ಕೀರ್ತನೆಗಳ ಮೂಲಕವೇ ಜಾತಿ ಕಿತ್ತೊಗೆದ ಕನಕದಾಸರು

| Published : Nov 10 2025, 12:30 AM IST

ಸಾರಾಂಶ

ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮುರ್ತಿ ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಸಮಾಜದಲ್ಲಿ ಆಳಾವಾಗಿ ಬೇರೂರಿದ್ದ ಜಾತಿವಿಷ ಬೀಜವನ್ನು ಸಂಪೂರ್ಣವಾಗಿ ತೊಡೆದು ಹಾಕಲು ಕನಕದಾಸರ ಕೀರ್ತನೆಗಳೇ ಆಧಾರ. ಸುಮಾರು 500 ವರ್ಷಗಳ ಹಿಂದೆಯೇ ಕನಕದಾಸರು ಸಮಾಜದಲ್ಲಿ ಹೆಚ್ಚಾಗಿದ್ದ ಅಸಮಾನತೆಯನ್ನು ತೊಡೆದುಹಾಕಲು ಕೀರ್ತನೆಗಳ ಮೂಲಕ ಜಾಗೃತಿ ಮೂಡಿಸಿದರು ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಕನಕದಾಸರ 538ನೇ ಜಯಂತಿ ಕಾರ್ಯಕ್ರಮಕ್ಕೆ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಭಕ್ತ ಕನಕದಾಸರು ಅಪಾರವಾದ ಜ್ಞಾನದ ಸಂಪತ್ತನ್ನು ಹೊಂದಿದ್ದರು. ಅವರ ಜ್ಞಾನದ ಸಂಪತ್ತಿನ ಫಲವಾಗಿ ಇಂದು ನಾವೆಲ್ಲರೂ ಸಮಾಜದಲ್ಲಿ ಜಾತಿ ಕಂದಕಗಳ ವಿಷ ಬೀಜದಿಂದ ಹೊರಬರುವ ಪ್ರಯತ್ನ ಮಾಡುತ್ತಿದ್ದೇವೆ. ಕನಕದಾಸರು ಆರಾಧ್ಯದೈವವೆಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತಹಸೀಲ್ದಾರ್ ರೇಹಾನ್‌ಪಾಷ, ಕೀರ್ತನೆಗಳ ಮೂಲಕವೇ ಸಮಾಜದ ಜಾಗೃತಿಯನ್ನು ಕೈಗೊಂಡ ಏಕೈಕ ಮಹಾನೀಯರು ಭಕ್ತ ಕನಕದಾಸರು. ತಮ್ಮೆಲ್ಲಾ ಸಿರಿಬೋಗಗಳನ್ನು ತೊರೆದು ವಿರಾಗಿಯಾಗಿ ಕೀರ್ತನೆಗಳ ರಚನೆ ಮೂಲಕ ಜನಸಾಮಾನ್ಯರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿದವರು ಎಂದರು.

*ಶಾಸಕರ ಭವನದಲ್ಲಿ ಕನಕ ಜಯಂತಿ: ನಗರದ ಶಾಸಕರ ಭವನದಲ್ಲಿ ಕನಕದಾಸರ 538ನೇ ಜಯಂತಿ ಆಚರಿಸಿದ್ದು ಶಾಸಕ ಟಿ.ರಘುಮೂರ್ತಿ ಕನಕದಾಸರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿದರು. ಶಾಸಕ ಭವನದಲ್ಲಿ ಮಹಾನೀಯರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಅವರ ತತ್ವಾದರ್ಶಗಳನ್ನು ಪಾಲನೆ ಮಾಡುವ ಕೆಲಸವಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎಂ.ಶಿವಲಿಂಗಪ್ಪ, ಉಪಾಧ್ಯಕ್ಷ ಕಂದಿಕೆರೆ ಸುರೇಶ್‌ಬಾಬು, ಹಿರಿಯ ಸಹಕಾರಿ ದುರೀಣ ಆರ್.ಮಲ್ಲೇಶಪ್ಪ, ಜಿಪಂ ಮಾಜಿ ಅಧ್ಯಕ್ಷ ಶಶಿಕಲಾ ಸುರೇಶ್‌ ಬಾಬು, ನಗರಸಭೆ ಮಾಜಿ ಅಧ್ಯಕ್ಷೆ ಶಿಲ್ಪಮುರುಳಿ, ಮಾಜಿಉಪಾಧ್ಯಕ್ಷೆ ಕವಿತಾವೀರೇಶ್, ಚೌಳೂರುಬಸವರಾಜು, ರಾಜಶೇಖರ ಮುಂತಾದವರು ಉಪಸ್ಥಿತರಿದ್ದರು.