ಐತಿಹಾಸಿಕ ಕೋಟೆಯಲ್ಲಿ ಹಾರಾಡಿದ ಕನ್ನಡ ಬಾವುಟ

| Published : Nov 02 2024, 01:36 AM IST

ಸಾರಾಂಶ

ಪ್ರತಿಯೊಬ್ಬರಿಗೆ ತಮ್ಮ ಮಾತೃಭಾಷೆಯ ಮೇಲೆ ಪ್ರೀತಿ ಇರಬೇಕು, ಆದರೆ, ವಾಸಿಸುವ ನಾಡಿನ ಭಾಷೆಯ ಮೇಲೆ ಕೂಡ ಗೌರವ ಹೊಂದಿರಬೇಕು, ಅದರಂತೆ, ಎಲ್ಲರೂ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ. ಎನ್. ಭೀಮುನಾಯಕ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಪ್ರತಿಯೊಬ್ಬರಿಗೆ ತಮ್ಮ ಮಾತೃಭಾಷೆಯ ಮೇಲೆ ಪ್ರೀತಿ ಇರಬೇಕು, ಆದರೆ, ವಾಸಿಸುವ ನಾಡಿನ ಭಾಷೆಯ ಮೇಲೆ ಕೂಡ ಗೌರವ ಹೊಂದಿರಬೇಕು, ಅದರಂತೆ, ಎಲ್ಲರೂ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ. ಎನ್. ಭೀಮುನಾಯಕ ಕರೆ ನೀಡಿದರು. ಶುಕ್ರವಾರ, ಇಲ್ಲಿನ ಕರವೇ ಜಿಲ್ಲಾ ಕಾರ್ಯಾಲಯದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಸುಮಾರು 2 ಸಾವಿರ ವರ್ಷದ ಇತಿಹಾಸವಿದೆ. ಪ್ರಪಂಚದಲ್ಲಿ ಕನ್ನಡ ಭಾಷೆ ಅತಿ ಶ್ರೇಷ್ಠವಾದ ಭಾಷೆಯಾಗಿದ್ದು, ಈ ಒಂದು ಭಾಷಾಭಿಮಾನ ಕೇವಲ ರಕ್ಷಣಾ ವೇದಿಕೆ ಕಾರ್ಯಕರ್ತರಿಗೆ ಸೀಮಿತವಾಗಬಾರದೆಂದು ಹೇಳಿದರು, ಗಡಿ ಭಾಗಗಳಲ್ಲಿ ಏಕ್ಕಡ, ಏನ್ನಡ ಮರೆ ಮಾಚುತ್ತಿದೆ ಎಂದರೆ ಅದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರಿಂದಲೇ ಎಂದು ಹೇಳಲು ಹೆಮ್ಮೆ ಅನಿಸುತ್ತದೆ ಎಂದು ಕಾರ್ಯಕರ್ತರ ಕನ್ನಡ ಉಳಿವಿಕೆಗಾಗಿನ ಹೋರಾಟವನ್ನು ಶ್ಲಾಘಿಸಿದರು.ಕರವೇ ವತಿಯಿಂಧ ಯಾದಗಿರಿ ನಗರದ ವಾಲ್ಮೀಕಿ ವೃತ್ತ, ನೇತಾಜಿ ಡಾ. ಸುಭಾಶ್ಚಂದ್ರ ಭೋಸ್‌ ವೃತ್ತ, ಲಾಲ್‌ ಬಹಾದ್ದೂರ್ ಶಾಸ್ತ್ರಿ ವೃತ್ತ, ಹೊಸ ಬಸ್‌ ನಿಲ್ದಾಣ, ಲುಂಬಿನಿ ಉದ್ಯಾನವನ ಹಾಗೂ ಬಸವೇಶ್ವರ ವೃತ್ತ, ಮಹಾತ್ಮಾ ಗಾಂಧಿ ವೃತ್ತ, ಮತ್ತು ಕನಕದಾಸರ ವೃತ್ತಕ್ಕೆ ಧ್ವಜಾರೋಹಣ ನೆರವೇರಿಸಲಾಯಿತು. ಇದೇ ವೇಳೆ, ಯಾದಗಿರಿಯ ಐತಿಹಾಸಿಕ ಕೋಟೆಯ ಮೇಲ್ಗಡೆ ಕರವೇ ವಿದ್ಯಾರ್ಥಿ ಘಟಕ ಅಧ್ಯಕ್ಷ ವಿಶ್ವರಾಜ ಹೊನಗೇರಾ ನೇತೃತ್ವದ ವಿದ್ಯಾರ್ಥಿಗಳ ತಂಡ ಕನ್ನಡ ಬಾವುಟ ಹಾರಿಸಿದರು. ನೇತಾಜಿ ಡಾ. ಸುಭಾಶ್ಚಂದ್ರ ಭೋಸ್‌ ವೃತ್ತದಲ್ಲಿ ನಗರಸಭೆಯ ಅಧ್ಯಕ್ಷೆ ಕು.ಲಲಿತಾ ಅನಪೂರ ಅವರಿಂದ ಧ್ವಜಾರೋಹಣ ನೆರವೇರಿಸಲಾಯಿತು.

