ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌ಗೆ ಕಡೂರು ಟೌನ್ ಕೊ ಅಪರೇಟೀವ್ ಸೊಸೈಟಿ ಅಧ್ಯಕ್ಷ ಕೆ.ಬಿ.ಸೋಮೇಶ್ ಅಭಿನಂದನೆ

| Published : Jan 02 2025, 12:31 AM IST

ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌ಗೆ ಕಡೂರು ಟೌನ್ ಕೊ ಅಪರೇಟೀವ್ ಸೊಸೈಟಿ ಅಧ್ಯಕ್ಷ ಕೆ.ಬಿ.ಸೋಮೇಶ್ ಅಭಿನಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅನುಭವಿ ಆಡಳಿತಗಾರ ಭಂಡಾರಿ ಶ್ರೀನಿವಾಸ್ ಅವರನ್ನು ಪಟ್ಟಣದ ಜನತೆ ಪರವಾಗಿ ಅಭಿನಂದಿಸುತ್ತೇನೆ ಎಂದು ಕಡೂರು ಟೌನ್ ಕೊ ಅಪರೇಟೀವ್ ಸೊಸೈಟಿ ಅಧ್ಯಕ್ಷ ಕೆ.ಬಿ.ಸೋಮೇಶ್ ಹೇಳಿದರು. ಕಡೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪುರಸಭೆ ಅಧ್ಯಕ್ಷರಾಗಿ ಕಡೂರು ಅಭಿವೃದ್ಧಿಗೆ ಶ್ರಮ

ಕನ್ನಡಪ್ರಭ ವಾರ್ತೆ ಕಡೂರು

ಜನರ ಪ್ರೀತಿಯಿಂದ ನಾಲ್ಕು ಭಾರಿ ಕಡೂರು ಪುರಸಭೆ ಅಧ್ಯಕ್ಷರಾಗುವ ಮೂಲಕ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅನುಭವಿ ಆಡಳಿತಗಾರ ಭಂಡಾರಿ ಶ್ರೀನಿವಾಸ್ ಅವರನ್ನು ಪಟ್ಟಣದ ಜನತೆ ಪರವಾಗಿ ಅಭಿನಂದಿಸುತ್ತೇನೆ ಎಂದು ಕಡೂರು ಟೌನ್ ಕೊ ಅಪರೇಟೀವ್ ಸೊಸೈಟಿ ಅಧ್ಯಕ್ಷ ಕೆ.ಬಿ.ಸೋಮೇಶ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಪಟ್ಟಣದ ಕೆ.ಎಲ್.ವಿ ವೃತ್ತದ ಚಿತ್ರಣವನ್ನೇ ಬದಲಾಯಿಸಿ ನೂತನ ವರ್ಷಕ್ಕೆ ನೀರಿನ ಕಾರಂಜಿ ಚಿಮ್ಮಿಸುವ ಮೂಲಕ ಪಟ್ಟಣದ ಗತಕಾಲದ ವೈಭವ ಮರುಕಳಿಸುವಂತೆ ಮಾಡಿರುವುದು ಅವರ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಕಳೆದ 30 ವರ್ಷಗಳ ಅವರ ಸಕ್ರಿಯ ರಾಜಕಾರಣದಲ್ಲಿ ಪುರಸಭೆ ಸೇರಿದಂತೆ ರಾಜಕೀಯ ಕ್ಷೇತ್ರದಲ್ಲಿ ಹಂತ ಹಂತವಾಗಿ ಬೆಳೆಯುವ ಜೊತೆಗೆ ಕಾನೂನು ಬದ್ಧವಾಗಿ, ಅಗತ್ಯಕ್ಕೆ ತಕ್ಕಂತೆ ಯಾವ ಸಮಯದಲ್ಲಿ ಯಾವ ಕಾರ್ಯ ಮಾಡಬೇಕೆಂಬ ಉತ್ತಮ ಆಲೋಚನೆ ಅವರನ್ನು ಎತ್ತರಕ್ಕೆ ಬೆಳೆಸಿದೆ. ಶಿವಮೊಗ್ಗ-ಬೆಂಗಳೂರು ರಾ.ಹೆ..ಹಾದು ಹೋಗುವ ಕಡೂರು ಪಟ್ಟಣದ ವೇದಾ ಪಂಪ್‌ ಹೌಸ್ ಬಳಿ ಪುರಸಭೆಯಿಂದ ವೇದಾ ಪಾರ್ಕ್ ನಿರ್ಮಾಣ ಮಾಡಿ ಕೊಡುಗೆ ನೀಡಿದ್ದಾರೆ. ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಅವರು ಇನ್ನಷ್ಟು ಎತ್ತರಕ್ಕೆ ಬೆಳಯ ಬೇಕು ಇಂತಹ ಅಧ್ಯಕ್ಷರನ್ನು ಸಾರ್ವಜನಿಕರ ಪರವಾಗಿ ಅಭಿನಂದಿಸುವುದು ನಮ್ಮ ಕರ್ತವ್ಯ ಎಂದರು.

ಇದೇ ಸಂದರ್ಭದಲ್ಲಿ ಕೆ.ಜಿ.ಲೋಕೇಶ್ವರ್, ಬಂಕ್ ಮಂಜುನಾಥ್ ಮತ್ತಿತರರು ಇದ್ದರು.