ಅಜ್ಞಾನದ ಅಂಧಕಾರಕ್ಕೆ ಕೀರ್ತನೆ ಬೆಳಕು ನೀಡಿದ ಕನಕ: ಶಾಸಕ ಟಿ.ರಘುಮೂರ್ತಿ

| Published : Nov 09 2025, 01:30 AM IST

ಅಜ್ಞಾನದ ಅಂಧಕಾರಕ್ಕೆ ಕೀರ್ತನೆ ಬೆಳಕು ನೀಡಿದ ಕನಕ: ಶಾಸಕ ಟಿ.ರಘುಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು ಎರಡು ಕೋಟಿವೆಚ್ಚದಲ್ಲಿ ಕನಕ ಸಮುದಾಯ ಭವನ ನಿರ್ಮಾಣವಾಗುತ್ತಿದ್ದು, ಡಿಸೆಂಬರ್ ತಿಂಗಳಲ್ಲಿ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ಅಧಿನಾಯಕ ಸಿದ್ದರಾಮಯ್ಯನವರು ಅಮೃತ ಹಸ್ತದಿಂದ ಕನಕ ಭವನ ಉದ್ಘಾಟನೆಯಾಗಲಿದ್ದು ಜನಾಂಗದ ಸರ್ವತೋಮುಖ ಅಭಿವೃದ್ದಿಗೆ ಸದಾಸಹಕಾರ ನೀಡುವುದಾಗಿ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಸುಮಾರು ಎರಡು ಕೋಟಿವೆಚ್ಚದಲ್ಲಿ ಕನಕ ಸಮುದಾಯ ಭವನ ನಿರ್ಮಾಣವಾಗುತ್ತಿದ್ದು, ಡಿಸೆಂಬರ್ ತಿಂಗಳಲ್ಲಿ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ಅಧಿನಾಯಕ ಸಿದ್ದರಾಮಯ್ಯನವರು ಅಮೃತ ಹಸ್ತದಿಂದ ಕನಕ ಭವನ ಉದ್ಘಾಟನೆಯಾಗಲಿದ್ದು ಜನಾಂಗದ ಸರ್ವತೋಮುಖ ಅಭಿವೃದ್ದಿಗೆ ಸದಾಸಹಕಾರ ನೀಡುವುದಾಗಿ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ನಗರದ ರೇವಣಸಿದ್ದೇಶ್ವರವಿದ್ಯಾವರ್ಧಕ ಸಂಘದ ಆವರಣದಲ್ಲಿ ಶನಿವಾರ ಭಕ್ತಕನಕ ನೌಕರರ ಕ್ಷೇಮಾಭಿವೃದ್ದಿ ಸಂಘ, ಹಾಲುಮತ ಮಹಾಸಭಾ, ಕುರುಬರ ಸಂಘ, ಕನಕ ಯುವಕ ಸಂಘ, ಸಂಗೊಳ್ಳಿ ರಾಯಣ್ಣ ಕುರುಬ ಸಂಘ, ಉಣ್ಣೆ ಕೈಮಗ್ಗ ನೇಕಾರ ಮಹಾಮಂಡಳಿ, ಆಲ್ಯಬಾಯಿ ಹೋಳ್ಕರ್ ಮಹಿಳಾ ಸಂಘ ಜಂಟಿಯಾಗಿ ಹಮ್ಮಿಕೊಂಡಿದ್ದ ೫೩೮ನೇ ಕನಕ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ ಸುಮಾರು ೧೩ ವರ್ಷಗಳಿಂದ ಕನಕಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮುದಾಯದ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸಿ ಅನುದಾನ ನೀಡಿದ್ದೇನೆ. ಸಾಕಷ್ಟು ಪ್ರಮಾಣದಲ್ಲಿ ಸಮಾಜದ ಕೆಲಸಕಾರ್ಯಗಳು ಅಭಿವೃದ್ಧಿ ಪಥದಲ್ಲಿ ನಡೆದಿವೆ. ತಾಲ್ಲೂಕಿನ ಇನ್ನೂ ಮೂರುಕಡೆ ಕನಕ ಭವನ ನಿರ್ಮಾಣಕ್ಕೆ ಮನವಿ ನೀಡಿದ್ದೀರ, ಮುಖ್ಯಮಂತ್ರಿಗಳಿಂದ ಮೂರು ಕನಕ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುವ ಭರವಸೆ ನೀಡಿದರು.

ಹಿರಿಯ ಸಹಕಾರಿ ದುರೀಣ ಆರ್.ಮಲ್ಲೇಶಪ್ಪ, ತಾಲೂಕಿನ ಕುರುಬ ಸಮಾಜದ ಹಲವಾರು ಬೇಡಿಕೆ ಬಗ್ಗೆ ಶಾಸಕರು ನಿರಂತರ ಸ್ಪಂದಿಸುತ್ತಾ ಬಂದಿದ್ಧಾರೆ. ಪ್ರಸ್ತುತ ಕುರುಬ ಸಮಾಜದ ಹಾಸ್ಟೆಲ್ ನಿರ್ಮಾಣಗೊಂಡ ೬೦ ವರ್ಷ ಕಳೆದಿದ್ದು, ಶಾಸಕರು ಅನುದಾನ ನೀಡಿದಲ್ಲಿ ಹಾಸ್ಟಲ್‌ಕಟ್ಟಡ ಪುನರ್‌ನಿರ್ಮಾಣ ಮಾಡುವ ಉದ್ದೇಶವಿದೆ ಶಾಸಕರು ಸಹಕಾರ ನೀಡಬೇಕೆಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೮೫ರಷ್ಟು ಸಾಧನೆ ಮಾಡಿದ ೨೦ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪಿಯುಸಿಯಲ್ಲಿ ಎಂಟು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಿವೃತ್ತರಾದ ಪಿಡಿಒ ಮಲ್ಲೇಶಪ್ಪ, ಶಿಕ್ಷಣ ಇಲಾಖೆ ಬೀರಲಿಂಗಪ್ಪ, ಪಶುವೈದ್ಯ ಇಲಾಖೆ ಇ.ತಿಪ್ಪೇಸ್ವಾಮಿಯವರನ್ನು ಸನ್ಮಾನಿಸಲಾಯಿತು.

ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ಶಶಿಧರ, ಜಿಪಂ ಮಾಜಿ ಅಧ್ಯಕ್ಷ ಶಶಿಕಲಾ ಸುರೇಶ್‌ ಬಾಬು, ಸಂಘದ ಅಧ್ಯಕ್ಷ ಎಂ.ಶಿವಲಿಂಗಪ್ಪ, ಕ್ಷೇತ್ರಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಪೌರಾಯುಕ್ತ ಜಗರೆಡ್ಡಿ, ಬಿಸಿಎಂ ಅಧಿಕಾರಿ ಎಸ್.ರಮೇಶ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಿವರಾಜ್, ಕಾರ್ಯದರ್ಶಿ ಲೋಕೇಶ್, ಉಪಾಧ್ಯಕ್ಷ ಕಂದಿಕೆರೆಸುರೇಶ್‌ಬಾಬು, ನಿರ್ದೇಶಕರಾದ ಎಸ್.ಕೆ.ಗುರುಲಿಂಗಪ್ಪ, ಸೂರನಹಳ್ಳಿ ಜಗದೀಶ್, ಅಜ್ಜಣ್ಣ, ಮುಕುಂದ, ಚಂದ್ರಶೇಖರ್, ಹನುಮಂತರಾಯ, ಟಿ.ಬಸವರಾಜು, ಪರಸಪ್ಪ, ಮಹಲಿಂಗಪ್ಪ, ಎಂ.ಜೆ.ರಾಘವೇಂದ್ರ, ಮಹಾಲಿಂಗಪ್ಪ, ಉಣ್ಣೆಕೈಮಗ್ಗ ಅಧ್ಯಕ್ಷ ಬಿ.ಮಲ್ಲಿಕಾರ್ಜುನ್, ಅನುಸೂಯಮ್ಮ ಮಲ್ಲೇಶಪ್ಪ, ಬಿ.ಎಸ್.ಬಸವರಾಜಪ್ಪ, ಉಮಾಜನಾರ್ಧನ್, ವಿ.ರಾಜಣ್ಣ, ಆರ್.ಸದಾಶಿವಯ್ಯ, ಮಹಾಲಿಂಗಪ್ಪ, ಎ.ರಾಜಣ್ಣ, ಆರ್.ಮೀನಾಕ್ಷಿ, ಯೋಗಭೀಮಣ್ಣ, ಎಸ್.ಲಕ್ಷ್ಮಣ್, ವಿ.ಮಂಜುನಾಥ, ಬೀರಪ್ಪ, ಆರ್.ಮಂಜುನಾಥ, ಕಂದಾಯಾಧಿಕಾರಿ ತಿಪ್ಪೇಸ್ವಾಮಿ, ಗ್ರಾಮಲೆಕ್ಕಿಗ ಪ್ರಕಾಶ್ ಮುಂತಾದವರು ಇದ್ದರು.