ಹೃದಯಕ್ಕೆ ಹತ್ತಿರವಾಗುವ ಭಾಷೆ ಕನ್ನಡ: ಎಸ್.ಎಚ್.ಪೂರ್ಣೇಶ್

| Published : Nov 10 2024, 01:50 AM IST

ಹೃದಯಕ್ಕೆ ಹತ್ತಿರವಾಗುವ ಭಾಷೆ ಕನ್ನಡ: ಎಸ್.ಎಚ್.ಪೂರ್ಣೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರು, ಅತ್ಯಂತ ಶ್ರೀಮಂತ ಹಾಗೂ ಪ್ರೀತಿಯ ಭಾಷೆಯಾದ ಕನ್ನಡ ಹೃದಯಕ್ಕೆ ಹತ್ತಿರುವಾಗುವ ಭಾಷೆಯಾಗಿದೆ ಎಂದು ಎನ್.ಆರ್.ಪುರ ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಹೇಳಿದರು.

ಕಡ್ಲೇಮಕ್ಕಿಯ ಸರ್ಕಾರಿ ಕಾಲೇಜಿನಲ್ಲಿ ತಾಲೂಕು ಕಸಾಪ ಆಯೋಜಿಸಿದ್ದ ಕನ್ನಡ ರಸಪ್ರಶ್ನೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಅತ್ಯಂತ ಶ್ರೀಮಂತ ಹಾಗೂ ಪ್ರೀತಿಯ ಭಾಷೆಯಾದ ಕನ್ನಡ ಹೃದಯಕ್ಕೆ ಹತ್ತಿರುವಾಗುವ ಭಾಷೆಯಾಗಿದೆ ಎಂದು ಎನ್.ಆರ್.ಪುರ ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಹೇಳಿದರು.ಪಟ್ಟಣದ ಕಡ್ಲೇಮಕ್ಕಿಯ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಶುಕ್ರವಾರ ಆಯೋಜಿಸಿದ್ದ ಕನ್ನಡ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ಭಾಷೆ ವ್ಯಾಕರಣ, ಛಂದಸ್ಸು, ಗಾದೆಗಳು, ಒಗಟುಗಳು, ವಚನ ಮುಂತಾದವನ್ನು ಹೊಂದಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಪ್ರತಿಯೊಬ್ಬ ಕನ್ನಡಿಗರು ಮಾತೃಭಾಷೆ ಕನ್ನಡವನ್ನು ಹೆಚ್ಚಾಗಿ ಬಳಸಿ ಇತರ ಭಾಷೆಗಳನ್ನು ಗೌರವಿಸಬೇಕಿದೆ.

ಪ್ರತಿ ಮನೆ, ಹಳ್ಳಿಗಳಿಗೂ ಕನ್ನಡ ಸಾಹಿತ್ಯವನ್ನು ತಲುಪಿಸಬೇಕು ಎಂಬ ಉದ್ದೇಶದಿಂದ ತಾಲೂಕು ಕಸಾಪ ಕನ್ನಡವೇ ನಮ್ಮಮ್ಮ ಅನುದಿನವೂ ಸಾಹಿತ್ಯ ಸಂಭ್ರಮ ಎಂಬ ಶೀರ್ಷಿಕೆಯಡಿ ನವೆಂಬರ್ ಮಾಸದಲ್ಲಿ ತಾಲೂಕಿನಾದ್ಯಂತ ವಿಶೇಷ ಕಾರ್ಯಕ್ರಮ ಆಯೋಜಿಸುತ್ತಿದೆ. ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಬೇಕು ಎಂಬುದೇ ಸಾಹಿತ್ಯ ಪರಿಷತ್ತಿನ ಉದ್ದೇಶ ಎಂದು ಹೇಳಿದರು.ತಾಲೂಕು ಕಸಾಪ ಪೂರ್ವಾಧ್ಯಕ್ಷ ಕೆ.ಟಿ.ವೆಂಕಟೇಶ ಮಾತನಾಡಿ, ಕಸಾಪಕ್ಕೆ 110 ವರ್ಷಗಳ ಇತಿಹಾಸವಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಇತ್ತೀಚಿನ ಚಟುವಟಿಕೆಗಳು ನಾಡಿಗೆ ಹೆಮ್ಮೆ ತರುವಂತಿದೆ. ವಿದ್ಯಾರ್ಥಿಗಳು ಕಸಾಪದ ಬಗ್ಗೆ ಹೆಚ್ಚು ಅರಿತು ಕೊಳ್ಳಬೇಕು ಎಂದರು.ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಸತೀಶ್ ಅರಳೀಕೊಪ್ಪ ಮಾತನಾಡಿ, ತಾಲೂಕು ಕಸಾಪ ವರ್ಷವಿಡೀ ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದು, ಶಾಲಾ ಕಾಲೇಜುಗಳಲ್ಲಿ ಹೆಚ್ಚು ಕಾರ್ಯಕ್ರಮ ಮಾಡುವ ಮೂಲಕ ವಿದ್ಯಾರ್ಥಿಗಳ ಮನಮುಟ್ಟುವ ಕಾರ್ಯ ಮಾಡುತ್ತಿದೆ ಎಂದರು.ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯ ಬಿ.ಎಚ್.ಕೃಷ್ಣಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞ ಪುರುಷಭಟ್, ಹೋಬಳಿ ಕಸಾಪ ನಿಯೋಜಿತ ಅಧ್ಯಕ್ಷ ಕಾರ್ತಿಕ್ ಕಾರ್‌ಗದ್ದೆ, ರೋಟರಿ ಕ್ಲಬ್ ಅಧ್ಯಕ್ಷ ಸಿ.ಪಿ.ರಮೇಶ್, ಕಸಾಪ ಸದಸ್ಯೆ ಲತಾ, ಉಪನ್ಯಾಸಕರಾದ ಮಮತಾ ಸೋಮೇಶ್, ಮಾಲತಿ ಮತ್ತಿತರರು ಹಾಜರಿದ್ದರು.೦೯ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಸರ್ಕಾರಿ ಸ್ವತಂತ್ರ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ರಸಪ್ರಶ್ನೆ ಸ್ಪರ್ಧೆಯನ್ನು ಪ್ರಾಚಾರ್ಯ ಬಿ.ಎಚ್.ಕೃಷ್ಣಮೂರ್ತಿ ಉದ್ಘಾಟಿಸಿದರು. ಎಸ್.ಎಚ್.ಪೂರ್ಣೇಶ್, ಕೆ.ಟಿ.ವೆಂಕಟೇಶ, ಸತೀಶ್ ಅರಳೀಕೊಪ್ಪ, ಯಜ್ಞ ಪುರುಷಭಟ್ ಇದ್ದರು.