ಕಲ್ಲಪ್ಪ ಫಕೀರಪ್ಪ ಪಡಿಶ್ಯಾವಿಗೆ ಜನಪದ ವೈದ್ಯ ಸಿರಿ ಪ್ರಶಸ್ತಿ ಪ್ರದಾನ

| Published : Dec 13 2023, 01:00 AM IST

ಕಲ್ಲಪ್ಪ ಫಕೀರಪ್ಪ ಪಡಿಶ್ಯಾವಿಗೆ ಜನಪದ ವೈದ್ಯ ಸಿರಿ ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಉದ್ಯಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಜಾನಪದ ವೈದ್ಯಕೀಯ ಸಂಶೋಧನಾ ಕೇಂದ್ರದ ವತಿಯಿಂದ ಪ್ರತೀವರ್ಷ ನೀಡುವ ರಾಜ್ಯಮಟ್ಟದ ‘ಜನಪದ ವೈದ್ಯ ಸಿರಿ ಪ್ರಶಸ್ತಿ’ಯನ್ನು ಈ ಬಾರಿ ಧಾರವಾಡ ಜಿಲ್ಲೆಯ ಜಾನಪದ ವೈದ್ಯ ಕಲ್ಲಪ್ಪ ಫಕೀರಪ್ಪ ಪಡಿಶ್ಯಾವಿಗೆ ಅವರಿಗೆ ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಸನ್ಮಾನಿತರಾದ ಕಲ್ಲಪ್ಪ ಅವರು ಹರ್ಷವ್ಯಕ್ತಪಡಿಸಿ, ಆಯುರ್ವೇದ ಔಷಧಿಗೆ ಹೆಚ್ಚಿನ ಬೇಡಿಕೆ ಬರುವುದರಿಂದ, ಆಯುರ್ವೇದದಲ್ಲಿ ಅಪಾರ ನಂಬಿಕೆ ಇಡಬೇಕಾಗಿ ವಿದ್ಯಾರ್ಥಿಗಳಿಗೆ ಕಿವಿಮಾತು ನುಡಿದರು.

ಮುಖ್ಯ ಅತಿಥಿಗಳಾಗಿ ಮೈಸೂರು ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಸತ್ಯನಾರಾಯಣ ಭಟ್ ಕಲ್ಲಪ್ಪ ಅವರನ್ನು ಗೌರವಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ಎಸ್., ನಿವೃತ್ತ ಪ್ರಾಂಶುಪಾಲ ಡಾ.ಕೆ.ಆರ್. ರಾಮಚಂದ್ರ, ನಿವೃತ್ತ ಪ್ರಾಧ್ಯಾಪಕ ಡಾ.ಜಿ.ಎಂ. ಕಂಠಿ, ಆಡಳಿತ ವಿಭಾಗ ಮುಖ್ಯಸ್ಥ ಡಾ. ವೀರಕುಮಾರ ಕೆ., ಶೈಕ್ಷಣಿಕ ವಿಭಾಗದ ಮುಖ್ಯಸ್ಥೆ ಡಾ. ಶ್ರೀಲತಾ ಕಾಮತ್, ಸ್ನಾತಕೋತ್ತರ ವಿಭಾಗದ ಡೀನ್ ಡಾ. ಅಶೋಕ್ ಕುಮಾರ್ ಬಿ.ಎನ್., ಸ್ನಾತಕ ವಿಭಾಗದ ಡೀನ್ ಡಾ. ರಜನೀಶ್ ವಿ. ಗಿರಿ ಉಪಸ್ಥಿತರಿದ್ದರು.

ಜನಪದ ವೈದ್ಯಕೀಯ ಸಂಶೋಧನಾ ಕೇಂದ್ರದ ಮುಖ್ಯಸ್ಥಾ ಡಾ.ರವಿಕೃಷ್ಣ ಎಸ್. ಸ್ವಾಗತಿದರು. ಸದಸ್ಯ ಡಾ. ರವಿ ಕೆ.ವಿ. ಅವರು ವೈದ್ಯರನ್ನು ಪರಿಚಯಿಸಿದರು. ಡಾ. ಅರ್ಹಂತ್ ಕುಮಾರ್ ಸನ್ಮಾನ ಪತ್ರ ವಾಚಿಸಿದರು.

೮೦ ವರ್ಷ ಪ್ರಾಯದ ಕಲ್ಲಪ್ಪ ಅವರು ಸುಮಾರು ೬೦ ವರ್ಷದ ಅನುಭವದೊಂದಿಗೆ ಮೂಲವ್ಯಾಧಿ, ಚರ್ಮರೋಗ, ಸ್ತ್ರೀಯರ ರೋಗಗಳು, ದುರ್ಬಲತೆ ಮುಂತಾದ ಅನೇಕ ರೋಗಗಳಿಗೆ ಸೂಕ್ತವಾಗಿ ತಾವೇ ತಯಾರಿಸಿದ ಔಷಧಿಗಳ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ.