ಸಾರಾಂಶ
- ನೂತನ ಮಳಿಗೆಯಲ್ಲಿ ₹1 ಸಾವಿರದಿಂದ ₹2.5 ಲಕ್ಷ ಬೆಲೆವರೆಗೆ ಉಡುಪುಗಳು
- - -- ದಕ್ಷಿಣ ಭಾರತದಲ್ಲಿ 69ನೇ, ಕರ್ನಾಟಕದಲ್ಲಿ 5ನೇ ಶಾಖೆ ಆರಂಭ
- ಮಳಿಗೆ ಉದ್ಘಾಟಿಸಿದ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಶ್ರೀ- - -
ಕನ್ನಡಪ್ರಭ ವಾರ್ತೆ ದಾವಣಗೆರೆಭಾರತದ ಜನರ ಪ್ರಮುಖ ಆಕರ್ಷಣೆಯಾಗಿರುವ, ಚಿಲ್ಲರೆ ವ್ಯಾಪಾರಗಳಲ್ಲಿ ಒಂದಾದ ಸಾಯಿ ಸಿಲ್ಕ್ ಕಲಾಮಂದಿರ್ ಲಿಮಿಟೆಡ್ (ಎಸ್‌ಎಸ್‌ಕೆಎಲ್) ಅಂಗ ಸಂಸ್ಥೆಯಾದ ಕಾಂಚೀಪುರಂ ವರಮಹಾಲಕ್ಷ್ಮೀ ಸಿಲ್ಕ್ಸ್ ಹೊಸ ಮಳಿಗೆಯನ್ನು ದಾವಣಗೆರೆಯಲ್ಲಿ ಅನಾವರಣಗೊಳಿಸುವ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಬ್ರಾಂಡ್‌ನ ಮತ್ತೊಂದು ವಿಸ್ತರಣೆ ಮಾಡಿದೆ.
ಶುಕ್ರವಾರ ನಗರದ ಬಾಪೂಜಿ ಡೆಂಟಲ್ ಕಾಲೇಜ್ ರಸ್ತೆಯಲ್ಲಿ (ಬಾಪೂಜಿ ಆಸ್ಪತ್ರೆ ಹತ್ತಿರ) ಕಾಂಚೀಪುರಂ ವರಮಹಾಲಕ್ಷ್ಮೀ ಸಿಲ್ಕ್ಸ್ ಹೊಸ ಮಳಿಗೆಯನ್ನು ಶ್ರೀ ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ಶ್ರೀ ಷ.ಬ್ರ. ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟನೆ ಮಾಡಿದರು.ಸಾಟಿಯಿಲ್ಲದ ದೇಸಿ ಉತ್ಪನ್ನ:
ಈ ಸಂದರ್ಭ ಸಾಯಿ ಸಿಲ್ಕ್ಸ್ ಕಲಾಮಂದಿರ್ ಲಿಮಿಟೆಡ್‌ನ ನಿರ್ದೇಶಕ ದುರ್ಗಾರಾವ್ ಚಲವಾದಿ ಮಾತನಾಡಿ, ದಾವಣಗೆರೆಯಲ್ಲಿ 69ನೇ ಕಾಂಚೀಪುರಂ ವರಮಹಾಲಕ್ಷ್ಮೀ ಸಿಲ್ಕ್ಸ್ ಹೊಸ ಮಳಿಗೆ ಉದ್ಘಾಟನೆ ಮಾಡುವ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಬ್ರಾಂಡ್ ವಿಸ್ತರಣೆ ಮುಂದುವರಿಸಿದೆ. ಹೊಸ ಸ್ವರೂಪದಲ್ಲಿ ಕರ್ನಾಟಕದಲ್ಲಿ 5ನೇ ಶೋ ರೂಂ ಪ್ರಾರಂಭಿಸಲಾಗಿದೆ. ಗ್ರಾಹಕರಿಗೆ ಸಾಟಿಯಿಲ್ಲದ ದೇಸಿ ಉತ್ಪನ್ನದ ಮೌಲ್ಯವನ್ನು ನೀಡುತ್ತದೆ. ಇದರ ವ್ಯಾಪಕ ಸಂಗ್ರಹವು ಕಾಂಚೀಪುರಂ ರೇಷ್ಮೆ ಸೀರೆಗಳು, ಬನಾರಸ್, ಪಟೋಲಾ, ಕೋಟಾ, ಪೈಥಾನಿ, ಆರ್ಗನ್ಜಾ, ಕುಪ್ಪಡಂ, ಇಕ್ಕತ್, ಬಂಧನಿ ಸೇರಿದಂತೆ ಹತ್ತುಹಲವು ಬ್ರ‍್ಯಾಂಡ್‌ಗಳು