ಕಬ್ಬು ಬೆಳೆಗಾರರ ಕಲ್ಪವೃಕ್ಷ ಭೀಮಾಶಂಕರ ಕಾರ್ಖಾನೆ

| Published : Feb 13 2024, 12:45 AM IST

ಸಾರಾಂಶ

ಅನ್ನದಾತರ ಬಾಳಿಗೆ ಕಲ್ಪವೃಕ್ಷವಾಗಲೆಂದು 1983ರಲ್ಲಿ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಸಹಕಾರಿ ಸಂಘಗಳ ಕಾಯ್ದೆಯಡಿಯಲ್ಲಿ ನೋಂದಣಿ ಮಾಡಲಾಗಿತ್ತು. ಆದರೆ, ಜನ್ಮತಳಿಯುವ ಮುನ್ನವೇ ಕಾರ್ಖಾನೆ ಆರಂಭ ನೆಲಕಚ್ಚಿ, ಕಾರ್ಖಾನೆಯು ಅಸ್ತಿಪಂಚರ ಬಾರಾಕಮಾನದಂತೆ ನಿಂತುಕೊಂಡಿತು.ಪ್ರತಿ ಚುನಾವಣೆಯಲ್ಲಿ ಕಾರ್ಖಾನೆ ಆಹಾರವಸ್ತುವಾಗಿ ಬಳಕೆಯಾಯಿತೇ ಹೊರತು ರೈತರ ಬಾಳಿಗೆ ಸಿಹಿ ನೀಡುವ ಕಾರ್ಖಾನೆಯಾಗಿ ರೂಪುಗೊಳ್ಳಲೇ ಇಲ್ಲ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಅನ್ನದಾತರ ಬಾಳಿಗೆ ಕಲ್ಪವೃಕ್ಷವಾಗಲೆಂದು 1983ರಲ್ಲಿ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಸಹಕಾರಿ ಸಂಘಗಳ ಕಾಯ್ದೆಯಡಿಯಲ್ಲಿ ನೋಂದಣಿ ಮಾಡಲಾಗಿತ್ತು. ಆದರೆ, ಜನ್ಮತಳಿಯುವ ಮುನ್ನವೇ ಕಾರ್ಖಾನೆ ಆರಂಭ ನೆಲಕಚ್ಚಿ, ಕಾರ್ಖಾನೆಯು ಅಸ್ತಿಪಂಚರ ಬಾರಾಕಮಾನದಂತೆ ನಿಂತುಕೊಂಡಿತು.ಪ್ರತಿ ಚುನಾವಣೆಯಲ್ಲಿ ಕಾರ್ಖಾನೆ ಆಹಾರವಸ್ತುವಾಗಿ ಬಳಕೆಯಾಯಿತೇ ಹೊರತು ರೈತರ ಬಾಳಿಗೆ ಸಿಹಿ ನೀಡುವ ಕಾರ್ಖಾನೆಯಾಗಿ ರೂಪುಗೊಳ್ಳಲೇ ಇಲ್ಲ.

ಕಳೆದ 4 ದಶಕಗಳಿಂದ ನೆನಗುದಿಗೆ ಬಿದ್ದದ್ದ ಮರಗೂರ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ನೆಲಕಚ್ಚಿತ್ತು.

