ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುವನ್ಯಜೀವಿಗಳ ನಾನಾ ಭಂಗಿಯನ್ನು ತಮ್ಮ ಕ್ಯಾಮರಾಮೂಲಕ ಸೆರೆ ಹಿಡಿದ ಹಿರಿಯ ಛಾಯಾಗ್ರಾಹಕ ಎಸ್. ರಾಮಪ್ರಸಾದ್ ಅವರು ಬೆರಗುಕಾರಿ 3ಡಿ ಛಾಯಾಚಿತ್ರ ಕಲಾಕೃತಿಗಳ ಪ್ರದರ್ಶನವು ನಗರದ ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ನಡೆಯಿತು.ವಿಶೇಷ ಬಗೆಯ ಛಾಯಾಚಿತ್ರಗಳಿಗೆ 3ಡಿ ಸ್ಪರ್ಶ ನೀಡಲಾಗಿತ್ತು. 3ಡಿ ಕನ್ನಡಕ ಧರಿಸಿ ನೋಡಿದಾಗ ಆ ಛಾಯಾಚಿತ್ರದ ಆಕರ್ಷಣೆ ಮತ್ತು ಬೆರಗು ಮನೋಹರವಾಗಿತ್ತು.ಸೀಳು ನಾಯಿಗಳ ಸೀಳು ನೋಟದ ಭಯಾನಕ ದೃಶ್ಯದ ಜತೆಗೆ ತನ್ನ ಮರಿಗಳಿಗೆ ಗುಟುಕು ನೀಡುತ್ತಿರುವ ಪಕ್ಷಿಗಳ ಪ್ರೀತಿ, ತನ್ನ ಕೊಕ್ಕಿನಿಂದ ಮೀನನ್ನು ಸೆರೆ ಹಿಡಿದ ಮಿಂಚುಳ್ಳಿ, ಕಾದಾಟದಲ್ಲಿ ತೊಡಗಿರುವ ಆನೆಗಳ ಕಾಳಗದ ದೃಶ್ಯಗಳನ್ನು ರಾಮಪ್ರಸಾದ್ಅವರು ತಮ್ಮದೇ ಭಂಗಿಯ ಮೂಲಕ ಸೆರೆ ಹಿಡಿದಿದ್ದಾರೆ.ಸಾಮಾನ್ಯವಾಗಿ ಛಾಯಾಗ್ರಹಕರಣ ಸಣ್ಣ, ಪುಟ್ಟ ಪ್ರಾಣಿಗಳು ಮತ್ತು ಕೀಟಗಳ ಮೇಲೆ ದೃಷ್ಟಿ ಹರಿಸುವುದು ಅಪರೂಪ. ಆದರೆ ರಾಮಪ್ರಸಾದ್ಅವರು ಜೇಡನ ಮೇಲೆ ತಮ್ಮ ದೃಷ್ಟಿಯನ್ನಿಟ್ಟಿದ್ದಾರೆ. ಅಂತೆಯೇ ಹುಲಿಯ ನಾನಾ ಭಂಗಿಯ ಛಾಯಾಚಿತ್ರಗಳು ಭಯ ಮತ್ತು ವಿಸ್ಮಯವನ್ನು ಮೂಡಿಸುತ್ತವೆ.ಇದರ ಜತೆಗೆ ಕಾಡೆಮ್ಮೆ, ಚಿರತೆ, ಕಡವೆ, ಸಾರಂಗ, ಕುದುರೆ ಮತ್ತು ಆನೆಗಳ ಬಗೆ ಬಗೆಯ ಫೋಟೋಗಳು ಲಭ್ಯವಿದೆ. ಮೈಸೂರಿನ ಅರಸರ ಪ್ರತಿಮೆಗಳು, ಮಹಿಷಾಸುರ, ನಂದಿ ಸೇರಿದಂತೆ ಅನೇಕ ಬಗೆಯ ಛಾಯಾಚಿತ್ರಗಳು ಇಲ್ಲಿ ಸಿಗುತ್ತವೆ. ಈ ಎಲ್ಲಾ ಚಿತ್ರಗಳಿಗೂ 3ಡಿ ಸ್ಪರ್ಶ ನೀಡಲಾಗಿದೆ.ಈ ಛಾಯಾಚಿತ್ರ ಪ್ರದರ್ಶನವು ಬೆಳಗ್ಗೆ 9.30 ರಿಂದ ಮಧ್ಯಾಹ್ನ 2 ಮತ್ತು ಸಂಜೆ 4 ರಿಂದ ರಾತ್ರಿ 9 ಗಂಟೆಯವರೆಗೆ ಇರುತ್ತದೆ.