ಮಂಗಳೂರು ಇತಿಹಾಸ ಪ್ರಸಿದ್ಧ ಸಂಪ್ರದಾಯಬದ್ಧವಾದ ಹಾಗೂ ಪುರಾತನ ಹಿನ್ನೆಲೆಯುಳ್ಳ ದೈವಾರಾಧನೆಯೊಂದಿಗೆ ವಿಜೃಂಭಣೆಯಲ್ಲಿ ನಡೆಯುವ ‘ಐಕಳಬಾವ ಕಾಂತಾಬಾರೆ - ಬೂದಾಬಾರೆ’ ಜೋಡುಕೆರೆ ಕಂಬಳ ಹಾಗೂ ಐಕಳೋತ್ಸವ -2026 ಸುವರ್ಣ ಸಂಭ್ರಮ ಫೆಬ್ರವರಿ 7ರಂದು ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಎಸ್‌ಸಿಡಿಸಿಸಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಮಂಗಳವಾರ ಬಿಡುಗಡೆ ಮಾಡಿದರು.
ಮಂಗಳೂರು ಇತಿಹಾಸ ಪ್ರಸಿದ್ಧ ಸಂಪ್ರದಾಯಬದ್ಧವಾದ ಹಾಗೂ ಪುರಾತನ ಹಿನ್ನೆಲೆಯುಳ್ಳ ದೈವಾರಾಧನೆಯೊಂದಿಗೆ ವಿಜೃಂಭಣೆಯಲ್ಲಿ ನಡೆಯುವ ‘ಐಕಳಬಾವ ಕಾಂತಾಬಾರೆ - ಬೂದಾಬಾರೆ’ ಜೋಡುಕೆರೆ ಕಂಬಳ ಹಾಗೂ ಐಕಳೋತ್ಸವ -2026 ಸುವರ್ಣ ಸಂಭ್ರಮ ಫೆಬ್ರವರಿ 7ರಂದು ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಎಸ್‌ಸಿಡಿಸಿಸಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಮಂಗಳವಾರ ಬಿಡುಗಡೆ ಮಾಡಿದರು.ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಹಾಗೂ ಐಕಳೋತ್ಸವ -2026 ಸಮಿತಿಯ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು , ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ವಾದಿರಾಜ ಎಂ. ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ಎಂ.ಮಹೇಶ್ ಹೆಗ್ಡೆ , ರಾಜೇಶ್ ರಾವ್, ಎಸ್.ಎನ್.ಮನ್ಮಥ , ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ., ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಶೆಟ್ಟಿ , ಉದ್ಯಮಿ ಜಯಪ್ರಕಾಶ್ ತುಂಬೆ ಇದ್ದರು.