ಅಂಧ ಮಹಿಳೆಯರ ಟಿ 20 ಕ್ರಿಕೆಟ್ ವಿಶ್ವಕಪ್ ವಿಜೇತರಾದ ಭಾರತ ತಂಡದ ನಾಯಕಿ ಜಿಲ್ಲೆಯ ಟಿ.ಸಿ.ದೀಪಿಕಾ, ಸಹ ಆಟಗಾರರಾದ ಜಿಲ್ಲೆಯ ವಿ.ಕಾವ್ಯ ಹಾಗೂ ಶಿವಮೊಗ್ಗ ಜಿಲ್ಲೆಯ ಎನ್.ಆರ್.ಕಾವ್ಯ ಅವರನ್ನು ಭಾನುವಾರ ಕನ್ನಡ ಸೇನೆ ಜಿಲ್ಲಾ ಘಟಕದಿಂದ ನಗರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ, ತುಮಕೂರುಅಂಧ ಮಹಿಳೆಯರ ಟಿ 20 ಕ್ರಿಕೆಟ್ ವಿಶ್ವಕಪ್ ವಿಜೇತರಾದ ಭಾರತ ತಂಡದ ನಾಯಕಿ ಜಿಲ್ಲೆಯ ಟಿ.ಸಿ.ದೀಪಿಕಾ, ಸಹ ಆಟಗಾರರಾದ ಜಿಲ್ಲೆಯ ವಿ.ಕಾವ್ಯ ಹಾಗೂ ಶಿವಮೊಗ್ಗ ಜಿಲ್ಲೆಯ ಎನ್.ಆರ್.ಕಾವ್ಯ ಅವರನ್ನು ಭಾನುವಾರ ಕನ್ನಡ ಸೇನೆ ಜಿಲ್ಲಾ ಘಟಕದಿಂದ ನಗರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿಸಿ ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಡಾ.ಧನಿಯಾಕುಮಾರ್, ಸಾಮಾನ್ಯ ಕುಟುಂಬದಿಂದ ಬಂದ ದೀಪಿಕ ಅವರು ಭಾರತ ಕ್ರಿಕೆಟ್‌ ತಂಡದ ನಾಯಕಿಯಾಗಿ, ತಂಡವನ್ನು ಸಮರ್ಥವಾಗಿ ಮುನ್ನಡೆಸಿ ಟೂರ್ನಿಯ ಎಲ್ಲಾ ಪಂದ್ಯಗಳನ್ನು ಗೆದ್ದು ಅಂತಿಮವಾಗಿ ವಿಶ್ವಕಪ್ ಮುಡಿಗೇರಿಸಿ ಭಾರತದ ಕೀರ್ತಿಯನ್ನು ವಿಶ್ವ ಮಟ್ಟಕ್ಕೆ ಹರಡಿದ್ದಾರೆ ಎಂದು ಅಭಿನಂದಿಸಿದರು.ಇವರ ಸಾಧನೆ ಮತ್ತಷ್ಟು ಹೆಚ್ಚಾಗಲಿ, ದೇಶದ ಕ್ರಿಕೆಟ್ ಪ್ರೇಮಿಗಳ ಹಾರೈಕೆ ಸದಾ ನಿಮ್ಮ ಮೇಲಿರುತ್ತದೆ. ಗ್ರಾಮೀಣ ಕ್ರೀಡಾಪಟುಗಳ ಪ್ರತಿಭೆ ಗುರುತಿಸಿ ಅವರು ಕ್ರೀಡೆಯಲ್ಲಿ ಬೆಳಗಲು ಸರ್ಕಾರ ಅವಕಾಶಗಳನ್ನು ಕಲ್ಪಿಸಬೇಕು ಎಂದರು.ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಕನ್ನಡಸೇನೆ ಗೌರವಾಧ್ಯಕ್ಷ ಆರ್.ಎನ್.ವೆಂಕಟಾಚಲ, ನಗರ ಅದ್ಯಕ್ಷ ಜೆ.ವಿಠಲ್, ಮುಖಂಡರಾದ ಗುರುರಾಘವೇಂದ್ರ, ರಾಮಚಂದ್ರರಾವ್, ಶಬ್ಬೀರ್‌ಅಹ್ಮದ್, ನಟರಾಜಶೆಟ್ಟಿ, ಆದಿಲ್ ಪಾಷಾ, ಬೆಸೆಕ್ಸ್ರಾಮರಾಜ್ ಮೊದಲಾದವರು ಹಾಜರಿದ್ದರು.