ನಾಡಿನ ಸಾಂಸ್ಕೃತಿಕ ಪರಂಪರೆಗೆ ಕನಕದಾಸರ ಕೊಡುಗೆ ಅನನ್ಯ-ನಂಜುಂಡೇಶ

| Published : Nov 19 2024, 12:52 AM IST

ನಾಡಿನ ಸಾಂಸ್ಕೃತಿಕ ಪರಂಪರೆಗೆ ಕನಕದಾಸರ ಕೊಡುಗೆ ಅನನ್ಯ-ನಂಜುಂಡೇಶ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಕನಕದಾಸರು ಅನನ್ಯ ಕೊಡುಗೆ ನೀಡಿದ್ದಾರೆ. ದಾಸ ಸಾಹಿತ್ಯಕ್ಕೆ ವಿಶೇಷ ಮೆರುಗನ್ನು ತಂದವರು ಕವಿ ಕನಕದಾಸರು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ ಹೇಳಿದರು.

ಹಾವೇರಿ: ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಕನಕದಾಸರು ಅನನ್ಯ ಕೊಡುಗೆ ನೀಡಿದ್ದಾರೆ. ದಾಸ ಸಾಹಿತ್ಯಕ್ಕೆ ವಿಶೇಷ ಮೆರುಗನ್ನು ತಂದವರು ಕವಿ ಕನಕದಾಸರು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ ಹೇಳಿದರು.ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾ ಓಬಿಸಿ ಮೋರ್ಚಾ ವತಿಯಿಂದ ಏರ್ಪಡಿಸಿದ್ದ ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನಕದಾಸರು ದಂಡನಾಯಕರಾಗಿದ್ದು, ಯುದ್ಧದಲ್ಲಿ ಸೋತ ನಂತರ ಅವರಿಗೆ ವೈರಾಗ್ಯ ಉಂಟಾಗಿ ಹರಿಭಕ್ತ ದಾಸರಾದರು. ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರಾಗಿದ್ದರು. ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣ್ಣನ ಅನನ್ಯ ಭಕ್ತರೂ ಹೌದು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದವರು. ಕಾಗಿನೆಲೆಯ ಆದಿಕೇಶವರಾಯ ಎಂಬುದು ಇವರ ಕೀರ್ತನೆಗಳ ಅಂಕಿತನಾಮವಾಗಿದೆ ಎಂದರು. ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ನೀಲಪ್ಪ ಚಾವಡಿ ಮಾತನಾಡಿ, ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿದ್ದ ಅನಿಷ್ಟ ಪದ್ಧತಿಗಳು, ಕೆಟ್ಟ ಸಂಪ್ರದಾಯಗಳನ್ನು ನಿರ್ಮೂಲನೆ ಮಾಡಲು ಜೀವನದುದ್ದಕ್ಕೂ ಶ್ರಮಿಸಿದರು. ಕನಕದಾಸರ ನಡೆ, ನುಡಿ ಹಾಗೂ ಜೀವನ ಎಲ್ಲರಿಗೂ ಆದರ್ಶವಾಗಿದೆ. ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಭಕ್ತಿ, ವೈರಾಗ್ಯ, ಭಜನೆಗಳಷ್ಟೇ ಅಲ್ಲದೇ ಹದಿನಾರನೆಯ ಶತಮಾನದ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಸಮರ ಸಾರಿದ್ದಾರೆ. ಸಾಮಾಜಿಕ ಮಡಿವಂತಿಕೆಯನ್ನು ಕುರಿತು ತಮ್ಮ ಕೀರ್ತನೆಗಳಲ್ಲಿ ವಿಡಂಬಿಸಿದ್ದಾರೆ ಎಂದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಸಂತೋಷ ಆಲದಕಟ್ಟಿ ಮಾತನಾಡಿ, ಸಂತ ಕನಕದಾಸರು ತಮ್ಮ ಕೀರ್ತನೆಯ ಮೂಲಕ ಜನರನ್ನು ಬಡೆದೆಬ್ಬಿಸಿ ಸಾಮಾಜಿಕ ಸಾಮರ್ಥಕ್ಕಾಗಿ ಸೇವೆ ಮಾಡಲು ಪ್ರೇರೇಪಿಸಿದರು. ಇತ್ತೀಚಿನ ದಿನಗಳಲ್ಲಿ ಸಂತರನ್ನು ಹಾಗೂ ಸಾಮಾಜದ ಅಭಿವೃದ್ಧಿಗಾಗಿ ಹೋರಾಡಿದ ಮಾಹಾನ್ ವ್ಯಕ್ತಿಗಳನ್ನು ಅವರ ಜಾತಿಗಳನ್ನು ಗುರುತಿಸಿ ಅವರನ್ನು ಒಂದೇ ಜಾತಿಗೆ ಸೀಮಿತಗೊಳಿಸಿತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದರು. ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿ, ಇಂದು ನಾವೆಲ್ಲರೂ ಕನಕದಾಸರ ಜಯಂತಿಯನ್ನು ಆಚರಿಸುವುದರ ಜೋತೆಗೆ ಕನಕದಾಸರ ಸಂದೇಶಗಳನ್ನು ನಮ್ಮ ಜನತೆಗೆ ತಿಳಿಸಿಕೊಡಬೇಕು. ಅಲ್ಲದೇ ಅವರು ನೀಡಿದ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಹುಲಗೂರ, ವಿನಯ ತಳಗೇರಿ, ರಮೇಶ ಪಾಲನಕರ, ಪ್ರಭು ಹಿಟ್ನಳ್ಳಿ, ಜಗದೀಶ ಕನವಳ್ಳಿ, ಶಿವಯೋಗಿ ಹುಲಿಕಂತಿಮಠ, ಗುಡ್ಡಪ್ಪ ಭರಡಿ, ಪ್ರಕಾಶ ಉಜನಿಕೊಪ್ಪ, ರುದ್ರೇಶ ಚಿನ್ನಣ್ಣವನರ, ವಿಜಯಕುಮಾರ ಚಿನ್ನಿಕಟ್ಟಿ, ಶಂಭು ಹತ್ತಿ, ವಿರೂಪಾಕ್ಷಪ್ಪ ತಲ್ಲೂರ, ನಾಗರಾಜ ಹಾರುಗೋಲ, ಚನ್ನಮ್ಮ ಪಾಟೀಲ, ರೋಹಿಣಿ ಪಾಟೀಲ, ಪುಷ್ಪಾ ಚಕ್ರಸಾಲಿ, ಚನ್ನಮ್ಮ ಪಾಟೀಲ, ಭಾಗ್ಯಶ್ರೀ ಮೋರೆ, ರೇಣುಕಾ ಗೌಳಿ, ರಾಮಕ್ಕ ಮುತ್ತಳ್ಳಿ, ಸುಂಮಗಲಾ ಚನ್ನಿವೀರಗೌಡ್ರ, ಶೋಭಾ ಜಗತಾಪ, ಪಕ್ಕಿರೇಶ ಹಾವನೂರ, ಗಿರೀಶ ಶೆಟ್ಟರ, ಪ್ರಕಾಶ ಬಂಡಿವಡ್ಡರ, ಸುಭಾಷ ದಿಡಗಣ್ಣಿ, ಮಲ್ಲೇಶ ತಳವಾರ, ರವಿ ವಡ್ಡರ, ಗಜಾನನ ರಾಸಿನಕರ, ರಘು ಮತ್ತಿಹಳ್ಳಿ, ವಿಜಯಕುಮಾರ ಕುಡ್ಲಪ್ಪನವರ, ಗಿರೀಶ ಶೆಟ್ಟರ, ಅಡವಯ್ಯ ಯಲುವಿಗಿಮಠ, ವೈ.ಎ. ಮಡಿವಾಳರ, ಮುತ್ತುಣ್ಣ ಮುಷ್ಠಿ, ಆನಂದ ಮಿಸಿಹೊನ್ನಪ್ಪನವರ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.