ನಗರದ ಗಾರ್ಮೆಂಟ್ಸ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ನಾಲ್ಕು ತಿಂಗಳ ಹಿಂದೆ (ಮೇ. 20) ನಾಪತ್ತೆಯಾಗಿರುವ ಪ್ರಕರಣ ಇದೀಗ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ.
ಕನ್ನಡಪ್ರಭ ವಾರ್ತೆ ಕಲಬುರಗಿ ನಗರದ ಗಾರ್ಮೆಂಟ್ಸ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ನಾಲ್ಕು ತಿಂಗಳ ಹಿಂದೆ (ಮೇ. 20) ನಾಪತ್ತೆಯಾಗಿರುವ ಪ್ರಕರಣ ಇದೀಗ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ. ಯುವತಿಯನ್ನು ಅದೇ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಜಹಾಂಗೀರ್ ಎಂಬಾತ ಬಾಂಗ್ಲಾದೇಶಕ್ಕೆ ಕರೆದೊಯ್ದು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಕುಟುಂಬದವರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿರುವ ಹೈಕೋರ್ಟ್ ವಿಚಾರಣೆ ಬಳಿಕ ಸೆ.23ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿದೆ ಎಂದು ಕುಟುಂಬದ ಪರ ವಾದ ಮಂಡಿಸಿರುವ ವಕೀಲರು ತಿಳಿಸಿದ್ದಾರೆ. ಹೀಗಾಗಿ ನಾಲ್ಕು ತಿಂಗಳ ಹಿಂದಿನ ಯುವತಿ ನಾಪತ್ತೆ ಪ್ರಕರಣದ ವಿಚಾರಣೆ ಇದೀಗ ಹೊಸ ತಿರುವು ಪಡೆದಂತಾಗಿದೆ.*ಹಿರೇ ನಂದೂರು ತಾಂಡಾದ ನಿವಾಸಿ: ನಾಪತ್ತೆಯಾಗಿರುವ ಯುವತಿಯನ್ನು ಕಲಬುರಗಿ ನಗರದ ಹೀರೆನಂದೂರ್ ಸ್ಟೇಷನ್ ತಾಂಡಾದ ನಿವಾಸಿ ಸುರೇಖಾ ಪವಾರ್ ಎಂದು ಗುರುತಿಸಲಾಗಿದೆ. ಅವರು ನಗರದ ನಂದೂರ್ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ನೆಕ್ಸ್ಟ್ ಜನ್ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮೇ 20ರಂದು ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಂದಿಗೆ ಕೆಲಸಕ್ಕೆ ತೆರಳಿದ ಬಳಿಕ ಮನೆಗೆ ಮರಳಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.ಯುವತಿ ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಗುಲಬರ್ಗ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಯಾಗಿರುವ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ. ನಾಲ್ಕು ತಿಂಗಳಾದರೂ ಯುವತಿ ಪತ್ತೆಯಾಗಿಲ್ಲ. ಈ ಬೆಳವಣಿಗೆ ಪೋಷಕರ ಚಿಂತೆ ಹೆಚ್ಚಿಸಿದೆ.