ಕದ್ರಿ ಶ್ರೀ ಮಂಜುನಾಥ ದೇವರ ಮಹಾ ರಥೋತ್ಸವ ವೈಭವ

| Published : Jan 22 2025, 12:35 AM IST

ಸಾರಾಂಶ

ಸಾವಿರಾರು ಮಂದಿ ಭಕ್ತಾದಿಗಳು ರಥೋತ್ಸವನ್ನು ಕಣ್ತುಂಬಿಕೊಂಡು ಪುನೀತರಾದರು. ಕದ್ರಿ ಶ್ರೀ ಯೋಗೀಶ್ವರ ಮಠಾಧಿಪತಿ ಶ್ರೀ ರಾಜಾ ನಿರ್ಮಲ್‌ನಾಥಜೀ ಹಾಗೂ ದೇವಳದ ಆಡಳಿತ ಮಂಡಳಿಯ ಉಪಸ್ಥಿತಿಯಲ್ಲಿ ರಥೋತ್ಸವ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಇತಿಹಾಸ ಪ್ರಸಿದ್ಧ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವಾರ್ಷಿಕ ಮಹೋತ್ಸವದ ಅಂಗವಾಗಿ ವೈಭವದ ಮಹಾರಥೋತ್ಸವ ಮಂಗಳವಾರ ರಾತ್ರಿ ನಡೆಯಿತು. ಸಾವಿರಾರು ಮಂದಿ ಭಕ್ತಾದಿಗಳು ರಥೋತ್ಸವನ್ನು ಕಣ್ತುಂಬಿಕೊಂಡು ಪುನೀತರಾದರು. ಕದ್ರಿ ಶ್ರೀ ಯೋಗೀಶ್ವರ ಮಠಾಧಿಪತಿ ಶ್ರೀ ರಾಜಾ ನಿರ್ಮಲ್‌ನಾಥಜೀ ಹಾಗೂ ದೇವಳದ ಆಡಳಿತ ಮಂಡಳಿಯ ಉಪಸ್ಥಿತಿಯಲ್ಲಿ ರಥೋತ್ಸವ ನಡೆಯಿತು.

ಮಧ್ಯಾಹ್ನ ಮಹಾಪೂಜೆಯಾಗಿ ರಥಾರೋಹಣ ನೆರವೇರಿತು. ಸಂಜೆ ಶ್ರೀ ಮನ್ಮಹಾರಥೋತ್ಸವ, ಬೆಳ್ಳಿ ರಥೋತ್ಸವ, ಚಂದ್ರಮಂಡಲ ಉತ್ಸವದ ಬಳಿಕ ಮಹಾಪೂಜೆ, ಭೂತಬಲಿ ಹಾಗೂ ಕವಾಟ ಬಂಧನ ನಡೆಯಿತು.ಜ.22 ರಂದು ಬೆಳಗ್ಗೆ 7 ಗಂಟೆಗೆ ಶ್ರೀ ಮಂಜುನಾಥ ದೇವರ ಕವಾಟೋದ್ಘಾಟನೆ ಮತ್ತು ಪೂಜೆ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ತ್ರಿಶೂಲ ಸ್ನಾನ, ರಾತ್ರಿ 7.30 ಕ್ಕೆಉತ್ಸವ ಬಲಿ, ಚಂದ್ರಮಂಡಲ ಉತ್ಸವ, ರಾತ್ರಿ 10.30 ಕ್ಕೆ ಅವಭೃತ ಸ್ನಾನ, ಧ್ವಜಾವರೋಹಣ, ಜ.24 ರಂದು ಮಧ್ಯಾಹ್ನ 12 ಕ್ಕೆ ಸಂಪ್ರೋಕ್ಷಣೆ, ಶ್ರೀ ಅಣ್ಣಪ್ಪ ದೈವಕ್ಕೆ ವಾರ್ಷಿಕ ಪರ್ವ ಸೇವೆ, ರಾತ್ರಿ 9 ಕ್ಕೆ ಶ್ರೀ ಮಲರಾಯ ಹಾಗೂ ಪರಿವಾರ ದೈವಗಳ ನೇಮೋತ್ಸವದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.