ವಿಪ ಚುನಾವಣೆ: ಚನ್ನಗಿರಿಯಲ್ಲಿ ಶಾಂತಿಯುತ ಮತದಾನ

| Published : Jun 04 2024, 12:30 AM IST

ವಿಪ ಚುನಾವಣೆ: ಚನ್ನಗಿರಿಯಲ್ಲಿ ಶಾಂತಿಯುತ ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ನೈಋತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಮತದಾನವು ಸೋಮವಾರ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭಗೊಂಡು ಸಂಜೆ 4 ಗಂಟೆವರೆಗೆ ಶಾಂತಿಯುತವಾಗಿ ನಡೆಯಿತು.

ಚನ್ನಗಿರಿ: ನೈಋತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಮತದಾನವು ಸೋಮವಾರ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭಗೊಂಡು ಸಂಜೆ 4 ಗಂಟೆವರೆಗೆ ಶಾಂತಿಯುತವಾಗಿ ನಡೆಯಿತು.

ಚನ್ನಗಿರಿ ಪಟ್ಟಣದ ಮತಗಟ್ಟೆಯ ಕೇಂದ್ರವಾದ ತಾಲೂಕು ಪಂಚಾಯಿತಿ ಕಚೇರಿಯು ರಾಷ್ಟ್ರೀಯ ಹೆದ್ದಾರಿ 13ರ ಪಕ್ಕದಲ್ಲಿಯೇ ಇದೆ. ಮತದಾನ ಮಾಡಲು ಮತದಾರರು ಮತಗಟ್ಟೆಗೆ ಗುಂಪು ಗುಂಪಾಗಿ ಆಗಮಿಸುವಾಗ ಕೆಲ ನಿಮಿಷ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿತ್ತು. ಮತಗಟ್ಟೆಯ ತುಸು ದೂರದಲ್ಲಿಯೇ ವಿವಿಧ ಅಭ್ಯರ್ಥಿಗಳ ಪರವಾಗಿ ಕಾರ್ಯಕರ್ತರು ಮತದಾರರಿಗೆ ಗುರುತಿನ ಪತ್ರ ಮತ್ತು ಕ್ರಮ ಸಂಖ್ಯೆ, ಹೆಸರುಗಳನ್ನು ಬರೆದು ಕೊಡಲು ಪೆಂಡಾಲ್‌ಗಳನ್ನು ಹಾಕಲಾಗಿತ್ತು. ಈ ಪೆಂಡಾಲ್‌ನ ಮುಂಭಾಗದಲ್ಲಿ ಜನಜಂಗುಳಿ ಇತ್ತು.

ಮತಗಟ್ಟೆಯ ಬಳಿಯಿದ್ದ ಪೊಲೀಸರು ಮತದಾನ ಮಾಡಲು ಬರುತ್ತಿದ್ದ ಮತದಾರರು ಮೊಬೈಲ್‌ಗಳನ್ನು ಮತದಾನ ಕೇಂದ್ರದ ಒಳಗೆ ತೆಗೆದುಕೊಂಡು ಹೋಗಬೇಡಿ ಎಂದು ಕಟ್ಟುನಿಟ್ಟಾಗಿ ಹೇಳುತ್ತಿದ್ದರು. ಆಗ ಮತದಾರರು ಪರಿಚಿತರ ಕೈಗಳಿಗೆ ಮೊಬೈಲ್‌ಗಳನ್ನು ಕೊಡಲು ಹುಡುಕಾಟ ನಡೆಸುತ್ತಿದ್ದರು. ಮೊಬೈಲ್‌ಗಳನ್ನು ತೆಗೆದುಕೊಂಡವರು ಮತದಾನ ಮಾಡಿ ಬಂದವರ ಕೈಗೆ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

- - - -3ಕೆಸಿಎನ್‌ಜಿ4:

ಮತಗಟ್ಟೆಯ ತುಸು ದೂರದಲ್ಲಿಯೇ ವಿವಿಧ ಅಭ್ಯರ್ಥಿಗಳ ಪರವಾಗಿ ಕಾರ್ಯಕರ್ತರು ಮತದಾರರಿಗೆ ಗುರುತಿನ ಪತ್ರ ಮತ್ತು ಕ್ರಮ ಸಂಖ್ಯೆ, ಹೆಸರುಗಳನ್ನು ಬರೆದು ಕೊಡಲು ಹಾಕಲಾಗಿದ್ದ ಪೆಂಡಾಲ್‌ಗಳ ಬಳಿ ಜನಜಂಗುಳಿ.