ ನೆರವೇರಿಸಲಾಯಿತು.ಪ್ರತಿವರ್ಷದಂತೆ ಈ ವರ್ಷವೂ ಸಹ ಶ್ರೀ ಪಾತಾಳೇಶ್ವರ ಸೇವಾ ಟ್ರಸ್ಟ್ ವತಿಯಿಂದ ಶಿವಲಿಂಗಕ್ಕೆ ಕ್ಷೀರಾಭಿಷೇಕ, ಪಂಚಾಭಿಷೇಕ, ಪುಷ್ಪಾರ್ಚನೆ, ಬಿಲ್ಬಾರ್ಚನೆ ಸೇರಿದಂತೆ ವಿಶೇಷ ಹೂವಿನ ಅಲಂಕಾರದೊಂದಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು. ಇದೇ ಸಂದರ್ಭ ಬಂದಂತ ಭಕ್ತಾದಿಗಳಿಗೆ ಪ್ರಸಾದವಾಗಿ ಉಪ್ಪಿಟ್ಟು ಕೇಸರಿ ಬಾತ್ ಸೇರಿದಂತೆ ಪಂಚಾಮೃತ ವಿತರಿಸಿದರು.ಪಾತಾಳೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಪೈಂಟ್ ರವಿ ಮಾತನಾಡಿ, ಕಡೆ ಕಾರ್ತಿಕ ಮಹೋತ್ಸವದ ಅಂಗವಾಗಿ ಬೆಳಗಿನ ಪೂಜೆ ನೆರವೇರಿಸಲಾಗಿದೆ. ಪ್ರತಿ ವರ್ಷ ಸಂಜೆ ಕಾರ್ತಿಕ ದೀಪಗಳನ್ನು ಹಚ್ಚುವ ಮೂಲಕ ದೀಪ ಬೆಳಗಿಸಲಾಗುತ್ತಿತ್ತು. ಆದರೆ ಈ ಬಾರಿ ಕೆಂಪೇಗೌಡ ರಸ್ತೆ ವಿಸ್ತರಣೆ ಕಾರ್ಯ ನಡೆಯುತ್ತಿರುವುದರಿಂದ ಬೆಳಗಿನ ಪೂಜೆಗೆ ಮಾತ್ರ ಸೀಮಿತವಾಗಿ ವಿಶೇಷ ಪೂಜೆ ನೆರವೇರಿಸಲಾಗಿದೆ. ಕಡೆ ಕಾರ್ತಿಕ ಮಹೋತ್ಸವದಿಂದ ನಾಡಿನ ಸಮಸ್ತ ನಾಗರಿಕ ಬಂಧುಗಳಿಗೂ ಪಾತಾಳೇಶ್ವರನ ಆಶೀರ್ವಾದ ಲಭಿಸಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ಶ್ರೀಪಾತಾಳೇಶ್ವರ ಸೇವಾ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಬಿಸಿ ಜಗದೀಶ್, ಪ್ರಧಾನ ಅರ್ಚಕರಾದ ಮಂಜುನಾಥ್ ಮಾತನಾಡಿದರು. ಪದಾಧಿಕಾರಿಗಳಾದ ಎಂಡಿ ಬಸವರಾಜ್, ಎಸ್ ಟಿ ಯಲ್ಲೇಶ್ , ಪುಟ್ಟಸ್ವಾಮಿಗೌಡ, ಕೃಷ್ಣಕುಮಾರ್ ಬೇಕರಿ ಮಂಜುನಾಥ್, ರವಿಕುಮಾರ್, ರಾಜು, ಬಿ ವಿ.ದಿನೇಶ್, ಹಾಲಪ್ಪ, ರಮೇಶ್ ಸೇರಿದಂತೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.