ಕಾನಾಮಡಗು ಹಳ್ಳಿಗಾಡಿನ ವಿಶ್ವವಿದ್ಯಾಲಯ: ದೊಣೆಹಳ್ಳಿ ಗುರುಮೂರ್ತಿ

| Published : Dec 05 2024, 12:33 AM IST

ಸಾರಾಂಶ

ಕಾನಾಮಡಗು ಹಳ್ಳಿಗಾಡಿನ ವಿಶ್ವವಿದ್ಯಾಲಯದಂತಿದೆ ಎಂದು ಹಿರಿಯ ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಅಭಿಪ್ರಾಯವ್ಯಕ್ತಪಡಿಸಿದರು.

ಕೂಡ್ಲಿಗಿ: ಕಾನಾಮಡಗು ಹಳ್ಳಿಗಾಡಿನ ವಿಶ್ವವಿದ್ಯಾಲಯದಂತಿದ್ದು, ರಾಜ್ಯದಲ್ಲಿಯೇ ಅತ್ಯುತ್ತಮ ಶಿಕ್ಷಕ ತರಬೇತಿ ಕೇಂದ್ರವಾಗಿದ್ದ ಕಾನಾಮಡಗು ಶ್ರೀ ಶರಣಬಸವೇಶ್ವರ ಶಿಕ್ಷಕರ ತರಬೇತಿ ಕೇಂದ್ರ ಸಾವಿರಾರು ವಿದ್ಯಾವಂತರಿಗೆ ನೀಡುವುದರ ಮೂಲಕ ಸಾರ್ಥಕತೆ ಮೆರೆದಿದೆ ಎಂದು ಲೇಖರ, ಹಿರಿಯ ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಅಭಿಪ್ರಾಯವ್ಯಕ್ತಪಡಿಸಿದರು.

ತಾಲೂಕಿನ ಕಾನಾಮಡಗು ಗ್ರಾಮದ ಶ್ರೀ ಶರಣಬಸವೇಶ್ವರ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾನಾಮಡುಗಿನ ಶ್ರೀ ಶರಣ ಬಸವೇಶ್ವರ ಶಿಕ್ಷಕರ ತರಬೇತಿ ಸಂಸ್ಥೆ 1971-72ನೇ ಸಾಲಿನಲ್ಲಿ ದಾಸೋಹ ಮಠದ ಧರ್ಮಾಧಿಕಾರಿಯಾಗಿದ್ದ ನಾಲ್ವಡಿ ಶರಣರು, ಕೊಂಕಲ್ ಸೋಮೆಶ್ವರ ಶ್ರೀಗಳು ಪ್ರಾರಂಭಿಸುವ ಮೂಲಕ ಕೂಡ್ಲಿಗಿಯಂತಹ ಹಿಂದುಳಿದ ತಾಲೂಕಿನಲ್ಲಿ ಸಾವಿರಾರು ಶಿಕ್ಷಕರನ್ನು ನಿರ್ಮಿಸಿದ್ದು ಸಮಾಜದ ಕಟ್ಟಕಡೆಯ ಸಮುದಾಯಗಳಿಗೂ ಅನ್ನ, ಅಕ್ಷರ ನೀಡಿದ ಕೀರ್ತಿ ಈ ಮಠದ್ದಾಗಿದೆ ಎಂದರು.ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಹೃದಯ ಪೂರ್ವಕವಾಗಿ ಹೂ ಗುಚ್ಚ ನೀಡಿ ಸ್ವಾಗತಿಸಿ ಅಭಿನಂದಿಸಿದರು.

ಸಂಸ್ಥೆಯ ಅಧ್ಯಕ್ಷ ಐಮಡಿ ಶರಣರು ಮಾತನಾಡಿ, ನಮ್ಮ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳು ಶಿಕ್ಷಕರಾಗಿ ನಾಡಿನುದ್ದಗಲಕ್ಕೂ ಸೇವೆ ಸಲ್ಲಿಸುತ್ತಿರುವುದು ನಮ್ಮ ಹೆಮ್ಮೆಯಾಗಿದೆ. ಯಾವುದೇ ಡೊನೆಷನ್ ಇಲ್ಲದೆ ಕೇವಲ ಸರ್ಕಾರಿ ಶುಲ್ಕದ ಮೂಲಕ ತರಬೇತಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದೇವೆ. ಇದು ಸರ್ವ ಜಾನಾಂಗದ ಶಾಂತಿಯ ತೋಟವಾಗಿದೆ. ಇದಕ್ಕೆ ನಮ್ಮ ಭಕ್ತರ ಸೇವಾ ಮನೋಭಾವ ಮುಖ್ಯವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಜಿಪಂ ಮಾಜಿ ಸದಸ್ಯ ಕೆ.ಎಂ. ಶಶಿಧರ, ಪ್ರಾಚಾರ್ಯ ಎಲ್.ಪಿ. ಸುಭಾಸ್ ಚಂದ್ರ ಬೋಸ್, ದಯಾನಂದ್ ಸಜ್ಜನ್, ಶರತ್ ಕುಮಾರ್‌, ಮನೋಜ್ ಕುಮಾರ್, ಆನಂದ್ ಗೌಡ ಉಪಸ್ಥಿತರಿದ್ದರು.

ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ ಪಂಪಾಪತಿ‌, ಗುರುಸಿದ್ದನ ಗೌಡ, ರಂಗಮ್ಮ, ಪೂರ್ಣಿಮಾ.ಭವಾನಿ, ಶಹತಾಜ್, ಬಸವರಾಜ್, ಶರಣಬಸಪ್ಪ ಪಾಟೀಲ್, ಅನಿತಾ ಆಲೆಹಳ್ಳಿ, ಎಂ.ಟಿ. ಅನಿತಾ ಅವರು ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸಿಹಿ ಹಂಚಿ ಸ್ವಾಗತಿಸಿದರು.

ಎರಡನೇ ವರ್ಷದ ಪ್ರಶಿಕ್ಷಾಣಾರ್ಥಿಗಳಾದ ಶರಣಪ್ಪ ರಂಗನಹಳ್ಳಿ, ದಾದಾ ಖಲಂದರ್ ಗುಡೆಕೊಟೆ, ಗುರುಬಸವನ ಗೌಡ, ತ್ರಿನೇತ್ರಾ, ಜೀವನ್ ಹುಚ್ಚವನಹಳ್ಳಿ, ಶರಣಗೌಡ ಪಾಟೀಲ್, ಪಂಪಾಪತಿ ಸೂಲದಹಳ್ಳಿ ಅವರನ್ನು ಸನ್ಮಾನಿಸಲಾಯಿತು. ರಂಗಮ್ಮ ಪ್ರಾರ್ಥಿಸಿದರು. ಅನುಷ್ಕಾ ವಂದಿಸಿದರು.