ನಾಲ್ಕು ವರ್ಷಗಳ ಹಿಂದ ಆರಂಭಗೊಂಡಿದ್ದರೂ, ನಾನಾ ಕಾರಣಗಳಿಂದ ವಿಳಂಬಗತಿಯಲ್ಲಿ ಕಾಮಗಾರಿ ನಡೆದು, ಇದೀಗ ಪೂರ್ಣಗೊಂಡಿರುವ ಇಲ್ಲಿನ ಕಲ್ಯಾಣಪುರ ರಾಷ್ಟ್ರೀಯ ಹೆದ್ದಾರಿಯಲ್ಲಿನ ಮೇಲ್ಸೇತುವೆ ಕೊನೆಗೂ ಸೋಮವಾರ ಜನ, ವಾಹನ ಸಂಚಾರಕ್ಕೆ ಮುಕ್ತಗೊಂಡಿದೆ.
ಕಲ್ಯಾಣಪುರ: ನಾಲ್ಕು ವರ್ಷಗಳ ಹಿಂದ ಆರಂಭಗೊಂಡಿದ್ದರೂ, ನಾನಾ ಕಾರಣಗಳಿಂದ ವಿಳಂಬಗತಿಯಲ್ಲಿ ಕಾಮಗಾರಿ ನಡೆದು, ಇದೀಗ ಪೂರ್ಣಗೊಂಡಿರುವ ಇಲ್ಲಿನ ಕಲ್ಯಾಣಪುರ ರಾಷ್ಟ್ರೀಯ ಹೆದ್ದಾರಿಯಲ್ಲಿನ ಮೇಲ್ಸೇತುವೆ ಕೊನೆಗೂ ಸೋಮವಾರ ಜನ, ವಾಹನ ಸಂಚಾರಕ್ಕೆ ಮುಕ್ತಗೊಂಡಿದೆ.
ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೋಮವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಅನೌಪಚಾರಿಕವಾಗಿ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ತೆರವು ಮಾಡಿಕೊಟ್ಟರು, ಸೇತುವೆಯ ಬಾಕಿ ಇರುವ ಸಣ್ಣಪುಟ್ಟ ಕಾಮಗಾರಿಗಳು ಪೂರ್ಣಗೊಳಿಸಿ ಅಧಿಕೃತ ಉದ್ಘಾಟನೆಯನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದವರು ತಿಳಿಸಿದರು.ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣಪುರ ಮೇತುವೆ, ಅಂಡರ್‌ಪಾಸ್ ಸಾಕಷ್ಟು ವಿಳಂಬವಾಗಿತ್ತು ಎನ್ನುವ ದೂರು ಇದ್ದದ್ದು ಸತ್ಯ. 2022ರ ಆರಂಭದಲ್ಲಿ ಆರಂಭಗೊಂಡಿರುವ ಕಾಮಗಾರಿಗೆ ಸುಮಾರು 4 ವರ್ಷಗಳ ಕಾಲ ತೆಗೆದುಕೊಂಡಿದೆ. ಅಂಡರ್ ರೋಡ್ ನಿರ್ಮಾಣ ಮಾಡುವಾಗ ಬೃಹತ್ ಬಂಡೆ ಪತ್ತೆಯಾಯಿತು, ಅದನ್ನು ಒಡೆದರೆ ಅಕ್ಕಪಕ್ಕದ ತಮ್ಮ ಕಟ್ಟಡಗಳಿಗೆ ತೊಂದರೆಯಾಗುತ್ತದೆ ಎಂದು ಕೆಲವರು ನ್ಯಾಯಾಲಯಕ್ಕೆ ಹೋದದ್ದರಿಂದಲೂ. ಸುದೀರ್ಘ ಮಳೆಗಾಲದಿಂದಲೂ ಕಾಮಗಾರಿ ವಿಳಂಬವಾಗಿದೆ. ರಾಷ್ಟ್ರೀಯ ಹೆದ್ದಾರಿ, ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕಾಮಗಾರಿಯನ್ನು ಬಹುತೇಕ ಮುಗಿಸಲಾಗಿದೆ ಎಂದರು.
ಮಳೆಗಾಲ ಬರುತ್ತಿರುವುದರಿಂದ ಮೇಲ್ಪತುವೆಯನ್ನು ಇಂದು ತುರ್ತು ಸಾರ್ವಜನಿಕೆ ಸೇವೆಗೆ ಬಿಡುಗಡೆ ಮಾಡುತ್ತಿದ್ದೇವೆ. ವಾಹನ ದಟ್ಟಣೆ ನಿವಾರಣೆಗಾಗಿ ಈ ಮೇಲುಸೇತುವೆ ಸಂಚಾರಕ್ಕೆ ಮುಕ್ತವಾಗಿರುತ್ತಿದ್ದು ಮಾಡುತ್ತಿದ್ದು ಸಹಕರಿಸಿದ ಕೇಂದ್ರ ಸಚಿವ ಗಡ್ಕರಿ, ಎಲ್ಲಾ ಅಧಿಕಾರಿಗಳಿಗೆ, ಸಾರ್ವಜನಿಕರಿಗೆ, ಜನಪ್ರತಿನಿಧಿಗಳಿಗೆ, ವಿವಿಧ ಅನುಭವ ಹಂಚಿಕೊಂಡವರಿಗೂ ಕೃತಜ್ಞತೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.