ಸಾರಾಂಶ
ಕಲಬುರಗಿಯಲ್ಲಿರುವ ವಿಟಿಯು ಪ್ರಾದೇಶಿಕ ಕಚೇರಿಯಲ್ಲಿನ ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಕೆಕೆಆರ್‌ಡಿಬಿ ಸದಾಕಾಲ ಬೆಂಬಲ ನೀಡಿದೆ. ವಿದ್ಯಾರ್ಥಿಗಳಲ್ಲಿ ಉದ್ಯಮ ಶೀಲತೆ ಪ್ರವೃತ್ತಿ ಬೆಳೆಸುವಂತಹ ಕೆಲಸಕ್ಕೆ ಸಂಸ್ಥೆ ಮುಂದಾಗಲಿ: ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿಯಲ್ಲಿರುವ ವಿಟಿಯು ಪ್ರಾದೇಶಿಕ ಕಚೇರಿಯಲ್ಲಿನ ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಕೆಕೆಆರ್‌ಡಿಬಿ ಸದಾಕಾಲ ಬೆಂಬಲ ನೀಡಿದೆ. ವಿದ್ಯಾರ್ಥಿಗಳಲ್ಲಿ ಉದ್ಯಮ ಶೀಲತೆ ಪ್ರವೃತ್ತಿ ಬೆಳೆಸುವಂತಹ ಕೆಲಸಕ್ಕೆ ಸಂಸ್ಥೆ ಮುಂದಾಗಲಿ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಹೇಳಿದ್ದಾರೆ.ಇಲ್ಲಿನ ವಿಟಿಯು ಪ್ರಾದೇಶಿಕ ಕಚೇರಿಯಲ್ಲಿ ಆರಂಭವಾಗಿರುವ ಯುಕ್ತಿ- 2024 ತಾಂತ್ರಿಕ- ಸಾಂಸ್ಕೃತಿಕ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಹೊಣೆಗಾರಿಕೆ ಅರಿತು ಯುವಕರು ಮುನ್ನುಗ್ಗಬೇಕಿದೆ. ಹೊಣೆಗಾರಿಕೆಯಿಂದಲೇ ಬದುಕು ಕಟ್ಟಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ವಿಟಿಯು ಕಲಬುರಗಿ ಕಚೇರಿ 5 ಜಿ ಲ್ಯಾಬ್ ಹೊಂದಿರೋದಕ್ಕೆ ಮೆಚ್ಚುಗೆ ಸೂಚಿಸಿದ ಡಾ. ಅಜಯ್ ಸಿಂಗ್ ಇಂತಹ ಶೈಕ್ಷಣಿಕ ಉನ್ನತೀಕರಣದ ಕೆಲಸಗಳಿಗೆ ತಾವು ಸದಾ ಬೆಂಬಲ ನೀಡುವೆ ಎಂದರು.
ಕೆಎಟಿ ಕಲಬುರಗಿ ಪೀಠದ ಸದಸ್ಯ ಡಾ. ರಾಘವೇಂದ್ರ ಔರಾದಕರ್ ಅವರು ಮಾತನಾಡುತ್ತ ನಮ್ಮೊಳಗೆ ಮಹಾಭಾರತವಿದೆ ಎಂದು ಕೃಷ್ಣ, ಅರ್ಜುನ, ಕುಂತಿ, ದ್ರೌಪತಿ, ಧೃತರಾಷ್ಟ್ರರನ್ನೆಲ್ಲ ದೇಹದ ಅನೇಕ ಇಂದ್ರಿಯಗಳಿಗೆ, ಉದ್ದೇಶಗಳಿಗೆ ಹೋಲಿಕೆ ಮಾಡುತ್ತ ಋಣಾತ್ಮಕ ಚಿಂತನೆಯಿಂದ ದೂರವಿರಿ ಎಂದು ಯುವ ಸಮೂಹಕ್ಕೆ ಕರೆ ನೀಡಿದರು.ಸಮಾರಂಭದಲ್ಲಿ ಕೆಕೆಆರ್‌ಡಿಬಿ ಕಾರ್ಯದರ್ಶಿ ಸುಂದರೇಶ ಬಾಬು, ಲುಯಿಟು ಸಿಬ್ಬಂದಿ ಅಧಿಕಾರಿಗಳು, ವಿಟಿಯು ಕಲಬುರಗಿ ಕೇಂದ್ರದ ಸಿಬ್ಬಂದಿ ಇದ್ದರು. ವಿಟಿಯು ಅಡಿಯಲ್ಲಿರುವ ಎಲ್ಲಾ ಕಾಲೇಜುಗಳಿಂದ ನೂರಾರು ವಿದ್ಯಾರ್ಥಿಗಳು 2 ದಿನಗಳ ಹಬ್ಬದಲ್ಲಿ ಪಾಲ್ಗೊಂಡು 5 ಹಂತಗಳಲ್ಲಿ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿಟಿಯು ನಿರ್ದೇಶಕ ಡಾ. ಬಸವರಾಜ ಗಾದಗೆ ಎಲ್ಲರನ್ನು ಸ್ವಾಗತಿಸಿ ವಿಟಿಯು ಪ್ರಗತಿ ಪಥದ ಚಿತ್ರಣ ಮುಂದಿಟ್ಟರು. ಶಿವರಾಮೇಗೌಡರು ಸೇರಿದಂತೆ ಅನೇಕರಿದ್ದರು.