ಕಾರ್ಖಾನೆ ಆರಂಭಿಸುವ ವಿಷಯದಲ್ಲಿ ಸ್ವಾರ್ಥ ಮನಸ್ಸಿನ ರಾಜಕಾರಣಿಗಳು ಪರಸ್ಪರ ಕೈ ಮಿಲಾಯಿಸಿ, ರಾಜಕೀಯ ಸ್ವಾರ್ಥಿಗಳ ಪ್ರತಿಷ್ಠೆ ಮತ್ತು ಅಧಿಕಾರದ ತಿಕ್ಕಾಟದಿಂದ ಖಾಸಗಿಯವರ ಕೈಗೊಪ್ಪಿಸುವ ಹುನ್ನಾರಗಳು ನಡೆದವು. ಇದರಿಂದ ರೈತರ ಕನಸಿನ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಿಸುವ ಕನಸು ಕೈಗೊಡಲೇ ಇಲ್ಲ. ಆದರೆ, 2013ರಲ್ಲಿ ಇಂಡಿ ವಿಧಾನಸಭಾ ಮತಕ್ಷೇತ್ರದಿಂದ ಅತ್ಯಧಿಕ 34 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿ, ಶ್ರೀ ಲಚ್ಯಾಣದ ಶ್ರೀ ಸಿದ್ದಲಿಂಗ ಮಹಾರಾಜರ ಮಠದ ಆವರಣದಲ್ಲಿ 34 ಸಾವಿರ ಮತಗಳ ಅಂತರದಿಂದ ಗೆಲುವು ತಂದುಕೊಟ್ಟ ಮತದಾರರ ಋಣ ತೀರಿಸಲು ಮುಂಬರುವ 2018ರ ವಿಧಾನಸಭೆ ಚುನಾವಣೆ ಬರುವಷ್ಟರಲ್ಲಿ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಆರಂಭಿಸುತ್ತೇನೆ. ಒಂದು ವೇಳೆ ಆಗದಿದ್ದರೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಶರಣರ ಮಠದ ಆವರಣದಲ್ಲಿ ಮಾತುಕೊಟ್ಟು 2017-18ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ₹37 ಕೋಟಿ ಅನುದಾನ ಕಾರ್ಖಾನೆಗೆ ತಂದು ಸಿಎಂ ಸಿದ್ದರಾಮಯ್ಯನವರಿಂದಲೇ ಕಾರ್ಖಾನೆ ಉದ್ಘಾಟನೆ ಮಾಡಿದ್ದರು. ಮಾತುಕೊಟ್ಟಂತೆ ನಡೆದುಕೊಂಡು ಜಿಲ್ಲೆಯಲ್ಲಿ 2ನೇ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿ, ಸಂಸ್ಥಾಪಕ ಅಧ್ಯಕ್ಷರಾಗಿ, ನಂತರ ಪ್ರಜಾಪ್ರಭುತ್ವದ ತಳಹದಿಯಲ್ಲಿ ಕಾರ್ಖಾನೆಗೆ ನಡೆದ ಚುನಾವಣೆಯಲ್ಲಿ ಒಂದು ಬಾರಿ ಅವಿರೋಧವಾಗಿ ಪೆನಲ್‌ ಆಯ್ಕೆ ಮಾಡಿ ಅಧ್ಯಕ್ಷರಾಗಿ ನಂತರ 2ನೇ ಬಾರಿ ಚುನಾವಣೆಯಲ್ಲಿ ಸಂಪೂರ್ಣ ಪೆನಲ್‌ ಗೆಲ್ಲುವ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ಹ್ಯಾಟ್ರೀಕ್ ಸಾಧಿಸಿ, ಕಾರ್ಖಾನೆ ಚುನಾವಣೆಯಲ್ಲಿ 2 ಬಾರಿ ಗೆಲುವು ಸಾಧಿಸಿ ಅಭಿವೃದ್ಧಿಯ ರೂವಾರಿಗಳು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಭಿಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಗೊಂಡ 2017-18 ರಲ್ಲಿ 2,20,599 ಮೆಟ್ರಿಕ್‌ ಟನ್‌ ಕಬ್ಬು ನುರಿಸಿ 2,11,090 ಕ್ವಿಂಟಲ್‌ ಸಕ್ಕರೆ ಉತ್ಪಾದಿಸಿದರೆ, 2018-19 ರಲ್ಲಿ 281703 ಮೇ.ಟ ಕಬ್ಬು ನುರಿಸಿ 292835 ಕ್ವೀಂಟಲ್‌ , 2019-20 ರಲ್ಲಿ 282462 ಮೇ.ಟ ಕಬ್ಬು, 2,87,700 ಕ್ವಿಂಟಲ್‌ ಸಕ್ಕರೆ, 2020-21ರಲ್ಲಿ 4,03,501 ಮೇ.ಟ ಕಬ್ಬು ಹಾಗೂ 4,17,384 ಕ್ವಿಂಟಲ್‌ ಸಕ್ಕರೆ, 2021-22 ರಲ್ಲಿ 5,34,754 ಮೇ.ಟ ಕಬ್ಬು, 5,47,100 ಕ್ವಿಂಟಲ್‌ ಸಕ್ಕರೆ ಹಾಗೂ 2022-23 ರಲ್ಲಿ 5,00,950 ಮೆಟ್ರಿಕ್‌ ಟನ್‌ ನುರಿಸಿ, 5.25 ಲಕ್ಷ ಸಕ್ಕರೆ ಉತ್ಪಾದನೆ ಮಾಡಿದ್ದು, 2017 ರಿಂದ ಇಲ್ಲಿವರೆಗೆ ಕಾರ್ಖಾನೆಯ ಅಭಿವೃದ್ಧಿಗೆ ಬ್ಯಾಂಕ್‌ಗಳಿಂದ ತಗೆದುಕೊಂಡ ಸಾಲದಲ್ಲಿ ಕಂತು ಹಾಗೂ ಬಡ್ಡಿ ಸೇರಿ ₹307 ಕೋಟಿ ಬ್ಯಾಂಕುಗಳಿಗೆ ಕಟ್ಟಲಾಗಿದೆ. ಪ್ರತಿ ವರ್ಷ ಕಾರ್ಖಾನೆ ಕಬ್ಬು ನುರಿಸಲು ಆರಂಭಿಸಿ, ಕಬ್ಬು ಅರಿಯುವ ಪ್ರಕ್ರೀಯೆ ಸ್ಥಗಿತಗೊಂಡ ದಿನದಂದೇ ಕಬ್ಬು ಕಳುಹಿಸಿದ ರೈತರಿಗೆ ಕಬ್ಬಿನ ಎಲ್ಲ ಬಿಲ್‌ ಪಾವತಿ ಮಾಡುವ ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ. ಇದರ ಹಿಂದೆ ಶಾಸಕ ಹಾಗೂ ಕಾರ್ಖಾನೆಯ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಅವರ ನಿರಂತರ ಪರಿಶ್ರಮ ಹಾಗೂ ಕಾರ್ಖಾನೆಯ ನಿರ್ದೇಶಕ ಮಂಡಳಿಯ ಸಹಕಾರ, ಅಧಿಕಾರಿ ವರ್ಗ, ಕಾರ್ಮಿಕರ ಪರಿಶ್ರಮವೂ ಇದರಲ್ಲಿ ಅಡಗಿದ್ದು, ಹೀಗಾಗಿ ಗಡಿಭಾಗದ ರೈತರ ಬಾಳಿಗೆ ಕಲ್ಪವೃಕ್ಷವಾಗಿ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಹೊರಹೊಮ್ಮಿದೆ.ಶಾಸಕ ಯಶವಂತರಾಯಗೌಡ ಪಾಟೀಲ ಅವರು ನುಡಿದಂತೆ ನಡೆದು ತೊರಿಸಿದ್ದಾರೆ. 40 ವರ್ಷಗಳಿಂದ ಬಾರಾಕಮಾನದಂತೆ ಹಾಳು ಹಂಪೆಯಾಗಿ ಮಾರ್ಪಟ್ಟಿದ್ದ ಮರಗೂರ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಇಂಡಿ, ಸಿಂದಗಿ ಭಾಗದ ರೈತರ ಆಸ್ತಿಯನ್ನಾಗಿ ಮಾಡಿ ಕಾರ್ಖಾನೆ ಆರಂಭಿಸಿಯೇ 2018ರ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಮಾತು ಕೊಟ್ಟಂತೆ ಕಾರ್ಖಾನೆ ಆರಂಭಿಸಿದ್ದಾರೆ. ಕಾರ್ಖಾನೆ ಆರಂಭದಿಂದ ಇಂದು ರೈತರಿಗೆ ಅನುಕೂಲವಾಗಿದೆ. ಕಬ್ಬು ಕಳುಹಿಸಿದ ರೈತರ ಬಿಲ್ ಯಾವುದು ಉಳಿಸಿಕೊಳ್ಳದೆ. ಕಬ್ಬು ನುರಿಸುವ ಕಾರ್ಯ ಸ್ಥಗಿತಗೊಳ್ಳುವುದಕ್ಕಿಂತ ಮುಂಚೆಯೇ ರೈತರ ಖಾತೆಗೆ ಕಬ್ಬಿನ ಬಲ್‌ ಜಮಾ ಮಾಡಿ, ರೈತಪರ ಕಾಳಜಿಯನ್ನು ತೊರಿಸುತ್ತಿದ್ದಾರೆ.

