ಎಲ್ಲೇಡೆ ಕನ್ನಡ ಡಿಂಡಿಮ: ಭುವನೇಶ್ವರಿಯ ಭವ್ಯ ಮೆರವಣಿಗೆ

| Published : Nov 02 2023, 01:00 AM IST

ಸಾರಾಂಶ

ಎಲ್ಲೆಡೆ ಕನ್ನಡ ಡಿಂಡಿಮ: ಭುವನೇಶ್ವರಿಯ ಭವ್ಯ ಮೆರವಣಿಗೆ
ಹಳೆಬಸ್ ನಿಲ್ದಾಣದ ಬಳಿಯಲ್ಲಿ ಅಧ್ಯಕ್ಷ ಆಂಜನೇಯ ಬಂಢಾರಿ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ, ದಾಸೋಹ ಕನ್ನಡಪ್ರಭ ವಾರ್ತೆ ಲಿಂಗಸುಗೂರು ಕನ್ನಡ ರಾಜ್ಯೋತ್ಸವದ ನಿಮಿತ್ತ ಪಟ್ಟಣದಲ್ಲಿ ಕನ್ನಡಪರ ಸಂಘಟನೆಗಳು ಕನ್ನಡದ ಧ್ವಜಾರೋಹಣ ಮಾಡಿ ಭುವನೇಶ್ವರಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಜೊತೆಗೆ ಪಟ್ಟಣದಾದ್ಯಂತ ಭವ್ಯ ಮೆರವಣಿಗೆ ಮಾಡುವ ಮೂಲಕ ಎಲ್ಲೆಡೆ ಕನ್ನಡ ಕಂಪು ಪಸರಿಸುವಂತೆ ಮಾಡಿದರು. ಪಟ್ಟಣದ ಗಡಿಯಾರ ವೃತ್ತದ ಹತ್ತಿರ ಕರವೇ ಅಧ್ಯಕ್ಷ ಜಿಲಾನಿ ಪಾಷಾರವರು ತಹಸೀಲ್ದಾರ ಎನ್. ಶಂಶಾಲಂ, ಇಒ ಅಮರೇಶ, ಸಿಪಿಐ ಸಂಜೀವ ಕುಮಾರ, ಮುಖ್ಯವೈದ್ಯಾಧಿಕಾರಿ ಡಾ.ರುದ್ರಗೌಡ, ಗುತ್ತೆದಾರ ಶ್ರೀನಿವಾಸ ಅಮ್ಮಾಪುರೊಡಗೂಡಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಾಡ ಧ್ವಜಾರೋಹಣ ಮಾಡಿದರು. ಬಳಿಕ ಭುವನೇಶ್ವರಿ ಭಾವಚಿತ್ರವನ್ನು ಪಟ್ಟಣದಲ್ಲಿ ನಾನಾ ವಾದ್ಯಮೇಳಗಳೊಂದಿಗೆ ಭವ್ಯ ಮೆರವಣಿಗೆ ಮಾಡುವ ಮೂಲಕ ರಾಜ್ಯೋತ್ಸವವನ್ನು ವಿಜೃಂಬಣೆಯಿಂದ ಆಚರಣೆ ಮಾಡಿದರು. ದಾಸೋಹ: ರಾಜ್ಯೋತ್ಸವದ ನಿಮಿತ್ತ ಪಟ್ಟಣದ ಹಳೆಬಸ್ ನಿಲ್ದಾಣದ ಬಳಿಯಲ್ಲಿ ಅಧ್ಯಕ್ಷ ಆಂಜನೇಯ ಬಂಢಾರಿ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಸಾರ್ವಜನಿಕರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಹಿರಿಯ ಮುಖಂಡ ಪಾಮಯ್ಯ ಮುರಾರಿ, ಭೀಮೇಶ ನಾಯಕ, ನಾಗರಾಜ ನಾಯಕ, ಕುರುಮೇಶ, ವೆಂಕಟೇಶ ಉಪ್ಪಾರ, ಸಲೀಂಖಾನ್, ಶಿವು ಪತ್ತಾರ, ಮೌನುದ್ದೀನ್, ಮೌನೇಶ ಬುಳ್ಳಾಪುರ, ರವಿಕುಮಾರ ಜೋಗೇರ ಸೇರಿದಂತೆ ಇದ್ದರು. ನೂತನ ಧ್ವಜಕಟ್ಟೆ: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಬಳಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ನೂತನ ಕನ್ನಡದ ಧ್ವಜಕಟ್ಟೆ ನಿರ್ಮಿಸಿ ಅಧ್ಯಕ್ಷ ಮಾದೇಶ ಸರ್ಜಾಪುರ ನೇತೃತ್ವದಲ್ಲಿ ನಾಡ ಧ್ವಜಾರೋಹಣ ಮಾಡಲಾಯಿತು. ಈ ವೇಳೆ ಡಾ.ಆನಂದ, ಪ್ರಭು ಹವಾಲ್ದಾರ, ಶರಣಬಸವ ಈಚನಾಳ, ಚಿಂತನಾ ನಾಯಕ ಸೇರಿದಂತೆ ಇದ್ದರು. ಸಮಾರಂಭ: ಪಟ್ಟಣದ ಪ್ರವಾಸಿ ಮಂದಿರದ ವೃತ್ತದಲ್ಲಿ ಅಧ್ಯಕ್ಷ ಶಿವರಾಜ ನಾಯ್ಕ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿಸಿ ನಂತರ ಬಹಿರಂಗ ಸಭೆ ನಡೆಸಲಾಯಿತು. ಈ ವೇಳೆ ಪುರಸಭೆ ಮಾಜಿ ಉಪಾಧ್ಯಕ್ಷ ಮಹ್ಮದ್‌ ರಫಿ ಮಾತನಾಡಿ, ಕನ್ನಡ ಭಾಷೆ ಉಳಿಸಿ ಬೆಳೆಸಲು ಕನ್ನಡಪರ ಸಂಘಟನೆಗಳು ಜಾಗೃತಿಯಿಂದ ಕೆಲಸ ಮಾಡುತ್ತಿದ್ದು, ಕನ್ನಡಗರಿ ಸ್ವಾಭಿಮಾನದಂತೆ ಇದ್ದಾರೆ. ಕನ್ನಡ ಸಂಘಟನೆಗಳಿಗೆ ಬೆಂಬಲಿಸುವ ಮೂಲಕ ನಾಡು-ನುಡಿ ರಕ್ಷಣೆ ಕೈಂಕರ್ಯಕ್ಕೆ ಕೈಜೋಡಿಸೋಣ ಎಂದು ಕರೆ ನೀಡಿದರು. - - - 01ಕೆಪಿಎಲ್ಎನ್ಜಿ02 : ಕನ್ನಡ ರಾಜ್ಯೋತ್ಸವದ ನಿಮಿತ್ತ ಅಧ್ಯಕ್ಷ ಆಂಜನೇಯ ಬಂಡಾರಿ ಧ್ವಜಾರೋಹಣ ನೇರವೇರಿಸಿದ ಬಳಿಕ ಸಾರ್ವಜನಿಕರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. 01ಕೆಪಿಎಲ್ಎನ್ಜಿ03 : ಲಿಂಗಸುಗೂರಲ್ಲಿ ಕರವೇಯಿಂದ ಹಮ್ಮಿಕೊಂಡಿದ್ದ ಧ್ವಜಾರೋಹಣವನ್ನು ಅಧ್ಯಕ್ಷ ಜಿಲಾನಿ ಪಾಷಾ ನಾನಾ ಇಲಾಖೆ ಅಧಿಕಾರಿಗಳಿಂದ ನೇರವೇರಿಸಿದರು. 01ಕೆಪಿಎಲ್ಎನ್ಜಿ04 : ಲಿಂಗಸುಗೂರಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತ ನೂತನ ಧ್ವಜಕಟ್ಟೆ ನಿರ್ಮಿಸಿದ ಧ್ವಜಾರೋಹಣ ಮಾಡಿದ ಕರವೇ ಅಧ್ಯಕ್ಷ ಮಾದೇಶ ಸರ್ಜಾಪುರ ರವರನ್ನು ಸನ್ಮಾನಿಸಲಾಯಿತು. 01ಕೆಪಿಎಲ್ಎನ್ಜಿ05 : ಲಿಂಗಸುಗೂರಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಧ್ವಜಾರೋಹಣ ಸಮಾರಂಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಮಹ್ಮದ ರಫಿ ಮಾತನಾಡಿದರು.