ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ೧೨ನೇ ಶತಮಾನದ ಶಿವಶರಣರ ವಚನ ಸಾಹಿತ್ಯ ೧೬-೧೭ನೇ ಶತಮಾನದ ದಾಸಸಾಹಿತ್ಯವು ಕನ್ನಡ ಸಾಹಿತ್ಯ ಪರಂಪರೆಯ ಸುವರ್ಣ ಯುಗ. ಜನರಲ್ಲಿ ಮೂಢನಂಬಿಕೆಗಳು ಬೇರೂರಿದ್ದ ಸಂದರ್ಭದಲ್ಲಿ ಕನಕದಾಸರಂತಹ ಸಂತರು ವೈಚಾರಿಕ ಜಾಗೃತಿಯನ್ನು ಉಂಟು ಮಾಡಿದರು. ತೀರ ಸಾಮಾನ್ಯ ಸಂಗತಿಗಳನ್ನು ಆಧ್ಯಾತ್ಮಿಕ ಪರಿಭಾಷೆಯಾಗಿ ಪರಿವರ್ತಿಸುವ ಮೂಲಕ ಜನಭಾಷೆ ಮತ್ತು ಸಂಸ್ಕೃತಿಗೆ ಒಂದು ಮಹತ್ವವನ್ನು ಕನಕದಾಸರು ತಂದುಕೊಟ್ಟರು ಎಂದು ಪ್ರಾಚಾರ್ಯ ಡಾ.ಜಿ.ಡಿ ಅಕಮಂಚಿ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
೧೨ನೇ ಶತಮಾನದ ಶಿವಶರಣರ ವಚನ ಸಾಹಿತ್ಯ ೧೬-೧೭ನೇ ಶತಮಾನದ ದಾಸಸಾಹಿತ್ಯವು ಕನ್ನಡ ಸಾಹಿತ್ಯ ಪರಂಪರೆಯ ಸುವರ್ಣ ಯುಗ. ಜನರಲ್ಲಿ ಮೂಢನಂಬಿಕೆಗಳು ಬೇರೂರಿದ್ದ ಸಂದರ್ಭದಲ್ಲಿ ಕನಕದಾಸರಂತಹ ಸಂತರು ವೈಚಾರಿಕ ಜಾಗೃತಿಯನ್ನು ಉಂಟು ಮಾಡಿದರು. ತೀರ ಸಾಮಾನ್ಯ ಸಂಗತಿಗಳನ್ನು ಆಧ್ಯಾತ್ಮಿಕ ಪರಿಭಾಷೆಯಾಗಿ ಪರಿವರ್ತಿಸುವ ಮೂಲಕ ಜನಭಾಷೆ ಮತ್ತು ಸಂಸ್ಕೃತಿಗೆ ಒಂದು ಮಹತ್ವವನ್ನು ಕನಕದಾಸರು ತಂದುಕೊಟ್ಟರು ಎಂದು ಪ್ರಾಚಾರ್ಯ ಡಾ.ಜಿ.ಡಿ ಅಕಮಂಚಿ ಹೇಳಿದರು. ನಗರದ ಎಸ್.ಎಸ್.ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ದಾಸ ಶ್ರೇಷ್ಠ ಕನಕದಾಸರ ಜಯಂತಿ ಅಂಗವಾಗಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು.ಉಪ ಪ್ರಾಚಾರ್ಯ ಕೆ.ಬಿ ಪಾಟೀಲ ಮಾತನಾಡಿ, ನಾವು ಕನಕದಾಸರ ಕೀರ್ತನಗಳ ಅಧ್ಯಯನ ಮಾಡಿ ಅದರ ಸಾರಗಳನ್ನು ತಿಳಿದುಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಹೇಳಿದರು. ಶಿಕ್ಷಕ ಕೆ.ವಿ ಒಡೆಯರ, ಅಮರೇಶ ಸಾಲಕ್ಕಿ, ಡಿ.ಕೆ ರಾಠೋಡ್ ಮುಂತಾದವರು ಇದ್ದರು.