ಪತ್ರದಲ್ಲಿ ಕಿರುಕುಳದ ಆರೋಪ: ಯುವತಿ ಮನೆ ತೊರೆದ ಬಳಿಕ ತಮ್ಮ ಸಹೋದರಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಕುಟುಂಬದವರಿಗೆ ದೊರೆತಿದ್ದು, ಅದರಲ್ಲಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಸಂದರ್ಭ ಎದುರಿಸಿದ ಸಮಸ್ಯೆಗಳ ಕುರಿತು ಕೆಲವು ಆರೋಪಗಳ ಮಾಡಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.ಪತ್ರದಲ್ಲಿ ಕೆಲವು ವ್ಯಕ್ತಿಗಳ ಹೆಸರುಗಳನ್ನು ಉಲ್ಲೇಖಿಸಿ ತಮ್ಮ ಮೇಲೆ ಕಿರುಕುಳ ನೀಡಲಾಗಿದೆ ಎಂದು ಯುವತಿ ಆರೋಪಿಸಿದ್ದಾರೆ. ಅಲ್ಲದೆ, ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಕೆಲವರು ಬಾಂಗ್ಲಾದೇಶದವರು ಎಂದು ಉಲ್ಲೇಖಿಸಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ: ಯುವತಿ ನಾಪತ್ತೆಯಾಗಿರುವುದು ಹಾಗೂ ಕುಟುಂಬದವರಿಗೆ ದೊರೆತಿದೆ ಎನ್ನಲಾದ ಪತ್ರದ ಹಿನ್ನೆಲೆಯಲ್ಲಿ ಆಕೆಯ ಕುಟುಂಬಸ್ಥರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಸಂಬಂಧಪಟ್ಟ ವಾದಗಳನ್ನು ಆಲಿಸಿದ ಬಳಿಕ ಸೆ. 23ಕ್ಕೆ ಆದೇಶ ಕಾಯ್ದಿರಿಸಿದೆ ಎಂದು ಕುಟುಂಬದ ಪರ ವಕೀಲರು ತಿಳಿಸಿದ್ದಾರೆ.ಯುವತಿಯ ಸುರಕ್ಷತೆ ಬಗ್ಗೆ ಆತಂಕ: ಯುವತಿ ಎಲ್ಲಿದ್ದಾಳೆ ? ಅವಳು ಸ್ವಯಂಪ್ರೇರಿತವಾಗಿ ತೆರಳಿದ್ದಾಳೆಯೆ? ಅಥವಾ ಯಾರಾದರೂ ಅವರನ್ನು ಕರೆದೊಯ್ದಿದ್ದಾರೆಯೇ ಎಂಬುದು ಸದರಿ ಪ್ರಕರಣದ ಪ್ರಮುಖ ಪ್ರಶ್ನೆಗಳಾಗಿದ್ದು, ಪೊಲೀಸ್ ತನಿಖೆಯಿಂದಲೇ ಉತ್ತರ ಸಿಗಬೇಕಿದೆ. ಕುಟುಂಬಸ್ಥರು ಯುವತಿಯ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಆಕೆಯನ್ನು ಪತ್ತೆಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ಮನವಿ ಮಾಡಿದ್ದಾರೆ.ಈ ನಡುವೆ ನಾಪತ್ತೆ ಪ್ರಕರಣದ ಪೊಲೀಸ್ ತನಿಖೆ ಹಾಗೂ ಹೈಕೋರ್ಟ್‌ನಲ್ಲಿರುವ ವಿಚಾರಣೆ ಮುಂದುವರಿದಿದೆ. ಸೆ. 23ರಂದು ನ್ಯಾಯಾಲಯ ನೀಡುವ ಆದೇಶದ ಬಳಿಕ ಪ್ರಕರಣದ ಮುಂದಿನ ಬೆಳವಣಿಗೆಗಳು ಸ್ಪಷ್ಟವಾಗುವ ನಿರೀಕ್ಷೆಯಿದೆ.
