ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಬರಗಾಲದಿದಂ ಕಂಗೆಟ್ಟಿರುವ ಸಹಕಾರ ರಂಗದ ಬ್ಯಾಂಕ್‌ನಲ್ಲಿ ಸಾಲ ಪಡೆದು ತುಂಬಲಾಗದೆ ಸುಸ್ತಿದಾರರಾಗಿರುವ ರೈತರಿಗೆ ಸರಕಾರ ಸಿಹಿಸುದ್ದಿ ನೀಡಿದೆ. ಡಿಸಿಸಿ ಬ್ಯಾಂಕ್‌ಗಳಲ್ಲಿ ಅಲ್ಪಾವಧಿ ಹಾಗೂ ದೀರ್ಘಾವಧಿ ಸಾಲ ಪಡೆದು ಸುಸ್ತಿದಾರರಾಗಿರುವ ರೈತರು ಒಂದೇ ಕಂತಲ್ಲಿ ಅಸಲು ಭರಿಸಿದಲ್ಲಿ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಹೇಳಿದೆ.ಫೆ.29ರರೊರೊಳಗಾಗಿ ಸುಸ್ತಿಸಾಲಗಾರ ರೈತರು ಈ ಯೋಜನೆಯ ಲಾಭ ಪಡೆಯಲಿ. ಮತ್ತೆ ಹೊಸ ಸಾಲ ಪಡೆಯಲು ಅರ್ಹರಾಗಲಿ ಎಂದು ಕಲಬುರಗಿ- ಯಾದಗಿರಿ ಡಿಸಿಸಿ ಬ್ಯಾಂಕ್ ಅಧಕ್ಷ ಸೋಮಶೇಖರ ಗೋನಾಯಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲದಲ್ಲಿ ಕಂಗೆಟ್ಟಿರುವ ರೈತರಿಗೆ ಈ ಯೋಜನೆ ವರವಾಗಲಿದೆ. ರೈತರು ಈ ಯೋಜನೆಗೆ ಹೆಚ್ಚಿನ ರೀತಿಯಲ್ಲಿ ಸ್ಪಂದಿಸಬೇಕು ಎಂದು ಹೇಳಿದ್ದಾರೆ.ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ 731 ಸುಸ್ತಿದಾರ ರೈತರಿದ್ದಾರೆ. ಇವರಿಂದ ಬ್ಯಾಂಕಿಗೆ ಅಸಲು 34. 38 ಕೋಟಿ ರು, ಬಡ್ಡಿ 30.93 ಕೋಟಿ ರು. ಸೇರಿದಂತೆ ಒಟ್ಟು 65.22 ಕೋಟಿ ರು. ಹಣ ವಸೂಲಾಗಬಕು. 731 ಸುಸ್ತಿ ಪ್ರಕರಣಗಳ ಪೈಕಿ 667 ಪ್ರಕರಣಗಳಲ್ಲಿ ರೈತರ ಮೇಲೆ ದಾವೆ ಹೂಡಲಾಗಿದೆ. ಈ ಪೈಕಿ 60 ಕೋಟಿ ರು. ಅವಾರ್ಡ್ ಆಗಿದೆ. ಇನ್ನೂ 654 ಕೋಟಿ ರು. ಬಾಕಿ ಬರಬೇಕಿದೆ. ಬಡ್ಡಿ ರೂಪದಲ್ಲಿ 50.9 ಕೋಟಿ ರು. ಬಾಕಿ ಸುಸ್ತೀದಾರ ಸಾಲಗಾರರ ರೂಪದಲ್ಲಿ ಬರಬೇಕಿದೆ ಎಂದರು.
