ಸಾರಾಂಶ
ಸಂತ ಭಕ್ತ ಕನಕದಾಸರು ಶ್ರದ್ಧೆ, ಭಕ್ತಿಗೆ ಶ್ರೇಷ್ಠ ನಿದರ್ಶನ ಆಗಿದ್ದರು. ಅವರ ತತ್ವಾದರ್ಶಗಳು ಯುವ ಜನಾಂಗಕ್ಕೆ ಮಾದರಿಯಾಗಿವೆ. ಇಂದಿನ ಮಕ್ಕಳಿಗೆ ಅವುಗಳನ್ನು ಪರಿಚಯಿಸಲು ಹಾಲುಮತ ಸಮಾಜ ಶ್ರಮಿಸಬೇಕು ಎಂದು ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಸಂತ ಭಕ್ತ ಕನಕದಾಸರು ಶ್ರದ್ಧೆ, ಭಕ್ತಿಗೆ ಶ್ರೇಷ್ಠ ನಿದರ್ಶನ ಆಗಿದ್ದರು. ಅವರ ತತ್ವಾದರ್ಶಗಳು ಯುವ ಜನಾಂಗಕ್ಕೆ ಮಾದರಿಯಾಗಿವೆ. ಇಂದಿನ ಮಕ್ಕಳಿಗೆ ಅವುಗಳನ್ನು ಪರಿಚಯಿಸಲು ಹಾಲುಮತ ಸಮಾಜ ಶ್ರಮಿಸಬೇಕು ಎಂದು ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.ಪಟ್ಟಣದಲ್ಲಿ ಸೋಮವಾರ ತಾಲೂಕು ಆಡಳಿತ ಮತ್ತು ಹಾಲುಮತ ಸಮಾಜದ ಆಶ್ರಯದಲ್ಲಿ ನಡೆದ ಸಂತ ಭಕ್ತ ಕನಕದಾಸರ 537ನೇ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿರಕ್ತಮಠದ ಶಿವಬಸವ ಸ್ವಾಮೀಜಿ, ಕ್ಯಾರಗುಡ್ಡ ಅವುಜೀಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಮಾತನಾಡಿದರು. ಹಾಲುಮತ ಸಮಾಜದ ತಾಲೂಕು ಅಧ್ಯಕ್ಷ ಡಾ. ಜಯಪ್ರಕಾಶ ಕರಜಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಶ್ರೀಶೈಲ ಮಠಪತಿ ಉಪನ್ಯಾಸ ನೀಡಿದರು.ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮುಖಂಡರಾದ ಗಜಾನನ ಕ್ವಳ್ಳಿ, ಜಯಗೌಡ ಪಾಟೀಲ, ಪಿಂಟು ಶೆಟ್ಟಿ, ಅಪ್ಪಾಸಾಹೇಬ ಸಾರಾಪೂರೆ, ಸುಜಾತಾ ಬಾಯನಾಯಿಕ, ತಹಸೀಲ್ದಾರ ಮಂಜುಳಾ ನಾಯಕ ಅವರಿಗೆ ಕನಕ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ತಾಪಂ ಇಒ ಟಿ.ಆರ್. ಮಲ್ಲಾಡದ, ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ್, ಸಚಿವ ಸತೀಶ ಜಾರಕಿಹೊಳಿ ಆಪ್ತ ಸಹಾಯಕ ಪಾಂಡು ಮನ್ನಿಕೇರಿ, ಗ್ಯಾರಂಟಿ ಯೋಜನೆ ಅನುಷ್ಠಾನ ತಾಲೂಕು ಸಮಿತಿ ಅಧ್ಯಕ್ಷ ಶಾನೂಲ್ ತಹಸೀಲ್ದಾರ, ಕಸಾಪ ಅಧ್ಯಕ್ಷ ಪ್ರಕಾಶ ಅವಲಕ್ಕಿ, ಮುಖಂಡರಾದ ಭೀಮಣ್ಣ ರಾಮಗೋನಟ್ಟಿ, ಡಾ.ಶಿವಾಜಿ ಗೋಟುರೆ, ಬಿ.ಬಿ. ಪಾಟೀಲ, ಶಂಕರರಾವ ಹೆಗಡೆ, ಕೆ.ಕೆ. ಬೆನಚನಮರಡಿ, ಸಿದ್ದಪ್ಪ ಹಳಿಜೋಳ, ಮೌನೇಶ ಪೋತದಾರ, ಕಬೀರ್ ಮಲೀಕ್, ಅಶೋಕ ಡುಮ್ಮನವರ, ಭರಮಾ ಪೂಜೇರಿ ಮತ್ತಿತರರು ಉಪಸ್ಥಿತರಿದ್ದರು.ಹಿರಿಯ ವಕೀಲ ಭೀಮಸೇನ ಬಾಗಿ ಸ್ವಾಗತಿಸಿದರು. ಶಿಕ್ಷಕ ಸಂಗಮೇಶ ಕರಹೊನ್ನವರ ನಿರೂಪಿಸಿದರು. ಇದಕ್ಕೂ ಮುನ್ನ ಸ್ಥಳೀಯ ಅಡವಿಸಿದ್ದೇಶ್ವರ ಮಠದಿಂದ ಎಸ್.ಕೆ. ಹೈಸ್ಕೂಲ್‌ವರೆಗೆ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಯಿತು.