ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಮುಂದಾದ ಕಡೂರು ಪೊಲೀಸರು

| Published : May 14 2024, 01:13 AM IST / Updated: May 14 2024, 01:14 AM IST

ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಮುಂದಾದ ಕಡೂರು ಪೊಲೀಸರು
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕಡೂರು ಪಟ್ಟಣದಲ್ಲಿ ವಾಹನಗಳ ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಕಡೂರು ಪೊಲೀಸರು ಲಾಟಿ ಹಿಡಿದು ಬೀದಿಗೆ ಇಳಿದಿದ್ದಾರೆ.

ವಾಹನ- ಸಾರ್ವಜನಿಕರ ಸುಗಮ ಸಂಚಾರಕ್ಕೆಕ್ರಮ । ಶಬ್ಧ ಮಾಲೀನ್ಯ ತಡೆಗೂ ಕಾಳಜಿ

ಕಡೂರು ಕೃಷ್ಣಮೂರ್ತಿ.

ಕನ್ನಡಪ್ರಭ ವಾರ್ತೆ, ಕಡೂರು

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕಡೂರು ಪಟ್ಟಣದಲ್ಲಿ ವಾಹನಗಳ ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಕಡೂರು ಪೊಲೀಸರು ಲಾಟಿ ಹಿಡಿದು ಬೀದಿಗೆ ಇಳಿದಿದ್ದಾರೆ.

ಕಳೆದ ಎರಡು ದಿನಗಳಿಂದ ದಿಢೀರ್ ಎಂದು ಪೊಲೀಸರು ಪಟ್ಟಣ ಪ್ರಮುಖ ರಸ್ತೆಗಳಾದ ಪ್ರವಾಸಿ ಮಂದಿರದ ರಸ್ತೆ, ಮರವಂಜಿ ವೃತ್ತ, ಪೇಟೆ ಗಣಪತಿ ಆಂಜನೇಯ ದೇವಾಲಯ ವೃತದ ರಸ್ತೆಗೆ ಸಂಪರ್ಕವಾಗುವ ಶಿವಮೊಗ್ಗ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಲಿಂಕ್ ಆಗುವ ರಸ್ತೆಯಲ್ಲಿ ಆಗಾಗ ಟ್ರಾಫಿಕ್ ಜಾಮ್ ಸಮಸ್ಯೆ ಉದ್ಬವಿಸುತ್ತಿದೆ.

ಜನರಿಗೆ ಪಟ್ಟಣದ ಯಾವುದೇ ರಸ್ತೆಗಳಲ್ಲಿ ಪಾದಚಾರಿ ರಸ್ತೆ ಇಲ್ಲದ ಕಾರಣ ಜನರು ವಾಹನಗಳ ಮುಂದೆ ಹೋಗಬೇಕಾದ ಅನಿವಾರ್ಯತೆ ಇದ್ದು, ವಾಹನಗಳ ಸಂಚಾರಕ್ಕೆ ಆಗುತ್ತಿದ್ದ ಕಷ್ಟ, ಕಿರಿಕಿರಿ ನಿವಾರಣೆಗೆ ಪೊಲೀಸ್ ಇಲಾಖೆ ವಾಹನಗಳ ಚಾಲಕರಿಗೆ ಮಾರ್ಗದರ್ಶನ ಮಾಡಿ ಸಂಚಾರಕ್ಕೆ ಅನುವು ಮಾಡುವಂತಹ ಕ್ರಮಕ್ಕೆ ಮುಂದಾಗಿದ್ದಾರೆ.

ಇನ್ನು ದ್ವಿಚಕ್ರ ವಾಹನಗಳ ಸವಾರರ ಮೇಲೆ ಕಣ್ಣಿಟ್ಟಿರುವ ಪೊಲೀಸರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದ ಸವಾರರಿಗೆ ಚುರುಕು ಮುಟ್ಟಿಸುತ್ತಿದ್ದು, ಪ್ರವಾಸಿ ಮಂದಿರ ರಸ್ತೆ ಸೇರಿದಂತೆ ಪ್ರಮುಖ ಕಡೆಗಳಲ್ಲಿ ಸೋಮವಾರ, ಬುಧವಾರ, ಶುಕ್ರವಾರ ರಸ್ತೆಯ ಒಂದು ಬದಿ , ಉಳಿದ ಮೂರು ದಿನಗಳಲ್ಲಿ ರಸ್ತೆಯ ಇನ್ನೊಂದು ಬದಿಯಲ್ಲಿ ಕಾರು, ದ್ವಿಚಕ್ರ ವಾಹನ ನಿಲ್ಲಿಸಲು ಚಾಲಕರಿಗೆ ಸೂಚನೆ ನೀಡಿದ್ದಾರೆ.

