ಸಾರಾಂಶ
ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರ ಭಾರತದ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಆಂಧ್ರಪ್ರದೇಶದ ಶ್ರೀಶೈಲಂದಲ್ಲಿ ಕನ್ನಡದ ಶಾಸನವೊಂದು ಪತ್ತೆಯಾಗಿದೆ ಎಂದು ಮೋಡಿಲಿಪಿ ತಜ್ಞ, ಖ್ಯಾತ ಸಂಶೋಧಕ ಡಾ.ಸಂಗಮೇಶ ಕಲ್ಯಾಣಿ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮುಧೋಳ
ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರ ಭಾರತದ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಆಂಧ್ರಪ್ರದೇಶದ ಶ್ರೀಶೈಲಂದಲ್ಲಿ ಕನ್ನಡದ ಶಾಸನವೊಂದು ಪತ್ತೆಯಾಗಿದೆ ಎಂದು ಮೋಡಿಲಿಪಿ ತಜ್ಞ, ಖ್ಯಾತ ಸಂಶೋಧಕ ಡಾ.ಸಂಗಮೇಶ ಕಲ್ಯಾಣಿ ತಿಳಿಸಿದ್ದಾರೆ.ಈ ಕುರಿತು ಅವರು ಪತ್ರಿಕೆಗೆ ಮಾಹಿತಿ ನೀಡಿದ್ದು, ರಾಷ್ಟ್ರೀಯ ಸಂಶೋಧನಾ ವೇದಿಕೆಯಿಂದ ಗುರುತಿಸಲಾದ ಈ ಶಾಸನ ಶ್ರೀಶೈಲ ಕ್ಷೇತ್ರದ ಕಡೆಬಾಗಿಲು ಹತ್ತಿರವಿದೆ. ಈ ಶಾಸನದ ಕಾಲ ಮತ್ತು ಶಾಸನ ಹಾಕಿಸಿದವರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ನೆರೆಯ ಆಂಧ್ರದ ನೆಲದಲ್ಲಿ ದೊರೆತ ಕನ್ನಡ ಶಾಸನದಲ್ಲಿ ಶ್ರೀಶೈಲಂ ಕ್ಷೇತ್ರದ ಅಧಿದೇವರಾದ ಮಲ್ಲಿಕಾರ್ಜುನ ದೇವರ ಕುರಿತು ಉಗೆ ಉಗೆ ಮಲ್ಲಯ್ಯ ಅನಿತಿ ಭವ ಸಂಹಾರಿ ಎಂದು ಬರೆಯಲಾಗಿದೆ. ಈ ಶಾಸನ ಶ್ರೀ ಮಲ್ಲಯ್ಯ ದೇವರನ್ನು ಸ್ಮರಿಸಿದರೆ ಲೋಕದ ಕಷ್ಟ ದೂರವಾಗುತ್ತದೆ ಎಂದು ಅರ್ಥ ಕೊಡುತ್ತದೆ ಎಂದು ಹಿರಿಯ ಇತಿಹಾಸ ಸಂಶೋಧಕ ರಾಷ್ಟ್ರೀಯ ಸಂಶೋಧನಾ ವೇದಿಕೆ ಗೌರವ ಅಧ್ಯಕ್ಷ ಡಾ. ಸಂಗಮೇಶ ಕಲ್ಯಾಣಿ ತಿಳಿಸಿದ್ದಾರೆ.