ಆದಿಚುಂಚನಗಿರಿ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ದೇಗುಲ ಲೋಕಾರ್ಪಣೆ ಬಸವಣ್ಣನ ಗೋಪುರ ಮಹಾ ಕುಂಭಾಭಿಷೇಕ ಮಹೋತ್ಸವ ನಡೆಯಲಿದೆ. ದೇಗುಲ ಜೀರ್ಣೋದ್ಧಾರ ಗ್ರಾಮಸ್ಥರ ಶ್ರಮ ಹಾಗೂ ಸಹಕಾರದಿಂದ 7 ವರ್ಷಗಳಿಂದ ನಡೆದಿರುವ ಕಾಮಗಾರಿಗೆ ಅಂದಾಜು 1 ಕೋಟಿ 10 ಲಕ್ಷ ರೂ ವೆಚ್ಚವಾಗಿದೆ. ಜನವರಿ 27ರ ಮಂಗಳವಾರ ಸಂಜೆ 4:30ಕ್ಕೆ ಶ್ರೀ ಮುತ್ತುರಾಯಸ್ವಾಮಿ, ಶ್ರೀ ಚೆಲುವರಾಯಸ್ವಾಮಿ ಉತ್ಸವದೊಂದಿಗೆ ಗಂಗಾ ಪೂಜೆ, ಗಣಪತಿ ಪೂಜೆ, ಗೋಪೂಜೆ,108 ಕುಂಭಗಳ ಸಹಿತ ಮಂಗಳವಾದ್ಯದೊಂದಿಗೆ ಮೆರವಣಿಗೆ ಗಣಪತಿ ಹೋಮ, ಪೂರ್ಣಾಹುತಿ ಶ್ರೀ ಬಸವಣ್ಣನವರ ಪೀಠ ಪ್ರತಿಷ್ಠಾಪನೆ ಮಹಾಮಂಗಳಾರತಿ ನಡೆಯಲಿದೆ.
ಬಾಗೂರು: ಹೋಬಳಿಯ ಕಲ್ಲೇಸೋಮನಹಳ್ಳಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ಸ್ವಾಮಿ ದೇಗುಲ ಲೋಕಾರ್ಪಣೆ ಕಾರ್ಯಕ್ರಮ ಜನವರಿ 27, 28, 29ರ ಗುರುವಾರದವರೆಗೆ ನಡೆಯಲಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಕೆ.ಎನ್. ಭಾರತೀಶ್ ಹಾಗೂ ಬಸವೇಶ್ವರ ಸಂಘದ ಉಪಾಧ್ಯಕ್ಷ ಪಟೇಲ್ ರಂಗೇಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದಿಚುಂಚನಗಿರಿ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ದೇಗುಲ ಲೋಕಾರ್ಪಣೆ ಬಸವಣ್ಣನ ಗೋಪುರ ಮಹಾ ಕುಂಭಾಭಿಷೇಕ ಮಹೋತ್ಸವ ನಡೆಯಲಿದೆ. ದೇಗುಲ ಜೀರ್ಣೋದ್ಧಾರ ಗ್ರಾಮಸ್ಥರ ಶ್ರಮ ಹಾಗೂ ಸಹಕಾರದಿಂದ 7 ವರ್ಷಗಳಿಂದ ನಡೆದಿರುವ ಕಾಮಗಾರಿಗೆ ಅಂದಾಜು 1 ಕೋಟಿ 10 ಲಕ್ಷ ರೂ ವೆಚ್ಚವಾಗಿದೆ. ಜನವರಿ 27ರ ಮಂಗಳವಾರ ಸಂಜೆ 4:30ಕ್ಕೆ ಶ್ರೀ ಮುತ್ತುರಾಯಸ್ವಾಮಿ, ಶ್ರೀ ಚೆಲುವರಾಯಸ್ವಾಮಿ ಉತ್ಸವದೊಂದಿಗೆ ಗಂಗಾ ಪೂಜೆ, ಗಣಪತಿ ಪೂಜೆ, ಗೋಪೂಜೆ,108 ಕುಂಭಗಳ ಸಹಿತ ಮಂಗಳವಾದ್ಯದೊಂದಿಗೆ ಮೆರವಣಿಗೆ ಗಣಪತಿ ಹೋಮ, ಪೂರ್ಣಾಹುತಿ ಶ್ರೀ ಬಸವಣ್ಣನವರ ಪೀಠ ಪ್ರತಿಷ್ಠಾಪನೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗವಾಗಲಿದೆ. 28ರ ಬುಧವಾರ ಬೆಳಗ್ಗೆ ಶ್ರೀ ಬಸವೇಶ್ವರ ಸ್ವಾಮಿಯವರಿಗೆ ರುದ್ರಾಭಿಷೇಕ, ಪ್ರಧಾನ ಬಸವೇಶ್ವರ ಕಳಸರಾದನೆ ಬೆಳಿಗ್ಗೆ 11 ಗಂಟೆಗೆ ಕವನಪುರ ಬಸವಣ್ಣನವರ ಆಗಮನ 12 ಗಂಟೆಗೆ ಮಹಾಮಂಗಳಾರತಿ ಸಂಜೆ ಗೋಧೂಳಿ ಲಗ್ನದಲ್ಲಿ ಗಣ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಸುದರ್ಶನ ಹೋಮ ನೆರವೇರುವುದು. 