ಕಲಬುರಗಿಯಲ್ಲಿ ಅಕ್ಕಸಾಲಿಗನಾಗಿ ಕೆಲಸ ಮಾಡುತ್ತಿದ್ದ ಬಂಧಿತ ಶಂಕಿತ ಉಗ್ರ ಮಮ್ತಾಜ್ ಮಲಿಕ್ ಪಾಕಿಸ್ತಾನದ ಉಗ್ರ ಸಂಘಟನೆ ಲಷ್ಕರ್-ಎ- ತೊಯ್ಬಾದ ವಾಟ್ಸಾಪ್ ಗ್ರೂಪ್‌ನಲ್ಲಿ ಸಕ್ರಿಯನಾಗಿದ್ದ ಎಂಬ ಸಂಗತಿ ಪ್ರಾಥಮಿಕ ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿದೆ.
ಕಲಬುರಗಿ : ಕಲಬುರಗಿಯಲ್ಲಿ ಅಕ್ಕಸಾಲಿಗನಾಗಿ ಕೆಲಸ ಮಾಡುತ್ತಿದ್ದ ಬಂಧಿತ ಶಂಕಿತ ಉಗ್ರ ಮಮ್ತಾಜ್ ಮಲಿಕ್ ಪಾಕಿಸ್ತಾನದ ಉಗ್ರ ಸಂಘಟನೆ ಲಷ್ಕರ್-ಎ- ತೊಯ್ಬಾದ ವಾಟ್ಸಾಪ್ ಗ್ರೂಪ್‌ನಲ್ಲಿ ಸಕ್ರಿಯನಾಗಿದ್ದ ಎಂಬ ಸಂಗತಿ ಪ್ರಾಥಮಿಕ ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿದೆ. ಮಮ್ತಾಜ್ ಮಲೀಕ್‌ನ ಮೊಬೈಲ್ ಪರಿಶೀಲನೆ ನಡೆಸಿರುವ ಪೊಲೀಸರು ಈತ ಇಮಾಮ್ ಮೇಂದಿ ಹಾಗೂ ಉರ್ದು ಭಾಷೆಯ ವಾಟ್ಸಾಪ್ ಗ್ರೂಪ್ ಸದಸ್ಯನಾಗಿರುವುದನ್ನು ಪತ್ತೆ ಹಚ್ಚಿದ್ದಾರೆ.
ವಾಟ್ಸಾಪ್ ಗ್ರೂಪ್‌ಗೆ ಮಮ್ತಾಜ್‌ನನ್ನು ಸೇರಿಸಿದ್ದ
ಪಾಕಿಸ್ತಾನದ ಜೈನುಲ್ ಅಬಿದಿನ್ ಎಂಬಾತ ವಾಟ್ಸಾಪ್ ಗ್ರೂಪ್‌ಗೆ ಮಮ್ತಾಜ್‌ನನ್ನು ಸೇರಿಸಿದ್ದನೆಂದು ಹೇಳಲಾಗಿದೆ.
ಈ ಜೈನುಲ್ ಅಬಿದಿನ್ ಪಾಕಿಸ್ತಾನದ ಲಷ್ಕರ್ ಸಂಘಟನೆಯ ಕಮಾಂಡರ್ ಆಗಿ ಕೆಲಸ ಮಾಡುತ್ತಿದ್ದಾನೆಂಬುದು ಮಮ್ತಾಜ್ ತನಿಖೆ ವೇಳೆ ಬಾಯಿಬಿಟ್ಟಿದ್ದಾನೆಂದು ಗೊತ್ತಾಗಿದೆ.
ಕಾಶ್ಮೀರಿ ಟೈಗರ್ 313, I love Pakistan I love Kashmir, major_iqbal_isi (head commander of LET) ಎಂಬ ಐಡಿಗಳು ಮಾತ್ರವಲ್ಲದೆ ಪಾಕಿಸ್ತಾನದ ಧ್ವಜ ಇರುವ ಇನ್‌ಸ್ಟಾಗ್ರಾಂ ಐಡಿಗಳನ್ನು ಫಾಲೋ ಮಾಡುತ್ತಿದ್ದ. ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಡಿಯೋ, ರೀಲ್ಸ್‌ಗಳನ್ನು ಲೈಕ್ ಮಾಡುತ್ತಿದ್ದನೆಂಬ ಸಂಗತಿ ತನಿಖೆಯಲ್ಲಿ ಬಯಲಾಗಿದೆ.
ಮಮ್ತಾಜ್ ಮಲಿಕ್ ಮೊಬೈಲ್‌ನಲ್ಲಿರುವ ಕೆಲವು ಫೋಟೊ ಮತ್ತು ವಿಡಿಯೋಗಳನ್ನು ವಶಪಡಿಸಿಕೊಂಡ ಪೊಲೀಸರು ಚೌಕ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸುಶೀಲ್ ಕುಮಾರ್ ದೂರಿನ ಅನ್ವಯ ಈತನ ವಿರುದ್ಧ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಲಷ್ಕರ್ ವಾಟ್ಸಾಪ್‌ನಲ್ಲಿದ್ದ ಕಲಬುರಗಿ ಶಂಕಿತ ಉಗ್ರ!
- ಲಷ್ಕರ್ ಕಮಾಂಡರಿಂದ ಗ್ರೂಪ್‌ಗೆ ಆ್ಯಡ್ - ಉಗ್ರರ ಗ್ರೂಪ್ ಹಿಂಬಾಲಿಸ್ತಿದ್ದ ಮಮ್ತಾಜ್
- ಕಲಬುರಗಿಯಲ್ಲಿ ಅಕ್ಕಸಾಲಿಗನಾಗಿ ಕೆಲಸ ಮಾಡುತ್ತಿದ್ದ ಮಮ್ತಾಜ್ ಮಲಿಕ್
- ಪಾಕಿಸ್ತಾನದ ಉಗ್ರ ಸಂಘಟನೆ ಜತೆ ನಂಟು ಹೊಂದಿದ್ದ ಕಾರಣ ಬಂಧನ
- ಇದೀಗ ಆತನ ಮೊಬೈಲ್ ಪರಿಶೀಲನೆ ವೇಳೆ ಹಲವು ಅಂಶಗಳು ಬೆಳಕಿಗೆ
- ಆತ ಪಾಕ್ ಉಗ್ರರ ವಾಟ್ಸಾಪ್ ಗ್ರೂಪ್‌ನಲ್ಲಿರುವುದು ತನಿಖೆ ವೇಳೆ ಪತ್ತೆ

