ಸಾರಾಂಶ
ಎಲ್.ಜಿ. ಹಾವನೂರ ಅವರು ಶೋಷಿತ, ಹಿಂದುಳಿದ ವರ್ಗ, ನೊಂದವರ ಪರವಾಗಿ ದುಡಿದು ಅವರಿಗೆ ದಾರಿದೀಪ ಆಗಿದ್ದರು ಎಂದು ಜಿಲ್ಲಾ ವಾಲ್ಮೀಕಿ ನಾಯಕ ಸಮಾಜ ಜಿಲ್ಲಾಧ್ಯಕ್ಷ ಬಿ.ವೀರಣ್ಣ ಹೇಳಿದ್ದಾರೆ.
- ಎಲ್.ಜಿ. ಹಾವನೂರು ಶತಮಾನೋತ್ಸವ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಎಲ್.ಜಿ. ಹಾವನೂರ ಅವರು ಶೋಷಿತ, ಹಿಂದುಳಿದ ವರ್ಗ, ನೊಂದವರ ಪರವಾಗಿ ದುಡಿದು ಅವರಿಗೆ ದಾರಿದೀಪ ಆಗಿದ್ದರು ಎಂದು ಜಿಲ್ಲಾ ವಾಲ್ಮೀಕಿ ನಾಯಕ ಸಮಾಜ ಜಿಲ್ಲಾಧ್ಯಕ್ಷ ಬಿ.ವೀರಣ್ಣ ಹೇಳಿದರು.ನಗರದ ನಾಯಕ ವಿದ್ಯಾರ್ಥಿ ನಿಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಎಲ್.ಜಿ. ಹಾವನೂರು ಅವರ 100 ವರ್ಷದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಹಾವನೂರು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಎಲ್.ಜಿ. ಹಾವನೂರು ಮಹಾಚೇತನ. ಇಂದಿನ ಯುವಪೀಳಿಗೆಗೆ ಆದರ್ಶ ಹಾಗೂ ಅನುಕರಣೀಯ ಯೋಗ್ಯವಾದ ವ್ಯಕ್ತಿತ್ವ ಹೊಂದಿದ್ದವರು. ಬದುಕಿನಲ್ಲಿ ಸಾರ್ಥಕ ಜೀವನ ನಡೆಸಿ, ತನ್ನ ಶೋಷಿತ ಸಮುದಾಯಗಳಿಗೆ ಆಸರೆಯಾಗಿ ಉದಾತ್ತ ಧ್ಯೇಯೋದ್ದೇಶಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾದವರು. ಸಮಾಜಮುಖಿ ಚಿಂತನೆಗಳನ್ನು ಮೈಗೂಡಿಸಿಕೊಂಡು ಶೋಷಿತರಿಗೆ ದಾರಿದೀಪವಾಗಿದ್ದಾರೆ ಎಂದರು.ಹಿರಿಯ ವಕೀಲ ಎನ್.ಎಂ. ಆಂಜನೇಯ ಗುರೂಜಿ ಮಾತನಾಡಿ, ರಾಮರಾಜ್ಯ ಪರಿಕಲ್ಪನೆಯತ್ತ ಸಾಗಲು ಅನೇಕ ಮಹನೀಯರ ಪರಿಶ್ರಮ ಅಗಾಧವಾಗಿದೆ. ಇಂಥ ಮೇಲ್ಪಂಕ್ತಿ ಮನೋಧರ್ಮದ ಕೆಲವೇ ಮೇಧಾವಿಗಳಲ್ಲಿದ್ದು, ಅಂಥವರಲ್ಲಿ ಎಲ್.ಜಿ. ಹಾವನೂರು ಒಬ್ಬರು ಎಂದು ಹೇಳಿದರು.
ಹಾವನೂರು ಕುಟುಂಬದ ನಿವೃತ್ತ ಡಿವೈಎಸ್‌ಪಿ ಆರ್.ಶಾಹು ಮಾತನಾಡಿ, ರಾಜ್ಯದ ನಾನಾ ಸಮಸ್ಯೆಗಳ ಪರಿಹಾರಕ್ಕೆ ಹಾವನೂರು ಕಟಿಬದ್ಧರಾಗಿದ್ದರು. ಸುಂದರ ಸಮಾಜದ ಕನಸು ನನಸಾಗಲು ಸಮರ್ಥ ಹೋರಾಟಗಾರರು. ನಿರ್ಭೀತ ಎದೆಗಾರಿಕೆಯ ಕಾರ್ಯತತ್ಪರತೆಯಿಂದ ಭವಿಷ್ಯದ ಹಿತಚಿಂತನೆಯಲ್ಲಿ ಕಾರ್ಯೋನ್ಮುಖರಾಗಿ ಇದ್ದುದು ಹಾವನೂರು ಮೇರುವ್ಯಕ್ತಿತ್ವ ಎಂದರು. ಹಿಂದುಳಿದ ವರ್ಗಗಳ ಆಯೋಗದಡಿ ಪ್ರಾಮಾಣಿಕವಾಗಿ ದುಡಿದ ಅವರ ಸೇವೆ ಚಿರಸ್ಮರಣೀಯ ಎಂದರು.ಈ ಸಂದರ್ಭ ಜಯಪ್ಪ ಸೋಮಲಾಪುರ, ಹಿರಿಯ ವಕೀಲರು. ಶ್ಶಾಗಲೆ ಕೆ.ಆರ್. ಮಂಜುನಾಥ, ಗುಮ್ಮನೂರು ಶಂಬಣ್ಣ, ನರಸಿಂಹಯ್ಯ, ರಾಜು ಬೆಳ್ಳೂಡಿ, ವೆಂಕಟೇಶ್ ಇತರರು ಇದ್ದರು.
- - - (** ಈ ಫೋಟೋ-ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಬಹುದು)-5ಕೆಡಿವಿಜಿ31.ಜೆಪಿಜಿ:
ದಾವಣಗೆರೆಯ ನಾಯಕ ವಿದ್ಯಾರ್ಥಿ ನಿಲಯದಲ್ಲಿ ಎಲ್.ಜಿ.ಹಾವನೂರು ಶತಮಾನೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಬಿ.ವೀರಣ್ಣ, ಎನ್.ಎಂ. ಆಂಜನೇಯ ಗುರೂಜಿ, ನಿವೃತ್ತ ಡಿವೈಎಸ್‌ಪಿ ಆರ್.ಶಾಹು ಇನ್ನಿತರರು ಇದ್ದರು.