ಇನ್ನು ಅಮಲು ಜಾರಿ ಪ್ರಕರಣಗಳಲ್ಲಿ 338 ರಲ್ಲಿ ಜಾರಿ ಮಾಡಲಾಗಿದೆ. ಇರಿಂದ 31. 37 ಕೋಟಿ ರು. ಅಸಲು, 27 ಕೋಟಿ ರು. ಬಡ್ಡಿ ಹಣ ವಸೂಲಾಗಬೇಕಿದೆ. ಶೇ.90ರಷ್ಟು ಪ್ರಕರಣಗಳಲ್ಲಿ ದಾವೆ ಹೂಡಲಾಗಿದೆ. ಹಿಂದೆ ಏಕ ತಿರುವಳಿ ಯೋಜನೆಯಲ್ಲಿ ಬಡ್ಡಿ ತಗ್ಗಿಸಿ ಹಣ ಭರಿಸಿಕೊಳ್ಳುವುದಾಗಿ ಘೋಷಿಸಿದ್ದರೂ ರೈತರು ಸ್ಪಂದಿಸರಿಲ್ಲ. ಜಿಲ್ಲೆಯಲ್ಲಿ ತಾವು ಅಧ್ಯಕ್ಷರಾದ ಮೇಲೆ ಈ ಯೋಜನೆಯಡಿಯಲ್ಲಿ ರೈತರ ಮನ ಒಲಿಸಿ 2 ಕೋಟಿ ರು. ವಸೂಲಿ ಮಾಡಲಾಗಿತ್ತು ಎಂದು ಮಾಹಿತಿ ನೀಡಿದರು.ಬ್ಯಾಂಕಿನ ಹೊಸ ಕಟ್ಟಡಕ್ಕಾಗಿ ರೈತರಿಂದ ಸಂಗ್ರಹಿಸಿದ್ದ 15 ಕೋಟಿ ರು. ಹಣವನ್ನು ಕಳೆದ ಬಾರಿಯ ಆಡಳಿತ ಮಂಡಳಿ ಬೆಳೆ ಸಾಲಕ್ಕೆ ಹಣ ವಿನಿಯೋಗಿಸಿದೆ. ನವು ಅಧ್ಯಕ್ಷರಾಗಿ ಬಂದ ಮೇಲೆ ಹಳೆ ಕಟ್ಟಡವನ್ನೇ ರಿಪೇರಿ ಮಾಡಲಾಗಿದ್ದು ಬಾಡಿಗೆ ಕಟ್ಟಡದಿಂದ ಬ್ಯಾಂಕನ್ನು ಮತ್ತೆ ಹಲೆ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದರು.
ಬ್ಯಾಂಕಿನ ಕಟ್ಟಡಕ್ಕೆ ಕೆಕೆಆರ್‌ಡಿಬಿಗೆ ಹಣ ಕೇಳಿದ್ದೇವೆ. ಸ್ವಸಹಾಯ ಸಂಘಗಳ ತರಬೇತಿ ಕೇಂದ್ರ ಹಾಗೂ ಸಹಕಾರ ಚಳುವಳಿ ಪ್ರೋತ್ಸಾಹಕ್ಕೆ ಹಣ ಕೊಡುವಂತೆ ಅಧ್ಯಕ್ಷ ಅಜಯ್ ಸಿಂಗ್ ಗಮನ ಸೆಳೆಯಲಾಗಿದೆ, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದರು.ಖಾದಿ ಉದ್ಯಮ ಸಮೀತಿಗೆ ಡಿಸಿಸಿ ಬ್ಯಾಂಕು ಸದಸ್ಯತ್ವ ಹೊಂದಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸದಸ್ಯತ್ವ ನಮಗೆ ದೊರಕಿದಲ್ಲಿ ಪ್ರಧಾನ ಮಂತ್ರಿ ಉದ್ಯೋಗ ಯೋಜನೆ, ಉದ್ಯಮ ಶೀಲತೆ ಅಭಿವೃದ್ಧಿ ಯೋಜನಯಡಿಯಲ್ಲಿ ಶೇ. 35 ರಿಯಾಯ್ತಿಯ ಯೋಜನೆಗಳು ಯುವಕರಿಗೆ ಲಭ್ಯವಾಗಲಿವೆ. ಮದ್ಯ, ಮಾಂಸದ ಮಲಿಗೆ ಹೊರತು ಪಡಿಸಿ ಉಳಿದೆಲ್ಲ ವ್ಯವಹಾರಕ್ಕೆ ಈ ಯೋಜನೆಯಲ್ಲಿ ಅವಕಾಶವಿದೆ. ಇನ್ನೇನು 2 ವಾರದಲ್ಲಿ ಈ ಪ್ರಕ್ರಿಯೆ ಮುಗಿದು ಡಿಸಿಸಿ ಬ್ಯಾಂಕಿಗೆ ಸದಸ್ಯತ್ವ ದೊರಕುವ ವಿಶ್ವಾಸ ಗೋನಾಯಕ್ ವ್ಯಕ್ತಪಡಿಸಿದರು.