-ಜಟ್ಟೆಪ್ಪ ರವಳಿ,

ಕಾರ್ಖಾನೆ ನಿರ್ದೇಶಕ(ಎರಡು ಬಾರಿ).ಸತ್ಯ, ನ್ಯಾಯ, ನೀತಿಯಿಂದ ರಾಜಕಾರಣ ಮಾಡುತ್ತಿರುವ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಕಾರ್ಖಾನೆಯನ್ನು ಕೂಸಿನಂತೆ ಬೆಳೆಸಿ, ಪೋಷಿಸುತ್ತಿದ್ದಾರೆ. ಕಾರ್ಖಾನೆಯ ಮೇಲಿನ ಶ್ರದ್ಧೆ ದೇವರಿಗೆ ಸಮಾನದಂತಿದೆ. ಕಾರ್ಖಾನೆ ಆರಂಭಿಸಲು ಹೋಗಿ ಆರೋಗ್ಯ ಹಾಳು ಮಾಡಿಕೊಂಡಿದ್ದಾರೆ. ರೈತಪರ ಚಿಂತನೆ, ಕಳಕಳಿ ಅವರಲ್ಲಿದ್ದು, ಶರಣರು, ಸಂತರ ನಡೆ, ನುಡಿ ಚಾಚು ತಪ್ಪದೆ ಬದುಕಿನಲ್ಲಿ ಪಾಲಿಸುತ್ತಿದ್ದಾರೆ.

-ಸಂತೋಷ ಪರಸೆನವರ,
ಕಾಂಗ್ರೆಸ್‌ ಮುಖಂಡ.