ಸಾರಾಂಶ
ಗುರುನಾಥ ಘೋರ್ಪಡೆ ಅವರು 1994ರಲ್ಲಿ ಪ್ರಥಮ ಬಾರಿಗೆ ಶಿರೂರ ಗ್ರಾಪಂ ಸದಸ್ಯರಾಗಿ ರಾಜಕೀಯ ಆರಂಭಿಸಿ ಸತತ 25 ವರ್ಷ ಗ್ರಾಪಂ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗುವ ಮೂಲಕ ಸೋಲಿಲ್ಲದ ಸರದಾರರಾಗಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದವರು.
ಕುಂದಗೋಳ:
ಜಿ.ಜಿ. ಘೋರ್ಪಡೆ ಕನ್ನಡ ಸಾಹಿತ್ತ ಪರಿಷತ್ತಿನ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ಪಟ್ಟಣದಲ್ಲಿ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ಮೂಲಕ ಕನ್ನಡದ ಕಂಪು ಹರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಸಹಕಾರಿ ಧುರೀಣ ಅರವಿಂದ ಕಟಗಿ ಹೇಳಿದರು.ಅವರು ಪಟ್ಟಣದ ಎಫ್.ಕೆ. ಬಾಳಿಹಳ್ಳಿಮಠ ಮತ್ತು ಗಾಂಧಿ ಹಿಂದಿ ವಿದ್ಯಾಪೀಠದಲ್ಲಿ ಜಿ.ಡಿ. ಘೋರ್ಪಡೆ ಅವರಿಗೆ ಹಮ್ಮಿಕೊಳ್ಳಲಾಗಿದ್ದ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗುರುನಾಥ ಘೋರ್ಪಡೆ ಅವರು 1994ರಲ್ಲಿ ಪ್ರಥಮ ಬಾರಿಗೆ ಶಿರೂರ ಗ್ರಾಪಂ ಸದಸ್ಯರಾಗಿ ರಾಜಕೀಯ ಆರಂಭಿಸಿ ಸತತ 25 ವರ್ಷ ಗ್ರಾಪಂ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗುವ ಮೂಲಕ ಸೋಲಿಲ್ಲದ ಸರದಾರರಾಗಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದವರು. ಇಂತಹ ಮಹಾನ್ ಚೇತನ ನಮ್ಮನ್ನು ಅಗಲಿರುವುದು ತೀವ್ರ ನೋವುಂಟು ಮಾಡಿದೆ ಎಂದರು.ಜಾನಪದ ವಿದ್ವಾಂಸ, ನಿವೃತ್ತ ಶಿಕ್ಷಕ ರಾಮು ಮೂಲಗಿ ಮಾತನಾಡಿ, ಜಿ.ಡಿ. ಘೋರ್ಪಡೆ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಅಪಾರ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ, ಕುಟುಂಬದವರಿಗೆ ದುಖಃ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದರು.
ಜಿ.ಡಿ. ಘೋರ್ಪಡೆ ಎಲ್ಲರ ಮನಃದಲ್ಲಿ ಸದಾ ನೆನಪು ಇರಲಿ ಎಂದು ಅವರ ಹೆಸರಿನಲ್ಲಿ ದತ್ತಿ ಇಡಬೇಕೆಂದು ತೀರ್ಮಾನಿಸಲಾಯಿತು. ಸೇರಿದ ಸಭಿಕರೆಲ್ಲರೂ ಸ್ವಯಂಪ್ರೇರಿತರಾಗಿ ಸುಮಾರು ₹25 ಸಾವಿರ ದತ್ತಿ ಹಣ ಸಂಗ್ರಹಿಸಲಾಯಿತು. ಈ ಹಣವನ್ನು ಪಟ್ಟಣದ ಪಿ.ಎಲ್.ಡಿ ಬ್ಯಾಂಕಿನಲ್ಲಿ ಇಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಕಲ್ಯಾಣಪುರ ಮಠದ ಬಸವಣ್ಣಜ್ಜನವರು ಸಾನ್ನಿಧ್ಯ ವಹಿಸಿದ್ದರು. ಗಾಂಧಿ ವಿದ್ಯಾಪೀಠದ ಸಂಸ್ಥಾಪಕ ಎಫ್.ಕೆ. ಬಾಳಿಹಳ್ಳಿಮಠ, ಜಗದೇವಯ್ಯ ಹಿರೇಮಠ, ಶಿಕ್ಷಕ ಗುರುಸ್ವಾಮಿ ಬಾಳಿಹಳ್ಳಿಮಠ, ಎಸ್.ಸಿ. ಶಾನವಾಡ, ಮಂಜುನಾಥ ತಿರ್ಲಾಪೂರ, ಪ್ರಕಾಶ ಮಡಿವಾಳರ, ಎಸ್.ಎನ್. ಕರೆಕನ್ನಮ್ಮನವರ, ಚಂದ್ರಶೇಖರ ಪಾಟೀಲ, ಸಂಬಾಜಿ ತಡಸದ, ಕಲ್ಲಪ್ಪ ಹರಕುಣಿ, ಪಪಂ ಸದಸ್ಯ ಮಂಜುನಾಥ ಹಿರೇಮಠ, ರಾಘಣ್ಣ ನೆರ್ತಿ, ಲೋಕೇಶ ಸರಾವರಿ, ದೊಡಮನಿ ಸೇರಿದಂತೆ ಹಲವರಿದ್ದರು.