ಕನಕದಾಸರು ಸಾಮಾಜಿಕ ಬದಲಾವಣೆಯ ಪ್ರತೀಕ

| Published : Nov 19 2024, 12:49 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ನಾಲತವಾಡ ಕನಕದಾಸರು ಕೇವಲ ಕವಿಯಲ್ಲ, ದಾರ್ಶನಿಕ, ಸಾಮಾಜಿಕ ಬದಲಾವಣೆಯ ಪ್ರತೀಕ ಮತ್ತು ಭಕ್ತಿಯ ಅದ್ವಿತೀಯ ಸ್ವರೂಪವಾಗಿದ್ದಾರೆ ಎಂದು ವೀರೇಶ್ವರ ಪಿಯು ಕಾಲೇಜಿನ ಪ್ರಚಾರ್ಯ ಡಾ.ಡಿ.ಆರ್.ಮಳಖೇಡ ಹೇಳಿದರು. ಪಟ್ಟಣದ ಕನಕದಾಸ ವೃತ್ತದಲ್ಲಿ ನಡೆದ ಕನಕ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಮತ್ತು ದಾಸ ಪರಂಪರೆಯಲ್ಲಿ ತನ್ನದೇ ಆದ ಅನನ್ಯ ಸ್ಥಾನ ಹೊಂದಿರುವ ಕನಕದಾಸರು ಕೇವಲ ಕವಿಯಲ್ಲ, ಆಧ್ಯಾತ್ಮಿಕ ತತ್ವದ ಬೆಳಕನ್ನು ಹರಿಸಿದ ದಾರ್ಶನಿಕರು.

ಕನ್ನಡಪ್ರಭ ವಾರ್ತೆ ನಾಲತವಾಡ

ಕನಕದಾಸರು ಕೇವಲ ಕವಿಯಲ್ಲ, ದಾರ್ಶನಿಕ, ಸಾಮಾಜಿಕ ಬದಲಾವಣೆಯ ಪ್ರತೀಕ ಮತ್ತು ಭಕ್ತಿಯ ಅದ್ವಿತೀಯ ಸ್ವರೂಪವಾಗಿದ್ದಾರೆ ಎಂದು ವೀರೇಶ್ವರ ಪಿಯು ಕಾಲೇಜಿನ ಪ್ರಚಾರ್ಯ ಡಾ.ಡಿ.ಆರ್.ಮಳಖೇಡ ಹೇಳಿದರು.

ಪಟ್ಟಣದ ಕನಕದಾಸ ವೃತ್ತದಲ್ಲಿ ನಡೆದ ಕನಕ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಮತ್ತು ದಾಸ ಪರಂಪರೆಯಲ್ಲಿ ತನ್ನದೇ ಆದ ಅನನ್ಯ ಸ್ಥಾನ ಹೊಂದಿರುವ ಕನಕದಾಸರು ಕೇವಲ ಕವಿಯಲ್ಲ, ಆಧ್ಯಾತ್ಮಿಕ ತತ್ವದ ಬೆಳಕನ್ನು ಹರಿಸಿದ ದಾರ್ಶನಿಕರು. ಕನ್ನಡದ ದಾಸ ಸಾಹಿತ್ಯದ ಮೂಲಕ ಅವರ ಬೋಧನೆಗಳು ಕೇವಲ ಅದ್ಭುತ ಕಾವ್ಯಶೈಲಿಯಲ್ಲ, ಸಮಾನತೆಯ, ಸಹಾನುಭೂತಿಯ ಹಾಗೂ ಆಧ್ಯಾತ್ಮಿಕ ಚಿಂತನೆಗಳ ಸಂಕಲನವಾಗಿವೆ. ಕನಕದಾಸರ ಜೀವನದ ಪ್ರಮುಖ ಘಟನೆಗಳಲ್ಲಿ ಒಂದಾದ ಉಡುಪಿಯ ಶ್ರೀಕೃಷ್ಣ ದೇವಾಲಯದ ಕನಕನ ಕಿಂಡಿ ಅವರ ಭಕ್ತಿಯ ಶಕ್ತಿಯ ಪ್ರತೀಕವಾಗಿದೆ. ಬ್ರಾಹ್ಮಣರು ದೇವಾಲಯ ಪ್ರವೇಶ ನಿರಾಕರಿಸಿದಾಗ, ಕನಕದಾಸರು ದೇವರ ಬಳಿ ಪ್ರಾರ್ಥಿಸಿದರು. ದೇವರು ಗೋಡೆಯ ಹಿಂಭಾಗದಿಂದ ಕಿಂಡಿಯ ಮೂಲಕ ದರ್ಶನ ನೀಡಿ, ಭಕ್ತಿಯ ಜಾತಿ-ಧರ್ಮಗಳ ಮೀರುವುದನ್ನು ಬೋಧಿಸಿದರು ಎಂದು ವಿವರಿಸಿದರು.ಜಿಪಂ ಮಾಜಿ ಉಪಾಧ್ಯಕ್ಷ ಕೆಂಚಪ್ಪ ಬಿರಾದಾರ ಮಾತನಾಡಿ, ಜಾತಿ, ಮತ ಮೀರಿ ಭಕ್ತಿಯ ಪವಿತ್ರತೆಯನ್ನು ತಿಳಿಸಿದ ಕನಕದಾಸರು, ಕನ್ನಡದ ಸಾಂಸ್ಕೃತಿಕ ಮೌಢ್ಯಗಳನ್ನು ಮುರಿದು ಹೊಸ ಪ್ರಜ್ಞೆಗೆ ದಾರಿ ತೋರಿದ ಆಧ್ಯಾತ್ಮಿಕ ಶಿಲ್ಪಿ ಎಂದರು.ಮೇರವಣಿಗೆ: ಕನಕ ಜಯಂತಿ ಪ್ರಯುಕ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕನಕ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ಕನಕದಾಸರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.ಈ ವೇಳೆ ಪಪಂ ಮಾಜಿ ಅಧ್ಯಕ್ಷ ಪೃಥ್ವಿರಾಜ ನಾಡಗೌಡ, ಶಂಕರರಾವ ದೇಶಮುಖ, ಗುರುಪ್ರಸಾದ ದೇಶಮುಖ, ಅಮರೇಶ ದೇಶಮುಖ, ತಾಲೂಕು ಕುರುಬರ ಸಂಘದ ಮಾಜಿ ಅಧ್ಯಕ್ಷ ಹಣಮಂತ ಕುರಿ, ಮಹಾಂತೇಶ ಗಂಗನಗೌಡರ, ಎಂ.ಎಸ್.ಪಾಟೀಲ, ಪಪಂ ಉಪಾಧ್ಯಕ್ಷ ಬಸವರಾಜ ಗಂಗನಗೌಡರ, ಸದಸ್ಯರಾದ ಡಾ.ಎಸ್.ಬಿ.ಗಂಗನಗೌರ, ಬಸವರಾಜ ಡೇರೆದ, ಸಂಗಣ್ಣ ಪತ್ತಾರ, ಅಶೋಕ ಇಲಕಲ್, ಜುಮ್ಮಣ್ಣ ಜೋಗಿ, ರಮೇಶ ಆಲಕೊಪ್ಪರ, ಅಂಬ್ರಪ್ಪ ಶೀರಿ, ಲಾಳೇಸಾಬ ಇಸ್ಲಾಂಪೂರ, ರಜಾಕಸಾಬ, ಸಂಗಣ್ಣ ಬಾರಡ್ಡಿ, ದಾದಾ ಎತ್ತಿನಮನಿ ಹಾಗೂ ಇನ್ನಿತರರು ಇದ್ದರು.