ವಿಶೇಷ ಅತಿಥಿಗಳಾಗಿ ಧ್ವಜಾರೋಹಣ ನೇರವೆರಿಸಿದ ಸಹಾಯಕ ಆಯುಕ್ತ ಡಾ ಹಂಪಣ್ಣ ಸಜ್ಜನ, ಯಾದಗಿರಿ ತಹಸೀಲ್ದಾರ ಸುರೇಶ ಅಂಕಲಿಗಿ, ಆರಕ್ಷಕ ವೃತ್ತ ನಿರೀಕ್ಷಕ ಸುನಿಲ ಮೂಲಿಮನಿ, ನಗರಸಭೆ ಪೌರಾಯುಕ್ತ ರಜನೀಕಾಂತ್ ಶೃಂಗೇರಿ ಮತ್ತು ನಗರಸಭೆ ಸದಸ್ಯರಾದ ಹಣಮಂತ ಇಟಗಿ, ಹಣಮಂತ ನಾಯಕ ಅವರಿಗೆ ಸನ್ಮಾನಿಸಲಾಯಿತು.

ಕರವೇ ಮುಖಂಡರಾದ ಸಿದ್ದುನಾಯಕ ಹತ್ತಿಕುಣಿ, ವಿಶ್ವರಾಧ್ಯ ದಿಮ್ಮೆ, ಅಂಬ್ರೇಶ ಹತ್ತಿಮನಿ, ಸಂತೋಷ ನಿರ್ಮಲಕರ್, ಹಣಮಂತ ಖಾನಳ್ಳಿ, ಪಪ್ಪುಗೌಡ ಚಿನ್ನಾಕರ್, ಹಣಮಂತ ಅಚ್ಚೋಲಾ, ಸಾಹೇಬ್‌ಗೌಡ ನಾಯಕ, ಶರಣು ಸಾಹುಕಾರ, ಸಿದ್ದಪ್ಪ ಕೂಯಿಲೂರು, ಯಮನಯ್ಯ ಗುತ್ತೆದಾರ, ಅರ್ಜುನ ಪವಾರ, ವೆಂಕಟೇಶ ಮಿಲ್ಟ್ರಿ, ಭೀಮರಾಯ್ ರಾಮಸಮುದ್ರ, ಸಿದ್ದಪ್ಪ ಕ್ಯಾಸಪನಳ್ಳಿ, ಸಿದ್ದಲಿಂಗರೆಡ್ಡಿ ಮುನಗಲ್, ಸೈದಪ್ಪ ಬಾಂಬೆ, ನಾಗು ತಾಂಡೂಲ್ಕರ್, ಅನೀಲ ದಾಸನಕೇರಿ,ಕಾಶೀನಾಥ ನಾನೇಕ, ಅಬ್ದುಲ್ ಅಜೀಜ್, ಲಕ್ಷö್ಮಣ ಜಿನಕೇರಾ, ಯಲ್ಲು ಚಾಮನಾಳ, ಹಣಮಂತ ದೊರೆ, ಬಸವರಾಜ ಕಡ್ಡಿ, ಸಾಬಣ್ಣ ಕೂಡ್ಲೂರು, ಹುಲಗಪ್ಪ ಬಜಂತ್ರಿ, ರೆಡ್ಡಿ ಕೌಳೂರು, ಮರೆಪ್ಪನಾಯಕ ಕಡ್ಡಿ, ದೇವಪ್ಪ ಕಂಚಗಾರಹಳ್ಳಿ, ಹಣಮಂತ ಶೆಟ್ಟಗೇರಾ, ಸಾಬು ಪೂಜಾರಿ, ರಮೇಶ.ಡಿ.ನಾಯಕ, ಸೇರಿದಂತೆ ಅನೇಕ ಕರವೇ ಕಾರ್ಯಕರ್ತರು ಭಾಗಿಯಾಗಿದ್ದರು.