ಸಾರಾಂಶ
ರಂಭಾಪುರಿ ಪೀಠದಿಂದ ಕಲಾರಂಗ ಕ್ರೀಡಾಂಗಣದವರೆಗೆ ಬೃಹತ್ ಜಾಥಾಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಪಟ್ಟಣದ ಮಲ್ನಾಡ್ ಗೆಳೆಯರ ಬಳಗದಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ದರ್ಬಾರ್ ಹೆಸರಿನಲ್ಲಿ ಅಲಂಕೃತ ವಾಹನಗಳ ಬೃಹತ್ ಜಾಥಾ ನ.1ರಂದು ನಡೆಯಲಿದೆ ಎಂದು ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ.ಮಧುಸೂದನ್ ತಿಳಿಸಿದರು.ಮಲ್ನಾಡ್ ಗೆಳೆಯರ ಬಳಗದಿಂದ ಕಳೆದ ವರ್ಷದಿಂದ ರಾಜ್ಯೋತ್ಸವ ಅಂಗವಾಗಿ ಅಲಂಕೃತ ವಾಹನ ಜಾಥಾ ಆಯೋಜಿಸಿದ್ದು, ಕಳೆದ ವರ್ಷ ಈ ಕನ್ನಡ ಜಾಥಾಕ್ಕೆ ವ್ಯಾಪಕ ಬೆಂಬಲ ದೊರೆತಿತ್ತು. ಈ ಹಿನ್ನೆಲೆ ಯಲ್ಲಿ ಈ ಬಾರಿ ಕನ್ನಡ ದರ್ಬಾರ್ ಹೆಸರಿನಲ್ಲಿ ವಾಹನಗಳ 2ನೇ ವರ್ಷದ ಜಾಥಾ ಆಯೋಜಿಸಲಾಗಿದೆ ಎಂದು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಾಹನ ಜಾಥಾ ನ.1ರ ಶನಿವಾರ ಮಧ್ಯಾಹ್ನ 2 ಗಂಟೆಗೆ ರಂಭಾಪುರಿ ಪೀಠದಿಂದ ಆರಂಭ ಗೊಳ್ಳಲಿದ್ದು, ಬಾಳೆಹೊನ್ನೂರು ಪಟ್ಟಣದಾದ್ಯಂತ ಸಂಚರಿಸಿ ಕಲಾರಂಗ ಕ್ರೀಡಾಂಗಣದಲ್ಲಿ ಸಮಾಪ್ತಿ ಗೊಳ್ಳಲಿದೆ. ಬಳಿಕ ಕಲಾರಂಗ ಕ್ರೀಡಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.ಜಾಥಾದಲ್ಲಿ ವಿಶೇಷವಾಗಿ ಅಲಂಕೃತಗೊಂಡ ವಾಹನಗಳಿಗೆ ಪ್ರತ್ಯೇಕ ವಿಭಾಗದಡಿ ನಗದು ಪುರಸ್ಕಾರ, ಪಾರಿತೋಷಕ ನೀಡಿ ಗೌರವಿಸಲಾಗುವುದು. ದ್ವಿಚಕ್ರ, ನಾಲ್ಕು ಚಕ್ರ, ಗೂಡ್ಸ್, ಲಾರಿ, ಜೆಸಿಬಿ, ಕ್ರೇನ್ ಟ್ರ್ಯಾಕ್ಟರ್ ಈ ಎಲ್ಲಾ ವಿಭಾಗದಲ್ಲೂ ಪ್ರತ್ಯೇಕವಾಗಿ ಪ್ರಥಮ ಬಹುಮಾನ ನೀಡಲಾಗುವುದು.ಜಾಥಾದಲ್ಲಿ ಪಾಲ್ಗೊಳ್ಳುವ ವಾಹನಗಳಿಗೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಆದರೆ ನೋಂದಣಿ ಮಾಡುವುದು ಕಡ್ಡಾಯ ಹಾಗೂ ಯಾವುದೇ ಪ್ರದೇಶಗಳ ವಾಹನ ಮುಕ್ತವಾಗಿ ಪಾಲ್ಗೊಳ್ಳಬಹುದು ಎಂದು ತಿಳಿಸಿದರು.
ಸಂಘಟಕ ಬಿ.ಸಿ.ಸಂತೋಷ್‌ಕುಮಾರ್ ಮಾತನಾಡಿ, ವಾಹನ ಜಾಥಾದಲ್ಲಿ ಅತ್ಯುತ್ತಮವಾಗಿ ಅಲಂಕೃತ ಗೊಂಡ ವಾಹನಗಳಿಗೆ ರಾಜರಥ-2025 ಬಿರುದಿನೊಂದಿಗೆ, ನಗದು, ಟ್ರೋಫಿ ನೀಡಲಾಗುವುದು. ದ್ವಿತೀಯ ಸ್ಥಾನ ಪಡೆದ ವಾಹನಗಳಿಗೆ ಟ್ರೋಫಿ ಮಾತ್ರ ನೀಡಲಾಗುವುದು.ದ್ವಿಚಕ್ರ ವಾಹನ ವಿಭಾಗದಲ್ಲಿ ಮಹಿಳೆಯರು, ಪುರುಷರಿಗೆ ತಲಾ ₹10 ಸಾವಿರ ನಗದು, ಟ್ರೋಫಿ, ತ್ರಿಚಕ್ರ ವಾಹನ ವಿಭಾಗದಲ್ಲಿ ಪ್ಯಾಸೆಂಜರ್ ಆಟೋ, ಗೂಡ್ಸ್ ಆಟೋಗಳಿಗೆ ತಲಾ ₹15 ಸಾವಿರ ನಗದು, ಟ್ರೋಫಿ, ನಾಲ್ಕು ಚಕ್ರ ವಿಭಾಗದಲ್ಲಿ ಮಹಿಳೆಯರು, ಪುರುಷರಿಗೆ ಹಾಗೂ ಗೂಡ್ಸ್ ವಾಹನಗಳಿಗೆ ತಲಾ ₹20 ಸಾವಿರ ನಗದು, ಟ್ರೋಫಿ, ಟ್ರ್ಯಾಕ್ಟರ್ ವಿಭಾಗದಲ್ಲಿ ₹20 ಸಾವಿರ ನಗದು, ಟ್ರೋಫಿ, ಲಾರಿ ವಿಭಾಗದಲ್ಲಿ ₹25 ಸಾವಿರ ನಗದು, ಟ್ರೋಫಿ, ಜೆಸಿಬಿ ಹಾಗೂ ಕ್ರೇನ್ ವಿಭಾಗದಲ್ಲಿ ₹20 ಸಾವಿರ ನಗದು, ಟ್ರೋಫಿಗಳನ್ನು ವಿಜೇತರಿಗೆ ನೀಡಲಾಗುವುದು.ನ.1ರಂದು ಬೆಳಿಗ್ಗೆ 10ರಿಂದ 1 ಗಂಟೆವರೆಗೆ ರಂಭಾಪುರಿ ಪೀಠದಲ್ಲಿ ಕೌಂಟರ್ ತೆರೆದಿರಲಿದ್ದು, ಜಾಥಾದಲ್ಲಿ ಪಾಲ್ಗೊಳ್ಳುವ ವಾಹನಗಳು ನೋಂದಣಿ ಮಾಡಿಸಬಹುದು. ಸ್ಪರ್ಧೆಯಲ್ಲಿ ಭಾಗವಹಿಸುವ ವಾಹನಗಳು ಮಧ್ಯಾಹ್ನ 2 ಗಂಟೆ ಒಳಗೆ ಸ್ಥಳದಲ್ಲಿ ಹಾಜರಿರಬೇಕು.ಸ್ಪರ್ಧೆಯಲ್ಲಿ ಭಾಗವಹಿಸಿದ ವಾಹನಗಳ ಕ್ರಿಯಾಶೀಲತೆ ಅಲಂಕಾರ, ಪರಿಕಲ್ಪನೆ ಆಧಾರದಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗುವುದು. ಜಾಥಾದಲ್ಲಿ ಪಾಲ್ಗೊಳ್ಳುವ ವಾಹನಗಳು ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜ ಹೊರತುಪಡಿಸಿ ಬೇರೆ ಯಾವುದೇ ಧ್ವಜಗಳನ್ನು ಕಟ್ಟಲು ಅವಕಾಶವಿರುವುದಿಲ್ಲ.
ಜಾಥಾದಲ್ಲಿ ನೋಂದಣಿ ಮಾಡಿಸುವವರು 9482003480, 8277377722 ಸಂಖ್ಯೆಗಳನ್ನು ಸಂಪರ್ಕಿಸಿ ನೋಂದಾಯಿಸಬಹುದು ಎಂದು ತಿಳಿಸಿದರು.ಮಲ್ನಾಡ್ ಗೆಳೆಯರ ಬಳಗದ ಕಾರ್ಯದರ್ಶಿ ಸಿ.ಪಿ.ರಮೇಶ್, ಖಜಾಂಚಿ ಜಾನ್ ಡಿಸೋಜಾ, ಸದಸ್ಯರಾದ ಎಸ್.ಎಲ್.ಚೇತನ್, ದೀಪಕ್ ಗಾಮಾ ಮತ್ತಿತರರು ಹಾಜರಿದ್ದರು.
೨೯ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ಮಲ್ನಾಡ್ ಗೆಳೆಯರ ಬಳಗದಿಂದ ನ.1ರಂದು ನಡೆಯುವ ಕನ್ನಡ ದರ್ಬಾರ್ ಅಲಂಕೃತ ವಾಹನಗಳ ಬೃಹತ್ ಜಾಥಾದ ಆಹ್ವಾನ ಪತ್ರಿಕೆಯನ್ನು ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ.ಮಧುಸೂದನ್ ಬಿಡುಗಡೆಗೊಳಿಸಿದರು. ಬಿ.ಸಿ.ಸಂತೋಷ್‌ಕುಮಾರ್, ಸಿ.ಪಿ.ರಮೇಶ್, ಜಾನ್ ಡಿಸೋಜಾ, ಎಸ್.ಎಲ್.ಚೇತನ್, ದೀಪಕ್ ಗಾಮಾ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))