ಸಾರಾಂಶ
ಇದೇ ಫೆ.26, 27ರಂದು ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಜೇವರ್ಗಿ
ಬರುವ ಫೆ.26, 27ರಂದು ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ 20ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕಿನ ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಸ್.ಕೆ. ಬಿರಾದಾರ ಗೌರವಾಧ್ಯಕ್ಷ ಚನ್ನಮಲ್ಲಯ್ಯ ಹಿರೇಮಠ ತಿಳಿಸಿದ್ದಾರೆ.ಈ ಕುರಿತು ಶುಕ್ರವಾರ ಪಟ್ಟಣದ ಗುರುಕುಲ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ತನ್ನದೇಯಾದ ಐತಿಹಾಸಿಕ ಇತಿಹಾಸ ಹೊಂದಿದ ಕಲಬುರಗಿ ಜಿಲ್ಲೆಯಲ್ಲಿ ಅನೇಕ ಶರಣರು, ಸಂತರು, ದಾರ್ಶನಿಕರು ಭಾಳಿಬೆಳಗಿದ ಪುಣ್ಯ ಭೂಮಿಯಾಗಿದ್ದು, ಸೇಡಂ ತಾಲೂಕಿನ ಮಳಖೇಡದ ರಾಷ್ಟ್ರಕೂಟ ಅರಸ ನೃಪತುಂಗನ ಕವಿರಾಜ ಮಾರ್ಗ ಕನ್ನಡ ಸಾಹಿತ್ಯದ ಮೊದಲ ಲಾಕ್ಷಣೀಕ ಗ್ರಂಥವಾಗಿ ನಾಡಿನ ಹಿರಿಮೆ ಹೆಚ್ಚಿಸಿದೆ. ಸಾಹಿತ್ಯಕ್ಕೆ ತನ್ನದೇಯಾದ ಕೊಡುಗೆ ನೀಡಿದ ಕಲಬುರಗಿ ಜಿಲ್ಲೆ ಹೆಗ್ಗಳಿಗೆ ನಮ್ಮದಾಗಿದೆ ಎಂದರು.ಇದೆ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇಯಾದ ಛಾಪು ಮೂಡಿಸಿದ ಮಹಾತ್ಮ ಗಾಂಧಿಜಿ ರೈತ ಕಲ್ಯಾಣ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಹಾಂತಯ್ಯ ಸಿ. ಹಿರೇಮಠ ಹುಲ್ಲೂರ ಅವರನ್ನು ಸತ್ಕರಿಸಿಗೌರವಿಸಲಾಗುತ್ತಿದೆ. ಸಮಾಜ ಸೇವಕ ಕಲ್ಯಾಣಕುಮಾರ ಸಂಗಾವಿ ಗಂವ್ಹಾರ, ಎಸ್.ಟಿ.ಬಿರೆದಾರ, ಚಂದ್ರಶೇಖರ ತುಂಬಗಿ ಸುದ್ದಿಗೋಷ್ಠಿಯಲ್ಲಿದ್ದರು.