ಸಾರಾಂಶ
ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಬ್ಲ್ಯಾಕ್‌ಔಟ್ ಎಂಬ ಕನ್ನಡ ನಾಟಕವನ್ನು ಬೆಂಗಳೂರಿನ ರಂಗಸಿರಿ ಪ್ರೊಡಕ್ಷನ್ ತಂಡವು ಎಸ್. ಸಂದೀಪ್‌ಪೈ ನಿರ್ದೇಶನದಲ್ಲಿ ಪ್ರಸ್ತುತಪಡಿಸಿತು. ಭೂಮಿಗೀತಾದಲ್ಲಿ ಕೊಲ್ಕತ್ತಾದ ಠಾಕುರ್ಪುಕುರ್‌ಇಚ್ಚೆಮೊಟೊ ತಂಡವು ಸೌರ್‌ಪಲೋಧಿ ನಿರ್ದೇಶನದಲ್ಲಿ ಕಿಟ್ಟನ್‌ಖೋಲಾ ಎಂಬ ಬಂಗಾಳಿ ನಾಟಕವನ್ನು ಪ್ರಸ್ತುತಪಿಡಿಸಿದರು.
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನ ರಂಗಾಯಣವು ಆಯೋಜಿಸಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಭಾನುವಾರ ಸಂಜೆ ವೈವಿಧ್ಯಮಯ ನಾಟಕಗಳು ಪ್ರದರ್ಶನವಾಯಿತು. ಈ ನಾಟಕಗಳನ್ನು ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು.ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಬ್ಲ್ಯಾಕ್‌ಔಟ್ ಎಂಬ ಕನ್ನಡ ನಾಟಕವನ್ನು ಬೆಂಗಳೂರಿನ ರಂಗಸಿರಿ ಪ್ರೊಡಕ್ಷನ್ ತಂಡವು ಎಸ್. ಸಂದೀಪ್‌ಪೈ ನಿರ್ದೇಶನದಲ್ಲಿ ಪ್ರಸ್ತುತಪಡಿಸಿತು. ಭೂಮಿಗೀತಾದಲ್ಲಿ ಕೊಲ್ಕತ್ತಾದ ಠಾಕುರ್ಪುಕುರ್‌ಇಚ್ಚೆಮೊಟೊ ತಂಡವು ಸೌರ್‌ಪಲೋಧಿ ನಿರ್ದೇಶನದಲ್ಲಿ ಕಿಟ್ಟನ್‌ಖೋಲಾ ಎಂಬ ಬಂಗಾಳಿ ನಾಟಕವನ್ನು ಪ್ರಸ್ತುತಪಿಡಿಸಿದರು.
ವನರಂಗದಲ್ಲಿ ಬೆಂಗಳೂರಿನ ಸಮುದಾಯ ತಂಡವು ನಿರಂಜನ ಖಾಲಿಕೊಡ ನಿರ್ದೇಶನದಲ್ಲಿ ಕರಿಯ ದೇವರ ಹುಡುಕಿ ಎಂಬ ಕನ್ನಡ ನಾಟಕವನ್ನು ಪ್ರದರ್ಶಿಸಿದರು. ಕಲಾಮಂದಿರದಲ್ಲಿ ಕೇರಳದ ಲಿಟಲ್‌ಅರ್ಥ್‌ಸ್ಕೂಲ್‌ಆಫ್‌ಥಿಯೇಟರ್ ತಂಡದವರು ಅರುಣ್‌ಲಾಲ್ ನಿರ್ದೇಶನದಲ್ಲಿ ಚಿಲ್ಲರ ಸಮರಂ ಎಂಬ ಮಲಯಾಳಂ ನಾಟಕವನ್ನು ಪ್ರದರ್ಶಿಸಿದರು.ಇನ್ನೂ ಕಿಂದರಿಜೋಗಿ ವೇದಿಕೆಯಲ್ಲಿ ಉಡುಪಿ ಪಾಂಬೂರಿನ ಬಾಬು ಕೊರಗ ಮತ್ತು ತಂಡದವರು ಕೊರಗನ ಡೋಲು, ಚಾಮರಾಜನಗರ ರಾಮಸಮುದ್ರದ ರಾಜಶೇಖರ ಮತ್ತು ತಂಡದವರು ಗೊರವರ ಕುಣಿತ ಪ್ರಸ್ತುತಪಡಿಸಿದರು.