ಏನಿದು ಹೇಬಿಯಸ್ ಕಾರ್ಪಸ್ ಅರ್ಜಿ?: ಯಾರಾದರೂ ವ್ಯಕ್ತಿಯನ್ನು ಕಾನೂನುಬಾಹಿರವಾಗಿ ಬಂಧನದಲ್ಲಿರಿಸಲಾಗಿದೆ ಅಥವಾ ಅವರ ಇರುವಿಕೆಯ ಬಗ್ಗೆ ಮಾಹಿತಿ ದೊರೆಯುತ್ತಿಲ್ಲ ಎಂಬ ಸಂದರ್ಭ, ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಕೋರಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗುತ್ತದೆ.ಹಿರೇ ನಂದೂರ್ ಕೈಗಾರಿಕಾ ವಸಾಹತುವನಲ್ಲಿರುವ ಗಾರ್ಮೆಂಟ್ ಉದ್ಯಮದಲ್ಲಿ ಸರಿಯಾದ ಮಾಹಿತಿ ಇಟ್ಟಿಲ್ಲ. ಇಲ್ಲಿನ ಕಾರ್ಮಿಕರ ಬಗ್ಗೆ, ಅವರ ಮೂಲದ ಬಗ್ಗೆಯೂ ಮಾಹಿತಿ ಇಲ್ಲ. ಅಗ್ಗದ ದರಕ್ಕೆ ಕೆಲಸಕ್ಕೆ ಸಿಗುತಾರೆಂದು ಅನೇಕರನ್ನು ಹಾಗೇ ಕರೆತರಲಾಗಿದೆ. ಇಲ್ಲೇ ಯುವತಿ ಕೆಲಸಕ್ಕೆ ಹೋದಾಗ ಮೇ. 20ರ ಸಂಜೆ ಕಾಣೆಯಾಗಿದ್ದಾಳೆ. ಆಕೆ ಬಾಂಗ್ದಾದಲ್ಲಿದ್ದಾಳೆಂಬ ಶಂಕೆ ಇದೆ. ತಕ್ಷಣ ಎಲ್ಲಿದ್ದಾಳೆಂದು ಪತ್ತೆಯಾಗಬೇಕು. ಪೊಲೀಸರು ನಮ್ಮ ದೂರಿಗೆ ಸ್ಪಂದಿಸಿ ನ್ಯಾಯ ಕೊಡಬೇಕು ಎಂದು ಯುವತಿ ಚಿಕ್ಕಪ್ಪ ರಾಮಚಂದ್ರ ಪವಾರ್ ಹೇಳಿದರು. ನನ್ನ ಮಗಳು ಮೇ 20 ರ ಸಂಜೆ ಕೆಲಸಕ್ಕೆ ಹೋದವಳು ಮನೆಗೇ ಬಂದೇ ಇಲ್ಲ. ನಾವು ಎಲ್ಲ ಕಡೆ ಹುಡುಕಿದ್ದೇವೆ. ನನಗೆ ನನ್ನ ಮಗಳು ಬೇಕು. ಪೊಲೀಸರು ಹುಡುಕಿ ತಂದು ಕೊಡಬೇಕು. ಫೋನ್ ಮಾಡಿದ್ದಾಳೆ, ಆದರೆ ಆಕೆಗೆ ಒತ್ತಾಯದಿಂದ ಕರೆದೊಯ್ಯಲಾಗಿದೆ. ನಮ್ಮ ಆತಂಕ ಹೆಚ್ಚಿದೆ. ಪೊಲೀಸರು ಮಗಳನ್ನು ಹುಡುಕಿ ಕೊಡಲಿ ಎಂದು ಯುವತಿ ತಾಯಿ ಲಲಿತಾಬಾಯಿ ಪವಾರ್ ಒತ್ತಾಯಿಸಿದರು. ನನ್ನ ಮಗಳು ಮೇ 20 ರ ಸಂಜೆ ಕೆಲಸಕ್ಕೆ ಹೋದವಳು ಮನೆಗೇ ಬಂದೇ ಇಲ್ಲ. ನಾವು ಎಲ್ಲ ಕಡೆ ಹುಡುಕಿದ್ದೇವೆ. ನನಗೆ ನನ್ನ ಮಗಳು ಬೇಕು. ಪೊಲೀಸರು ಹುಡುಕಿ ತಂದು ಕೊಡಬೇಕು. ಫೋನ್ ಮಾಡಿದ್ದಾಳೆ, ಆದರೆ ಆಕೆಗೆ ಒತ್ತಾಯದಿಂದ ಕರೆದೊಯ್ಯಲಾಗಿದೆ. ನಮ್ಮ ಆತಂಕ ಹೆಚ್ಚಿದೆ. ಪೊಲೀಸರು ಮಗಳನ್ನು ಹುಡುಕಿ ಕೊಡಲಿ ಎಂದು ಯುವತಿ ತಾಯಿ ಲಲಿತಾಬಾಯಿ ಪವಾರ್ ಒತ್ತಾಯಿಸಿದರು.