ದ್ಭುತವಾದ ನಾಡಿನಲ್ಲಿ ಕಳೆದ ೧೬ ವರ್ಷಗಳಿಂದಲೂ ಜ್ಞಾನಸತ್ರ ಕಾರ್ಯಕ್ರಮದ ಮೂಲಕ ಭಕ್ತರಿಗೆಲ್ಲ ಆಧ್ಯಾತ್ಮದ ಜ್ಞಾನ ಉಣಬಡಿಸುತ್ತಿರುವ ಕಾರ್ಯವನ್ನು ಸ್ಮರೀಸಿದರು
ಕನಕಗಿರಿ: ಕನಕಗಿರಿ ದಾಸರ ತಪೋ ಭೂಮಿಯಾಗಿರುವುದರಿಂದ ಸಾಹಿತ್ಯಕ್ಕೆ ದೊಡ್ಡ ಶಕ್ತಿ ಇದೆ ಎಂದು ಅಂತಾರಾಷ್ಟ್ರೀಯ ಗಾಯಕ ಹಾಗೂ ಜಾನಪದ ಅಕಾಡೆಮಿ ಸದಸ್ಯ ಹುಸೇನದಾಸ ಹೇಳಿದರು.
ಅವರು ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ವಿಠ್ಠಲ ಸೇವಾ ಪ್ರತಿಷ್ಠಾನದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನಕಾಚಲಪತಿ ಬ್ರಹ್ಮೋತ್ಸವ ಹಾಗೂ ೧೬ನೇ ಜ್ಞಾನಸತ್ರ ಕಾರ್ಯಕ್ರಮದ ಅಂಗವಾಗಿ ದಾಸವಾಣಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಈ ನಾಡಿನಲ್ಲಿ ಕಲೆ, ಸಾಹಿತ್ಯಕ್ಕೆ ಅಪಾರ ಶಕ್ತಿ ಇದೆ.ಈ ಶಕ್ತಿಗೆ ಕಾರಣವೇ ದಾಸರು, ಶರಣರು ಆಗಿದ್ದಾರೆ. ಅದ್ಭುತವಾದ ನಾಡಿನಲ್ಲಿ ಕಳೆದ ೧೬ ವರ್ಷಗಳಿಂದಲೂ ಜ್ಞಾನಸತ್ರ ಕಾರ್ಯಕ್ರಮದ ಮೂಲಕ ಭಕ್ತರಿಗೆಲ್ಲ ಆಧ್ಯಾತ್ಮದ ಜ್ಞಾನ ಉಣಬಡಿಸುತ್ತಿರುವ ಕಾರ್ಯವನ್ನು ಸ್ಮರೀಸಿದರು.
ಕಾರ್ಯಕ್ರಮದಲ್ಲಿ ಹೋಮ, ಹವನಗಳು ಪಂಡಿತರಿಂದ ಉಪನ್ಯಾಸ ಸೇರಿದಂತೆ ವಿವಿಧ ಗೋಷ್ಠಿಗಳು ನಡೆಯುತ್ತಿದ್ದು, ಖ್ಯಾತ ಗಾಯನ ಹುಸೇನದಾಸರಿಂದ ದಾಸರು ಕೀರ್ತನೆಗಳು ನೆರವೇರಿದವು.ಪ್ರತಿಷ್ಠಾನದ ಅಧ್ಯಕ್ಷ ಡಾ.ಶ್ರೀನಿವಾಸ ಪದಕಿ, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದ ನಿರ್ದೇಶಕ ವೆಂಕಟೇಶ ಕುಲಕರ್ಣಿ, ಕ್ಷೇತ್ರದ ಶೈಕ್ಷಣಿಕ ಸುಧಾರಣಾ ಸಮಿತಿ ಸದಸ್ಯ ಕೆ.ಎಚ್ ಕುಲಕರ್ಣಿ,ಶಿಕ್ಷಕ ಗೋಪಾಲಕೃಷ್ಣ, ಪ್ರಮುಖರಾದ ಗುರುರಾಜ ಕುಲಕರ್ಣಿ ಕನ್ನೇರಡುವು, ಭಿಮಸೇನ ಜೋಶಿ, ಪ್ರಹ್ಲಾದ ಆಚಾರ್ ಕಳ್ಳಿ, ಭೀಮರಾವ್ ಕುಲಕರ್ಣಿ, ಕೆ.ಎನ್ ನಾಗರಾಜ, ಮಧುಸೂದನ್, ಟಿ.ಮಂಜುನಾಥ, ಧನಂಜಯ, ಎಂ. ಪ್ರಹ್ಲಾದರಾವ್ ಸೇರಿದಂತೆ ಬ್ರಾಹ್ಮಣ ಸಮಾಜದ ಮಹಿಳೆಯರು ಇದ್ದರು. ಗಂಗಾವತಿಯ ರಾಮು, ರಾಘವೇಂದ್ರ ಹಾಗೂ ಶಿವಕುಮಾರ ಸಂಗೀತಕ್ಕೆ ಸಾಥ್ ನೀಡಿದರು.