ಅಲ್ಲದೆ ಪಟ್ಟಣದಾದ್ಯಂತ ದ್ವಿಚಕ್ರ ವಾಹನಗಳಿಗೆ ಜೋರಾಗಿ ಶಬ್ದ ಮಾಡುವ ಸೈಲೆನ್ಸರ್ ಗಳನ್ನು ಅಳವಡಿಸಿದ್ದು, ಪಿಪಿಎಸ್ಐ ಧನಂಜಯ ಹಾಗೂ ನವೀನ್ ಕ್ರಮವಹಿಸುವ ಜೊತೆ ಅಂತಹ ವಾಹನಗಳನ್ನು ತಡೆದು ವಶಪಡಿಸಿಕೊಳ್ಳುವ ಮೂಲಕ ಮೊದಲ ಬಾರಿ ಸೂಚನೆ ನೀಡುತ್ತಾ, ಶಬ್ಧ ಮಾಲೀನ್ಯ ತಡೆಗೂ ಕಾಳಜಿ ವಹಿಸಿರುವುದು ಸಾರ್ವಜನಿಕ ಬಗೆಗೆಗಿನ ಕಳಕಳಿಗೆ ಕಾರಣವಾಗಿದೆ.

ಈ ಕುರಿತು ಪಿಎಸೈ ಎಂ ಆರ್ ಧನಂಜಯ ಮಾತನಾಡಿ, ಪಟ್ಟಣದಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಹಾಗೂ ಜನರಿಗೆ ಓಡಾಡಲು ಕಷ್ಟವಾಗುತ್ತಿರುವ ಹಿನ್ನೆಲೆ ಹಾಗೂ ಶಬ್ದ ಮಾಲಿನ್ಯ ತಡೆಗೆ ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ತಿಳುವಳಿಕೆ ನೀಡಲಾಗುತ್ತಿದೆ. ಇದಕ್ಕೆ ಜನರು ಇಲಾಖೆ ಜೊತೆ ಕೈಜೋಡಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು

--- ಹೇಳಿಕೆ---

ಕಡೂರು ಪಟ್ಟಣದಲ್ಲಿ ಜನರಿಗೆ ವಾಹನಗಳಿಂದ ಆಗುವ ಕಿರಿಕಿರಿ ತಪ್ಪಿಸಲು ಸಂಚಾರ ಸುಗಮವಾಗುವಂತೆ ಪ್ರವಾಸಿ ಮಂದಿರದ ರಸ್ತೆ, ಕದಂಬ ವೃತ್ತ, ಜೈನ್ ಟೆಂಪಲ್ ರಸ್ತೆ ಸೇರಿದಂತೆ ಪಟ್ಟಣದ ಜನಸಂದಣಿ ಜಾಗಗಳಲ್ಲಿ ಜನರಿಗೆ ಆಗುತ್ತಿರುವ ತೊಂದರೆ ಗಮನಿಸಿ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗುತ್ತಿರುವುದು ಸಂತಸದ ಸಂಗತಿ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕ ಪರವಾಗಿ ಅಭಿನಂದಿಸುತ್ತೇನೆ.

- ಭಂಡಾರಿ ಶ್ರೀನಿವಾಸ್,

ಪುರಸಭೆ ಮಾಜಿ ಅಧ್ಯಕ್ಷ,ಫೋಟೋ 12ಕೆಕೆಡಿಯು2. ದ್ವಿಚಕ್ರ ವಾಹನಗಳನ್ನು ತಡೆದು ತಪಾಸಣೆ ಮಾಡಿ ಮಾರ್ಗದರ್ಶನ ಮಾಡುತ್ತಿರುವ ಪೊಲೀಸರು.

12ಕೆಕೆಡಿಯು2ಎ. ಭಂಡಾರಿ ಶ್ರೀನಿವಾಸ್, ಪುರಸಭೆ ಮಾಜಿ ಅಧ್ಯಕ್ಷರು,

ಕಡೂರು.