ರಜಾ ದಿನಗಳಲ್ಲಿ ಮಕ್ಕಳಿಗೆ ಕೌಶಲ್ಯ ತರಬೇತಿ ನೀಡಬೇಕು- ಚಕ್ರವರ್ತಿ ಸೂಲಿಬೆಲೆ ಸಲಹೆ

| Published : Jan 03 2025, 12:32 AM IST

ರಜಾ ದಿನಗಳಲ್ಲಿ ಮಕ್ಕಳಿಗೆ ಕೌಶಲ್ಯ ತರಬೇತಿ ನೀಡಬೇಕು- ಚಕ್ರವರ್ತಿ ಸೂಲಿಬೆಲೆ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲೆಗಳಲ್ಲಿ ಹತ್ತು ವರ್ಷದ ಹಿಂದೆ ಓದುತ್ತಿದ್ದ ವಿದ್ಯಾರ್ಥಿ ಈಗ ಏನು ಮಾಡುತ್ತಿದ್ದಾನೆ ಎಂಬ ವರದಿ ಸಿದ್ಧಪಡಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರುಬೇಸಿಗೆ ಮತ್ತು ಇತರ ರಜಾ ದಿನಗಳಲ್ಲಿ ಮಕ್ಕಳಿಗೆ ಪಠ್ಯದ ಹೊರೆಯನ್ನು ನೀಡದೆ ಕೌಶಲ್ಯ ತರಬೇತಿ ನೀಡಬೇಕು ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.ನಗರದ ಕಲಾಮಂದಿರದಲ್ಲಿ ಗುರುವಾರ ಸದ್ವಿದ್ಯಾ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರೌಢಶಾಲೆ ವತಿಯಿಂದ ಆಯೋಜಿಸಿದ್ದ 51ನೇ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ಶಾಲೆಗಳಲ್ಲಿ ಹತ್ತು ವರ್ಷದ ಹಿಂದೆ ಓದುತ್ತಿದ್ದ ವಿದ್ಯಾರ್ಥಿ ಈಗ ಏನು ಮಾಡುತ್ತಿದ್ದಾನೆ ಎಂಬ ವರದಿ ಸಿದ್ಧಪಡಿಸಬೇಕು. ಆ ಕೆಲಸವನ್ನು ಯಾವುದೇ ಶಿಕ್ಷಣ ಸಂಸ್ಥೆಯೂ ಮಾಡುತ್ತಿಲ್ಲ. ಎಲ್ಲಾ ಶಾಲೆಗಳಲ್ಲಿ ವಾರ್ಷಿಕ ಶಾಲಾ ವರದಿಯನ್ನು ಮಾತ್ರ ನೋಡುತ್ತಾರೆ. ಅದನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು ಎಂದರು.ಮಕ್ಕಳಿಗೆ ನೀಡುವ ಬೇಸಿಗೆ, ದಸರಾ ಸೇರಿದಂತೆ ಇತರೆ ರಜಾ ದಿನಗಳಲ್ಲಿ ಅವರಿಗೆ ಮತ್ತೆ ಪಠ್ಯದ ಹೊರೆ ಹೊರೆಸಬಾರದು. ಅದರ ಬದಲು ಇಂದಿನ ಕಾಲಕ್ಕೆ ತಕ್ಕಂತೆ ಅವರಿಗೆ ಜೀವನ ಕೌಶಲ್ಯ ತರಬೇತಿ ನೀಡಬೇಕು. ಇದರಿಂದ ಅವರ ಜೀವನ ಶೈಲಿ ಬದಲಾಗುತ್ತದೆ ಎಂದು ಅವರು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಪ್ರಸ್ತುತ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೀಗೆ ಬೆಸ್ಟ್ ಅವಾರ್ಡ್ ನೀಡಿ ಪ್ರೋತ್ಸಾಹಿಸಲಾಯಿತು.ಬಳಿಕ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಮೈಸೂರು ರಾಜ್ಯದ ಇತಿಹಾಸ, ಸಂಸ್ಕೃತಿ, ರಾಜರ ಪರಂಪರೆ ಮತ್ತು ಅವರ ಕೊಡುಗೆಯನ್ನು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ಈ ವೇಳೆ ಸಂಸ್ಥೆಯ ಗೌರವಾಧ್ಯಕ್ಷ ಪ್ರೊ.ಎಂ.ಕೆ. ನರಹರಿ ಬಾಬು, ಗೌರವ ಕಾರ್ಯದರ್ಶಿ ಎಂ.ಡಿ. ಗೋಪಿನಾಥ್, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಪ್ರೌಢಶಾಲಾ ಮುಖ್ಯೋಪಾಧ್ಯಯ ರಾಮಚಂದ್ರಭಟ್, ಎಸ್, ಬಾಲಜಿ, ಡಾ. ನಳಿನಿ ಚಂದ್ರ ಇದ್ದರು.

----------------eom/mys/dnm/