ಒಂದೇ ದಿನ ಎರಡು ಗೌರವ ಡಾಕ್ಟರೇಟ್‌ ಸ್ವೀಕರಿಸಿದ ಕಾಗೋಡು

| Published : Jan 23 2025, 12:45 AM IST

ಒಂದೇ ದಿನ ಎರಡು ಗೌರವ ಡಾಕ್ಟರೇಟ್‌ ಸ್ವೀಕರಿಸಿದ ಕಾಗೋಡು
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ: ಹಿರಿಯ ಮುತ್ಸದ್ಧಿ ಹಾಗೂ ವಿಧಾನ ಸಭೆಯ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಒಂದೇ ದಿನ ಎರಡು ಕಡೆ ಗೌರವ ಡಾಕ್ಟರೇಟ್‌ ಪದವಿ ಸ್ವೀಕರಿಸಿ ಗಮನ ಸೆಳೆದರು.

ಶಿವಮೊಗ್ಗ: ಹಿರಿಯ ಮುತ್ಸದ್ಧಿ ಹಾಗೂ ವಿಧಾನ ಸಭೆಯ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಒಂದೇ ದಿನ ಎರಡು ಕಡೆ ಗೌರವ ಡಾಕ್ಟರೇಟ್‌ ಪದವಿ ಸ್ವೀಕರಿಸಿ ಗಮನ ಸೆಳೆದರು.

ಬುಧವಾರ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದ 34ನೇ ಘಟಿಕೋತ್ಸವದಲ್ಲಿ ಮೊದಲು ಗೌರವ ಡಾಕ್ಟರೇಟ್‌ ಸ್ವೀಕರಿಸಿದ ಅವರು ಬಳಿಕ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯ ನೀಡಿದ ಗೌರವ ಡಾಕ್ಟರೇಟ್ ಅನ್ನು ಸ್ವೀಕರಿಸಿದರು.

ಕುವೆಂಪು ವಿವಿ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಡೆ, ನುಡಿ ಗೌರವಿಸಿ ಡಾಕ್ಟರೇಟ್ ನೀಡಿ ಸನ್ಮಾನ ಮಾಡಿದ್ದಾರೆ. ಕುವೆಂಪು ವಿವಿ ನನಗೆ ಗೌರವ ಡಾಕ್ಟರೇಟ್ ಕೊಟ್ಟಿರೋದು ಸಂತೋಷ ಆಗಿದೆ. ನಮ್ಮ ನಡೆ ನುಡಿಯನ್ನು ಗೌರವಿಸಿದ್ದಾರೆ. ಅವರಿಗೆ ನಾನು ವಿಶೇಷವಾದ ಕೃತಜ್ಞನೆ ಸಲ್ಲಿಸುತ್ತೇನೆ. ನನ್ನ ಮೇಲೆ ವಿಶ್ವಾಸ ಇಟ್ಟು ಎರಡು ಡಾಕ್ಟರೇಟ್ ಕೊಟ್ಟಿದ್ದಾರೆ. ನಾನೇನು ಹೇಳಲಿ ಎಂದರು.

ಬಳಿಕ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ ಸ್ವೀಕರಿಸಿ ಮಾತನಾಡಿದ ಅವರು, ಕೆಳದಿ ವಿಶ್ವವಿದ್ಯಾಲಯ ನನ್ನ ಸಮಾಜ ಸೇವೆ ಹಾಗೂ ನಿಷ್ಠೆಯ ಕಾಯಕವನ್ನು ಗುರುತಿಸಿ ಗೌರವ ನೀಡಿರುವುದು ತುಂಬಾ ಸಂತಸ ತಂದಿದೆ. ಯುವರಾಜಕಾರಣಿಗಳು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದರೆ ಇಂತಹ ಗೌರವ ಡಾಕ್ಟರೇಟ್‌ಗಳು ದೊರೆಯಲು ಸಾಧ್ಯ ಎಂದು ಕಿವಿ ಮಾತು ಹೇಳಿದರು.