ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್, ಕಲಬುರಗಿ ವತಿಯಿಂದ ಜೆಎಸ್‌ಡಬ್ಲ್ಯೂ ನಿಯೋಸ್ಟೀಲ್ ಪ್ರಾಯೋಜಕತ್ವದಲ್ಲಿ 4 ರಿಂದ 6ರ ತನಕ ನಗರದಲ್ಲಿ ಮೂರು ದಿನಗಳ ಕಾಲ 29ನೇ ಬಿಲ್ಡ್ ಟೆಕ್ ಎಕ್ಸ್ ಪೋ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಜಿತೇಂದ್ರ ಎಚ್. ಮಿಶ್ರಾ ಹಾಗೂ ಕಾರ್ಯದರ್ಶಿ ಮನೀಶ್ ವೈಕುಂಠ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್, ಕಲಬುರಗಿ ವತಿಯಿಂದ ಜೆಎಸ್‌ಡಬ್ಲ್ಯೂ ನಿಯೋಸ್ಟೀಲ್ ಪ್ರಾಯೋಜಕತ್ವದಲ್ಲಿ 4 ರಿಂದ 6ರ ತನಕ ನಗರದಲ್ಲಿ ಮೂರು ದಿನಗಳ ಕಾಲ 29ನೇ ಬಿಲ್ಡ್ ಟೆಕ್ ಎಕ್ಸ್ ಪೋ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಜಿತೇಂದ್ರ ಎಚ್. ಮಿಶ್ರಾ ಹಾಗೂ ಕಾರ್ಯದರ್ಶಿ ಮನೀಶ್ ವೈಕುಂಠ ತಿಳಿಸಿದರು.ಸುದ್ದಿಗೊಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿದ ಕಟ್ಟಡ ಸಾಮಗ್ರಿಗಳು, ಗೃಹಾಲಂಕಾರ ವಸ್ತುಗಳು ಸೇರಿ ವಿವಿಧ ಆಧುನಿಕ ನಿರ್ಮಾಣ ಸಾಮಗ್ರಿಗಳು, ಒಳಾಂಗಣ ಮತ್ತು ಹೊರಾಂಗಣ: ಮಾಡ್ಯುಲರ್ ಕಿಚನ್, ಫಾಲ್ಸ್ ಸೀಲಿಂಗ್, ಲೈಟಿಂಗ್, ಟೈಲ್ಸ್, ಗ್ರಾನೈಟ್, ಮಾರ್ಬಲ್, ಸ್ಯಾನಿಟರಿವೇರ್, ಫಿಟ್ಟಿಂಗ್ಸ್ ಹಾಗೂ ನವೀನ ತಂತ್ರಜ್ಞಾನ, ವಿನ್ಯಾಸಗಳ ಬೃಹತ್ ಪ್ರದರ್ಶನ ಇಲ್ಲಿ ನಡೆಯಲಿದೆ ಎಂದರು. ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್‌ನ 25ನೇ ವರ್ಷದ ಬೆಳ್ಳಿ ಮಹೋತ್ಸವದ ಅಂಗವಾಗಿ ಈ ಬಾರಿಯ ಎಕ್ಸ್ಪೋವನ್ನು ವಿಶೇಷವಾಗಿ ಆಯೋಜಿಸಲಾಗಿದೆ. 4, 5 ಮತ್ತು 6ರಂದು ನಗರದ ಪಬ್ಲಿಕ್ ಗಾರ್ಡನ್ ನ ವೀರಶೈವ ಕಲ್ಯಾಣ ಮಂಟಪ ಆವರಣದಲ್ಲಿ ಬೆ. 10-30ರಿಂದ ರಾತ್ರಿ 8-30ರ ತನಕ ಪ್ರದರ್ಶನ, ಪ್ರವೇಶ ಉಚಿತ ಇರಲಿದ್ದು, ಸಾರ್ವಜನಿಕರು ಪ್ರದರ್ಶನಕ್ಕೆ ಭೇಟಿ ನೀಡಿ ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಮನವಿ ಮಾಡಿದರು.ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರ್ಸ್ ಪರಿಷತ್ ಸದಸ್ಯ ಮುರಳೀಧರ ಜಿ. ಕರಲಗಿಕರ್ ಮಾತನಾಡಿ, 100ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿರುವ ಈ ಪ್ರದರ್ಶನವು ಮನೆ ನಿರ್ಮಿಸುವವರಿಗೆ, ಇಂಜಿನಿಯರ್‌ಗಳಿಗೆ ಹಾಗೂ ಗುತ್ತಿಗೆದಾರರಿಗೆ ಒಂದೇ ಸೂರಿನಡಿ ಸಂಪೂರ್ಣ ಮಾಹಿತಿ ಮತ್ತು ಹೊಸ ತಂತ್ರಜ್ಞಾನಗಳ ಪರಿಚಯ ಮಾಡಿಕೊಡಲಿದೆ ಎಂದರು.*ಇಂದು ಚಾಲನೆ: ಸೆ. 4ರಂದು ಬೆಳಗ್ಗೆ 10-30ಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ ಎಕ್ಸ್ಪೋ ಉದ್ಘಾಟಿಸುವರು. ಶಹಾಪುರ ಕ್ಷೇತ್ರದ ಶಾಸಕ ಶರಣಬಸಪ್ಪ ದರ್ಶನಾಪುರ, ಎಂಎಲ್‌ಸಿ ಶಶೀಲ್ ನಮೋಶಿ, ಜೆಎಸ್‌ಡಬ್ಲ್ಯು ಅಧಿಕೃತ ವಿತರಕ ಇಮ್ರಾನ್ ಖಾನ್ ಪಾಲ್ಗೊಳ್ಳುವರು. ಸುದ್ದಿಗೋಷ್ಠಿಯಲ್ಲಿ ಸಿವಿಲ್ ಇಂಜಿನಿಯರ್ಸ್ ಸಂಘದ ಉಪಾಧ್ಯಕ್ಷ ಅನಿಲಕುಮಾರ ಗಂಗಾಣೆ, ಹಿರಿಯ ಸಿವಿಲ್ ಇಂಜಿನಿಯರರಾದ ಜಗನ್ನಾಥ ಜೋಶಿ, ಸಿದ್ದರಾಮ ನಿರೋಣಿ, ಸಮೀರ ದೇಶಪಾಂಡೆ, ನರಸಿಂಹಲು ಪತ್ತಿ, ಅಮರೇಶ ಪಾಟೀಲ್, ವಿಜಯಕುಮಾರ ಪಾಟೀಲ್, ಸುಮಿತ್ ಬಳಬಟ್ಟಿ ಇದ್ದರು.

----ಫೋಟೊ-----

ಕಲಬುರಗಿಯ ಬಿಲ್ಡ್ ಟೆಕ್ ಎಕ್ಸ್ ಪೋ''''''''ದ ಪ್ರಚಾರ ಅಭಿಯಾನಕ್ಕೆ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಜೆ.ಎಚ್. ಮಿಶ್ರಾ, ವೃತ್ತಿಪರ ಸಿವಿಲ್ ಇಂಜಿನಿಯರ್‌ಗಳ ರಾಜ್ಯ ಪರಿಷತ್ ಸದಸ್ಯ ಮುರಳೀಧರ ಜಿ. ಕರಲಗೀಕರ್ ವೀರಶೈವ ಕಲ್ಯಾಣ ಮಂಟಪ ಆವರಣದಲ್ಲಿ ಹಸಿರು ನಿಶಾನೆ ತೋರಿಸಿದರು. ಸಿವಿಲ್ ಇಂಜಿನಿಯರ್‌ಗಳಾದ ಜಗನ್ನಾಥ ಜೋಶಿ, ಬಂಡೇಶ ರೆಡ್ಡಿ, ವಿಜಯೇಂದ್ರ ಕಲ್ಲೂರು, ಅನಿಲ್ ನಾಗನಹಳ್ಳಿ, ನರಸಿಂಹಲು ಪತ್ತಿ, ಇದ್ದರು.