ಒಳಗೊಂಡಿದೆ. ಮದುವೆ, ಹಬ್ಬದ ಸಂದರ್ಭಗಳು, ಶುಭ ಸಮಾರಂಭಗಳ ಮತ್ತು ದೈನಂದಿನ ಸೊಬಗುಗಳನ್ನು ಪೂರೈಸುತ್ತದೆ. ಮಳಿಗೆಯಲ್ಲಿ ₹1 ಸಾವಿರದಿಂದ ₹2.5 ಲಕ್ಷ ಬೆಲೆವರೆಗೆ ತರಹೇವಾರಿ ಉಡುಪುಗಳು ಲಭ್ಯವಿದೆ. ಇವೆಲ್ಲವೂ ಎಸ್‌ಎಸ್‌ಕೆಎಲ್‌ನ ಒಂದೇ ಸೂರಿನಡಿ ಸಿಗುವುದು ಹೆಗ್ಗಳಿಕೆಯಾಗಿದೆ ಎಂದರು.ಕರ್ನಾಟಕದಲ್ಲಿ ಬಲವಾದ, ಸಾಂಪ್ರದಾಯಿಕ ಮತ್ತು ಸಮಕಾಲೀನ ನೇಯ್ಗೆಗಳಲ್ಲಿ ಗುಣಮಟ್ಟದ ಕಡಿಮೆ ಬೆಲೆಯಲ್ಲಿ ನೀಡುವ ಸೀರೆ ಶಾಪಿಂಗ್ ಅನುಭವವನ್ನು ಗ್ರಾಹಕರು ಮರು ವ್ಯಾಖ್ಯಾನಿಸುವ ಗುರಿ ಹೊಂದಿದ್ದೇವೆ. ಕರ್ನಾಟಕದಲ್ಲಿ ತನ್ನ ನೆಲೆಯನ್ನು ಬಲಪಡಿಸಲು, ಎಸ್‌ಎಸ್‌ಕೆಎಲ್ ವಿನೂತನವಾದ ಕೆಲಸಗಳನ್ನು ಮಾಡಿಕೊಂಡು ಬರಲಾಗುತ್ತದೆ. ಗ್ರಾಹಕರಿಗೆ ಗುಣಮಟ್ಟದ ಸಾಂಪ್ರದಾಯಿಕ ಮಗ್ಗದ ಅನುಭವ ನೀಡಲಾಗುತ್ತದೆ ಎಂದು ತಿಳಿಸಿದರು.
ಗುಣಮಟ್ಟದ ಕೈ ಮಗ್ಗದಲ್ಲಿ ತಯಾರು:ಕಾಂಚೀಪುರಂ ವರಮಹಾಲಕ್ಷ್ಮೀ ಸಿಲ್ಕ್ಸ್ ನೂತನ ಮಳಿಗೆಯಲ್ಲಿ ನೂರಾರು ಶೈಲಿಯ ಉಡುಪುಗಳು ಒಂದೇ ಕಡೆ ಸಿಗಲಿದೆ. ನಮ್ಮ ಮಳಿಗೆ ಎಲ್ಲ ತರಹದ ಶುಭ-ಸಮಾರಂಭಗಳಿಗೆ ಹೇಳಿ ಮಾಡಿಸಿದ್ದಾಗಿದೆ. ಮಾರುಕಟ್ಟೆಗಳಿಗಿಂತ ಗುಣಮಟ್ಟದ ಕೈ ಮಗ್ಗದಲ್ಲಿ ತಯಾರಾಗಿರುವ ಆಕರ್ಷಕ ಬಣ್ಣಗಳು, ಕಡಿಮೆ ಬೆಲೆಯಲ್ಲಿ ವಿವಿಧ ನಮೂನೆಯ ಉಡುಪುಗಳು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಸಿಗಲಿವೆ. ಹಬ್ಬ ಹರಿದಿನದ ದಿನಗಳಲ್ಲಿ ವಿಶೇಷ ರಿಯಾಯಿತಿ ಸೌಲಭ್ಯಗಳು ದೊರೆಯಲಿವೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಝಾನ್ಸಿ ಚಲವಾದಿ, ಕಲ್ಯಾಣ ಅಣ್ಣಮ್, ಬಂಧುಗಳು, ಸ್ನೇಹಿತರು, ಗಣ್ಯರು, ಸಿಬ್ಬಂದಿ ಪಾಲ್ಗೊಂಡಿದ್ದರು. ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಕೋರಿದರು.- - -
-13ಕೆಡಿವಿಜಿ34.ಜೆಪಿಜಿ:ದಾವಣಗೆರೆಯಲ್ಲಿ ಶುಕ್ರವಾರ ಕಾಂಚೀಪುರಂ ವರಮಹಾಲಕ್ಷ್ಮೀ ಸಿಲ್ಕ್ಸ್ ನೂತನ ಮಳಿಗೆಯನ್ನು ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟನೆ ಮಾಡಿದರು.