ದಾಸ ಸಾಹಿತ್ಯದ ಮೂಲಕ ಸಮಾನತೆಯ ಸಂದೇಶ ಸಾರಿದ ಕನಕದಾಸರು

| Published : Nov 21 2025, 02:30 AM IST

ಸಾರಾಂಶ

ಸಾಮಾಜಿಕ ಕಳಕಳಿ ಮತ್ತು ಮಾನವೀಯ ನೆಲೆಯಲ್ಲಿ ದಾಸರು ರಚಿಸಿದ ಸಾಹಿತ್ಯ ಕೃತಿಯು ಯುವ ಸಮೂಹಕ್ಕೆ ದಾರಿ ದೀಪವಾಗಿವೆ.

ಕುರುಗೋಡು: ಮನುಕುಲದ ಏಳಿಗಾಗಿ ದಾಸ ಸಾಹಿತ್ಯದ ಮೂಲಕ ಸಮಾನತೆಯ ಸಂದೇಶ ಸಾರಿದ ಕನಕದಾಸರು ಪ್ರತಿಯೊಬ್ಬರಿಗೂ ಮಾದರಿ ಎಂದು ಕಾಗಿನೆಲೆ ಕನಕ ಗುರುಪೀಠ ಮಹಾಸಂಸ್ಥಾನದ ಪೀಠಾಧಿಪತಿ ಸಿದ್ದರಾಮಾನಂದ ಶ್ರೀ ಹೇಳಿದರು.

ಕುಡತಿನಿ ಪಟ್ಟಣದಲ್ಲಿ ಕನಕದಾಸ ಯುವಕ ಸಂಘದಿಂದ ಜಯಂತಿ ಪ್ರಯುಕ್ತ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಗೋಲಗೇರಿಯ ಪವಾಡ ಪುರುಷ ಗೊಲ್ಲಾಳೇಶ್ವರ ಮಹಾ ಪುರಾಣದ ಧರ್ಮಸಭೆಯ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.

ಸಾಮಾಜಿಕ ಕಳಕಳಿ ಮತ್ತು ಮಾನವೀಯ ನೆಲೆಯಲ್ಲಿ ದಾಸರು ರಚಿಸಿದ ಸಾಹಿತ್ಯ ಕೃತಿಯು ಯುವ ಸಮೂಹಕ್ಕೆ ದಾರಿ ದೀಪವಾಗಿವೆ. ಪ್ರತಿಯೊಬ್ಬರೂ ದುಶ್ಚಟ ನಿಲ್ಲಿಸಿ ಅದಕ್ಕೆ ಮಾಡುವ ವೆಚ್ಚವನ್ನು ಧರ್ಮ ಕಾರ್ಯಕ್ಕೆ ಬಳಕೆ ಮಾಡಬೇಕು. ಜತೆಗೆ ಎಲ್ಲರೂ ಒಂದೇ ಎಂಬ ಭಾವನೆ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.

ಶಾಸಕಿ ಅನ್ನಪೂರ್ಣ ತುಕಾರಾಂ ಮಾತನಾಡಿ, ಕನಕದಾಸರು ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಆದರ್ಶ ಪರಿಪಾಲಿಸಬೇಕು ಎಂದರು.

ನಿವೃತ್ತ ಅಧಿಕಾರಿಗಳಾದ ಕೋರಿ ಬಸಪ್ಪ, ಕೆ.ಎಂ. ತಾಯಪ್ಪ, ಎಚ್.ಆನಂದ, ಭೀಮಪ್ಪ, ದಾಸರ ಹುಚ್ಚಪ್ಪ, ಎಂ.ಬಸವರಾಜ ಅವರಿಗೆ ಗೌರವಿಸಲಾಯಿತು. ಜೊತೆಗೆ ಎಸ್ಸೆಸ್ಸೆಲ್ಸಿ ಕೆ.ಬಿ. ಸುಷ್ಮಾ, ಎಂ.ಸಿ. ಕೀರ್ತಿ, ಪಿಯುಸಿಯ ಸಹನಾ ಬನ್ನೆಟ್ಟಿ, ಎಂ.ಸಿ. ಪಲ್ಲವಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ವೇಳೆ ಗೋವರ್ಧನ ನಂದಪುರಿ ಮಹಾಸ್ವಾಮಿ, ಕನಕದಾಸ ಯುವಕ ಸಂಘದ ಅಧ್ಯಕ್ಷ ಕಂದಾರಿ ಗಾದಿಲಿಂಗಪ್ಪ, ಮುಖಂಡರಾದ ಟಿ ಕೆ ಕಾಮೇಶ್, ಕೋರಿ ಬಸಪ್ಪ, ಆನಂದ, ಭೀಮಪ್ಪ, ಆನಂದ, ಕೆ.ಎಂ. ಹಾಲಪ್ಪ, ಕುಮಾರಸ್ವಾಮಿ, ಹನುಮಂತ, ಭೀಮೇಶ್ ಇದ್ದರು.