ಸಾರಾಂಶ
ಶ್ರೀ ಕನಕದಾಸ ಜಯಂತಿಯ ಅಂಗವಾಗಿ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿನಿ ನಂದಿನಿ ಅತ್ಯುತ್ತಮವಾಗಿ ಮಾತನಾಡಿ ಪ್ರಥಮ ಬಹುಮಾನ ಪಡೆದರು. ಐಶ್ವರ್ಯ ಹಾಗೂ ನೇತ್ರಾವತಿ ೨ನೇ ಮತ್ತು ೩ ಸ್ಥಾನ ಪಡೆದರು.
ಹೊಳೆನರಸೀಪುರ: ಪೂಜ್ಯ ಕನಕದಾಸರು ದಾಸ ಶ್ರೇಷ್ಠರು ಹಾಗೂ ಅವರ ಕಾಲದಲ್ಲಿದ್ದ ತಾರತಮ್ಯದ ವಿರುದ್ಧ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಕಾವ್ಯಗಳನ್ನು ರಚಿಸಿ, ಅರಿವನ್ನು ಮೂಡಿಸಿದ ಮಹಾನ್ ದಾರ್ಶನಿಕರು ಎಂದು ಪ್ರಾಂಶುಪಾಲ ದೇವರಾಜ್ ತಿಳಿಸಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ಕನಕದಾಸರ ಜಯಂತ್ಯುತ್ಸವ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮ ಹಾಗೂ ಭಾಷಣ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿನಿಯರಲ್ಲಿ ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ ಅಥವಾ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಅವರು ದಾರ್ಶನಿಕರ ಬಗ್ಗೆ ತಿಳಿಯುವುದು ಸೇರಿದಂತೆ ಸಂಸ್ಕೃತಿಗಳ ಬಗ್ಗೆ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.ಶ್ರೀ ಕನಕದಾಸ ಜಯಂತಿಯ ಅಂಗವಾಗಿ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿನಿ ನಂದಿನಿ ಅತ್ಯುತ್ತಮವಾಗಿ ಮಾತನಾಡಿ ಪ್ರಥಮ ಬಹುಮಾನ ಪಡೆದರು. ಐಶ್ವರ್ಯ ಹಾಗೂ ನೇತ್ರಾವತಿ ೨ನೇ ಮತ್ತು ೩ ಸ್ಥಾನ ಪಡೆದರು.
ಕಾಲೇಜಿನ ಇತಿಹಾಸ ಉಪನ್ಯಾಸಕ ರಾಘವೇಂದ್ರನ್ ಎಚ್.ಎನ್.ರವರು ಕನಕದಾಸ ಜಯಂತಿಯ ಅಂಗವಾಗಿ ಪ್ರಧಾನ ಭಾಷಣ ಮಾಡಿದರು. ವಿದ್ಯಾರ್ಥಿನಿ ಲಕ್ಷ್ಮೀ ಪ್ರಾರ್ಥಿಸಿದರು, ಸುದರ್ಶನ್ ಸ್ವಾಗತಿಸಿದರು ಹಾಗೂ ಕೆಪಿ ಶ್ರೀನಿವಾಸ್ ವಂದಿಸಿದರು.ಉಪನ್ಯಾಸಕರಾದ ಕಾಂತರಾಜು, ಅವಿನಾಶ್, ಪವಿತ್ರ, ನಿರ್ಮಲಾ, ವಾಣಿ, ವೀಣಾ, ಲೋಹಿತಾಶ್ವ, ನಟರಾಜು, ದ್ರಾಕ್ಷಾಯಿಣಿ, ಇತರರು ಹಾಜರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))