ಸಮಾಜದಲ್ಲಿ ಸಮಾನತೆ ನೆಲೆಸಲು ಶ್ರಮಿಸಿದ ಮಹಾನ್ ಸಂತ, ಕುಲ ಕುಲವೆಂದು ಹೊಡೆದಾಡದಿರಿ ಕುಲದ ನೆಲೆಯನ್ನೇದಾದರೂ ಬಲ್ಲಿರಾ ಎಂದು ಪ್ರಶ್ನಿಸಿ ಜಾತಿಯ ವ್ಯವಸ್ಥೆಯನ್ನು ವಿರೋಧಿಸಿದ್ದರು ಎಂದು ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಎ.ಎಸ್ ಗುರುಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಮಾಜದಲ್ಲಿ ಸಮಾನತೆ ನೆಲೆಸಲು ಶ್ರಮಿಸಿದ ಮಹಾನ್ ಸಂತ, ಕುಲ ಕುಲವೆಂದು ಹೊಡೆದಾಡದಿರಿ ಕುಲದ ನೆಲೆಯನ್ನೇದಾದರೂ ಬಲ್ಲಿರಾ ಎಂದು ಪ್ರಶ್ನಿಸಿ ಜಾತಿಯ ವ್ಯವಸ್ಥೆಯನ್ನು ವಿರೋಧಿಸಿದ್ದರು ಎಂದು ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಎ.ಎಸ್ ಗುರುಸ್ವಾಮಿ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡ ಭಕ್ತ ಶ್ರೇಷ್ಠ ಕನಕದಾಸರ 539ನೇ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಕನಕದಾಸರು ಅಪಾರ ಪಾಂಡಿತ್ಯವನ್ನು ಪಡೆಯುವ ಮೂಲಕ ಕೀರ್ತನೆಗಳನ್ನು ರಚನೆ ಮಾಡಿದ್ದರು. ದಾಸ ಪರಂಪರೆಯಲ್ಲಿ ಕನಕದಾಸರು ಪ್ರಮುಖರಾಗಿದ್ದು, ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಲು ಯತ್ನಿಸಿದ್ದರು ಎಂದು ಹೇಳಿದರು.

ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ (ಮುನ್ನ) ಮಾತನಾಡಿ, ಸಮಾಜ ಸುಧಾರಣೆಗೆ ದುಡಿದ ಮಹಾನ್ ದಾರ್ಶನಿಕರನ್ನು ಕೇವಲ ಆಚರಣೆಗಳಿಗೆ ಸೀಮಿತವಾಗಿ ಮಾಡಬಾರದು. ಅವರ ವಿಚಾರಧಾರೆಗಳನ್ನು ಅರ್ಥ ಮಾಡಿಕೊಂಡು ಅವರ ಹಾದಿಯಲ್ಲಿ ಸಾಗಬೇಕು. ಅವರ ಜೀವನಚರಿತ್ರೆಯನ್ನು ಅಧ್ಯಯನ ಮಾಡುವ ಕಾರ್ಯ ಪ್ರಸ್ತುತ ಸಂದರ್ಭದಲ್ಲಿ ನಡೆಯಬೇಕಿದೆ ಎಂದರು

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿಕ್ಕ ಮಹದೇವ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಎಸ್. ನಾಗರತ್ನಕೆಂಗಾಕಿ, ಚಾಮುಲ್‌ ನಿರ್ದೇಶಕ ನಾಗಯ್ಯ, ನಗರಸಭಾ ನಾಮನಿರ್ದೇಶಕ ಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಮರಿಯಾಲ ಹುಂಡಿ ಕುಮಾರ್, ಜಿಲ್ಲಾ ಕಾಂಗ್ರೆಸ್ ಕಾನೂನು ಸಲಹಾಗಾರ ನಾಗಾರ್ಜುನ್ ಪೃಥ್ವಿ, ಚುಡಾ ಮಾಜಿ ಅಧ್ಯಕ್ಷ ಸುಹೇಲ್‌ ಅಲಿಖಾನ್, ಕೆಲ್ಲಂಬಳ್ಳಿ ಸೋಮಶೇಖರ್, ಎ,ಎಚ್,ಎನ್, ನಸ್ರುಲ್ಲಾಖಾನ್, ಎಂ.ನಾಗಬಸವಣ್ಣ, ಪ್ರಚಾರ ಸಮಿತಿ ಟೌನ್ ಬ್ಲಾಕ್ ಅಧ್ಯಕ್ಷ ಅಪ್ಸರ್ಅ ಹಮದ್, ಅಬ್ಬಾಸ್, ಜಿ,ಡಿ ಪ್ರಕಶ್, ಪವಾನ್‌ಮೂರ್ತಿ, ಮಹೇಶ್, ನಾಗರಾಜು, ಪಕ್ಷದ ಕಾರ್ಯಕರ್ತರು, ಮುಖಂಡರು ಇದ್ದರು.