ಸಾರಾಂಶ
ಸೊಗಡು ಜನಪದ ಹೆಜ್ಜೆ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಕಲ್ಪತರು ವಿದ್ಯಾರ್ಥಿ ರತ್ನ ರಸಪ್ರಶ್ನೆ ಕಾರ್ಯಕ್ರಮವನ್ನು ತಿಪಟೂರು ನಗರದ ಎಸ್.ವಿ.ಪಿ ಶ್ರೀ ವಿದ್ಯಾಪೀಠ ಪ್ರೌಢಶಾಲೆಯಲ್ಲಿ ಆಯೋಜನೆ ಮಾಡಲಾಗಿತ್ತು.
ಕನ್ನಡಪ್ರಭ ವಾರ್ತೆ ತಿಪಟೂರು
ಸೊಗಡು ಜನಪದ ಹೆಜ್ಜೆ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಕಲ್ಪತರು ವಿದ್ಯಾರ್ಥಿ ರತ್ನ ರಸಪ್ರಶ್ನೆ ಕಾರ್ಯಕ್ರಮವನ್ನು ನಗರದ ಎಸ್.ವಿ.ಪಿ ಶ್ರೀ ವಿದ್ಯಾಪೀಠ ಪ್ರೌಢಶಾಲೆಯಲ್ಲಿ ಆಯೋಜನೆ ಮಾಡಲಾಗಿತ್ತು. ತಾಲೂಕಿನ ಸುಮಾರು 130ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಮುಖ್ಯ ಶಿಕ್ಷಕ ಸುರೇಶ್ ರಸಪ್ರಶ್ನೆ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಈ ಸಂದರ್ಭದಲ್ಲಿ ವ್ಯಕ್ತಿತ್ವ ವಿಕಸನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿ.ಆರ್ ಗುರುಪ್ರಸಾದ್ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ನಂತರ ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕವನ್ನು ಗಳಿಸಿದ 15 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಒಂದು ತಂಡಕ್ಕೆ ಮೂರು ವಿದ್ಯಾರ್ಥಿಗಳಂತೆ ಐದು ತಂಡಗಳನ್ನು ರಚಿಸಲಾಯಿತು. ಈ ತಂಡಗಳಿಗೆ ತಿಪಟೂರಿನ ಹೆಸರಾಂತ ವ್ಯಕ್ತಿಗಳಾದ ನೀಲಕಂಠ ಸ್ವಾಮಿ ತಂಡ, ಸಿಂಗ್ರಿ ನಂಜಪ್ಪ ತಂಡ, ಪಲ್ಲಾಗಟ್ಟಿ ಅಡವಪ್ಪ, ಸಾಲುಮರದ ಬೀರಜ್ಜ, ಷಡಕ್ಷರ ದೇವರು ಹೆಸರುಗಳನ್ನು ಇಟ್ಟು ಐದು ತಂಡಗಳಾಗಿ ವಿಭಜಿಸಿ 9 ಹಂತದಲ್ಲಿ ಎರಡನೇ ಹಂತದ ರಸಪ್ರಶ್ನೆ ಕಾರ್ಯಕ್ರಮವನ್ನು ಅಂತಿಮಗೊಳಿಸಲಾಯಿತು. ಅಂತಿಮವಾಗಿ ಸಿಂಗ್ರಿ ನಂಜಪ್ಪ ತಂಡದವರಾದ ಕಲ್ಪತರು ವಿದ್ಯಾರ್ಥಿ ರತ್ನ ಪ್ರಶಸ್ತಿಗೆ ಭಾಜನರಾದರು. ಸಿಂಗ್ರಿ ನಂಜಪ್ಪ ತಂಡದ ವಿಜೇತರಾದ ಶ್ರೀ ವಿವೇಕಾನಂದ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿ ಎಸ್. ಭುವನ್ ಮತ್ತು ನಳಂದ ಶಾಲೆಯ ವಿದ್ಯಾರ್ಥಿನಿಯರಾದ ಎಂ. ಪೂರ್ವಿ, ಯುಗಶ್ರೀ ಇವರಿಗೆ ಅಭಿನಂದನೆ ಸಲ್ಲಿಸಿದರು. ರಸಪ್ರಶ್ನೆ ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ದೇಶಭಕ್ತರ ಪುಸ್ತಕ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಸಂಘದ ಅಧ್ಯಕ್ಷ ಸಿರಿಗಂಧ ಗುರು ಮಾತನಾಡಿ ಈ ಮೂರು ವಿದ್ಯಾರ್ಥಿಗಳಿಗೆ 2025ರ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಕಲ್ಪತರು ಕ್ರೀಡಾಂಗಣದಲ್ಲಿ ನಾಡಿನ ಗಣ್ಯರ, ಸಮ್ಮುಖದಲ್ಲಿ ಕಲ್ಪತರು ವಿದ್ಯಾರ್ಥಿ ರತ್ನ ಪ್ರಶಸ್ತಿಯನ್ನು ಹಾಗೂ ಪ್ರತಿ ವಿದ್ಯಾರ್ಥಿ 25 ಗ್ರಾಂ ಬೆಳ್ಳಿ ಪದಕವನ್ನು ನೀಡಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಂಘ ಉಪಾಧ್ಯಕ್ಷ ನಿಜಗುಣ, ಕಾರ್ಯದರ್ಶಿ ಚಿದಾನಂದ, ರವಿ, ನಿವೃತ್ತ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ಜ್ಯೋತಿ ಗಣೇಶ್, ನಗರಸಭಾ ಸದಸ್ಯೆ ಡಾ. ಓಹಿಲಾಗಂಗಾಧರ್, ಜೆಮ್ಸ್ ಫೌಂಡೇಶನ್ ಕಾರ್ಯದರ್ಶಿ ತರಕಾರಿ ಗಂಗಾಧರ್, ಎಸ್‌ವಿಪಿ ಶಾಲೆಯ ಸದಸ್ಯ ರೇಣುಕಾ ಪ್ರಸಾದ್, ಪ್ರಭಾ ವಿಶ್ವನಾಥ್, ಮಂಜುಳಾ ಮತ್ತಿತರರಿದ್ದರು.