ಶಬರಿಮಲೈಗೆ ಪಾದಯಾತ್ರೆ ಕೈಗೊಂಡ ಕನಕಗಿರಿ ಭಕ್ತ!

| Published : Dec 06 2024, 08:58 AM IST

ಸಾರಾಂಶ

೧೮ನೇ ಬಾರಿ ಅಯ್ಯಪ್ಪ ಮಾಲೆ ಧರಿಸಿದ ಪಟ್ಟಣದ ಶಿವಕುಮಾರ ಸಜ್ಜನ ಬುಧವಾರ ಸಾವಿರ ಕಿಮೀ ದೂರದ ಶಬರಿಮಲೈಗೆ ಪಾದಯಾತ್ರೆ ಕೈಗೊಂಡರು.

ಕನ್ನಡಪ್ರಭ ವಾರ್ತೆ ಕನಕಗಿರಿ

೧೮ನೇ ಬಾರಿ ಅಯ್ಯಪ್ಪ ಮಾಲೆ ಧರಿಸಿದ ಪಟ್ಟಣದ ಶಿವಕುಮಾರ ಸಜ್ಜನ ಬುಧವಾರ ಸಾವಿರ ಕಿಮೀ ದೂರದ ಶಬರಿಮಲೈಗೆ ಪಾದಯಾತ್ರೆ ಕೈಗೊಂಡರು.

ಇಲ್ಲಿನ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆರಂಭಿಸಿದ ಪಾದಯಾತ್ರೆಯಲ್ಲಿ ಸ್ಥಳೀಯ ಅಯ್ಯಪ್ಪ ಮಾಲಾಧಾರಿಗಳು ಅಯ್ಯಪ್ಪನ ಗೀತೆಗಳನ್ನು ಹಾಡಿ ವಾಲ್ಮೀಕಿ ವೃತ್ತದ ಮಾರ್ಗವಾಗಿ ಶ್ರೀ ಕನಕಾಚಲಪತಿ, ಲಕ್ಷ್ಮೀ ದೇವಿಗೆ ಪೂಜೆ ಸಲ್ಲಿಸಿದರು. ಬಳಿಕ ಅಂಬೇಡ್ಕರ್‌ ವೃತ್ತ, ಮೌನೇಶ್ವರ ಮಠದವರೆಗೆ ಯಾತ್ರಿಕ ಶಿವಕುಮಾರ ಅವರನ್ನು ಬೀಳ್ಕೊಡಲಾಯಿತು.

ಪ್ರತಿ ದಿನ ೨೦ರಿಂದ ೩೦ ಕಿಮೀ ಯಾತ್ರೆ ಮಾಡುತ್ತೇನೆ. ಕನಕಗಿರಿ ಪಟ್ಟಣದಿಂದ ೧೨೦೦ ಕಿಮೀ ದೂರದಲ್ಲಿರುವ ಶಬರಿಮಲೈಗೆ ತಿಂಗಳ ಪರ್ಯಂತ ಪಾದಯಾತ್ರೆ ಮೂಲಕ ತೆರಳುವ ಬಯಕೆ ಹೊಂದಿದ್ದೇನೆ ಎಂದು ಯಾತ್ರಿಕ ಶಿವಕುಮಾರ ತಿಳಿಸಿದರು.

ಈ ವೇಳೆ ಚನ್ನಪ್ಪ ತೆಗ್ಗಿನಮನಿ, ವಿಜಯಕುಮಾರ, ಭೀಮೇಶ ಗಂಗಾಮತ, ರಾಮರೆಡ್ಡಿ ಅಳ್ಳಳ್ಳಿ, ಅಮರೇಶ ಭಾವಿಕಟ್ಟಿ, ಶರಣಪ್ಪ ತೆಗ್ಗಿನಮನಿ, ವೀರೇಶ ಸಮಗಂಡಿ, ಶ್ರೀನಿವಾಸ ಬೊಂದಾಡೆ ಇತರರಿದ್ದರು.