28ರ ಗುರುವಾರ ಬೆಳಿಗ್ಗೆ ಬ್ರಾಹ್ಮಿ ಲಗ್ನದಲ್ಲಿ ಶ್ರೀ ಬಸವೇಶ್ವರ ಸ್ವಾಮಿಗೆ ಪ್ರಾಣ ಪ್ರತಿಷ್ಠಾಪನೆ, ದೃಷ್ಟಿ ಪೂಜೆ, ಬಸವೇಶ್ವರ ಸ್ವಾಮಿಗೆ ವಿಶೇಷ ರುದ್ರಾಭಿಷೇಕ ಹೂವಿನ ಅಲಂಕಾರ ಮಹಾ ರುದ್ರ ಹೋಮ, 10 ಗಂಟೆಗೆ ಪೂರ್ಣಾಹುತಿ ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗವಾಗಲಿದೆ.ಧಾರ್ಮಿಕ ಸಮಾರಂಭ 12 ಗಂಟೆಗೆ ಮಾಜಿ ಪ್ರಧಾನಿ ರಾಜ್ಯಸಭಾ ಸದಸ್ಯರು ಎಚ್. ಡಿ. ದೇವೇಗೌಡರು, ಧರ್ಮಸ್ಥಳದ ಧರ್ಮಾಧಿಕಾರಿ ಡಾಕ್ಟರ್ ವೀರೇಂದ್ರ ಹೆಗಡೆ, ಕೆರಗೋಡಿ ರಂಗಾಪುರ ಮಠದ ಶ್ರೀ ಗುರು ಪರದೇಶಿಕೇಂದ್ರ ಮಹಾಸ್ವಾಮಿಜಿ, ಕಾಡು ಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿ ಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ, ಹಾಸನದ ಆದಿಚುಂಚನಗಿರಿ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ನುಗ್ಗೇಹಳ್ಳಿ ಮಠದ ಶ್ರೀ ಮಹೇಶ್ವರ ಸ್ವಾಮೀಜಿ, ಕಬ್ಬಳಿ ಮಠದ ಶ್ರೀ ಶಿವಪುತ್ರ ಸ್ವಾಮೀಜಿ, ಮೇಳೆಯಮ್ಮ ಆದ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿ, ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್. ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ, ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ, ಲೋಕಸಭಾ ಸದಸ್ಯ ಸಿ.ಎನ್. ಮಂಜುನಾಥ್, ಶಾಸಕ ಸಿ.ಎನ್. ಬಾಲಕೃಷ್ಣ, ಸಂಸದ ಶ್ರೇಯಸ್ ಎಂ ಪಟೇಲ್, ವಿಧಾನ ಪರಿಷತ್ ಮಾಜಿ ಸದಸ್ಯ ಎಂ. ಎ. ಗೋಪಾಲಸ್ವಾಮಿ, ಶಾಸಕರುಗಳಾದ ಕೆ.ಎಂ. ಶಿವಲಿಂಗೇಗೌಡ, ಎಚ್. ಡಿ. ರೇವಣ್ಣ, ಸೂರಜ್ ರೇವಣ್ಣ, ಮಾಜಿ ಶಾಸಕ ಸಿ. ಎಸ್. ಪುಟ್ಟೇಗೌಡ, ವಿದ್ಯುತ್ ಕಾರ್ಖಾನೆ ನಿಗಮದ ಅಧ್ಯಕ್ಷ ಲಲಿತ್ ರಾಘವ್, ರಾಜ್ಯ ಸಹಕಾರ ಮಹಾಮಂಡಲ ನಿರ್ದೇಶಕ ಪುಟ್ಟಸ್ವಾಮಿಗೌಡ, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಉದ್ಯಮಿ ಬಿ.ಕೆ. ನಾಗರಾಜ್, ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಕೃಷ್ಣೇಗೌಡ, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಎಚ್ಎಸ್. ವಿಜಯಕುಮಾರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ಪಿ. ಮಂಜೇಗೌಡ ಭಾಗವಹಿಸಲಿದ್ದಾರೆ.