ಸೃಜನಶೀಲತೆಯಲ್ಲಿ ಕನ್ನಡ ಜಗತ್ತಿಗೆ ಮಾದರಿ

| Published : Nov 04 2024, 12:28 AM IST

ಸಾರಾಂಶ

ಕನ್ನಡ ಸಾಹಿತ್ಯದ ಮೇಲೆ ಸಂಸ್ಕೃತ, ಪ್ರಾಕೃತ, ಇಂಗ್ಲಿಷ್, ಪೋರಚುದ ಗೀಸ್, ಉರ್ದು , ಅರೇಬಿಕ್ , ಪರ್ಶಿಯನ್ ಮುಂತಾದ ಭಾಷೆಗಳ ಪ್ರಭಾವ ಆಗಾಧವಾಗಿದ್ದರೂ ಕನ್ನಡ ಭಾಷೆಯು ಅವುಗಳನ್ನು ತನ್ನೊಳಗೆ ಜೀರ್ಣಿಸಿಕೊಳ್ಳತ್ತಲೇ ಹೊಸತನದ ಮಾರ್ಗವನ್ನು ರೂಪಿಸಿಕೊಂಡಿದೆ

ಕನ್ನಡಪ್ರಭ ವಾರ್ತೆ ತುಮಕೂರುಕನ್ನಡ ಸಾಹಿತ್ಯದ ಮೇಲೆ ಸಂಸ್ಕೃತ, ಪ್ರಾಕೃತ, ಇಂಗ್ಲಿಷ್, ಪೋರಚುದ ಗೀಸ್, ಉರ್ದು , ಅರೇಬಿಕ್ , ಪರ್ಶಿಯನ್ ಮುಂತಾದ ಭಾಷೆಗಳ ಪ್ರಭಾವ ಆಗಾಧವಾಗಿದ್ದರೂ ಕನ್ನಡ ಭಾಷೆಯು ಅವುಗಳನ್ನು ತನ್ನೊಳಗೆ ಜೀರ್ಣಿಸಿಕೊಳ್ಳತ್ತಲೇ ಹೊಸತನದ ಮಾರ್ಗವನ್ನು ರೂಪಿಸಿಕೊಂಡಿದೆ ಎಂದು ಬೆಂಗಳೂರಿನ ಆರ್. ಎನ್. ಎಸ್ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಡಿ.ಸಿ.ಚಿತ್ರಲಿಂಗಯ್ಯ ತಿಳಿಸಿದರು.ನಗರದ ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ ವಿಭಾಗ, ಕ್ರೀಡೆ, ಎನ್ ಎಸ್ ಎಸ್ ಹಾಗೂ ಎನ್ ಸಿ ಸಿ ಘಟಕಗಳ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ಮಾತನಾಡಿದರು.ಅನ್ಯಭಾಷಾ ವ್ಯಾಮೋಹದಿಂದ ವ್ಯಕ್ತಿ ಬೌದ್ಧಿಕವಾಗಿ ಯಶಸ್ಸು ಪಡೆಯಲು ಅಸಾಧ್ಯ. ಸ್ಥಳೀಯ ಸಂಸ್ಕೃತಿ ವೈಶಿಷ್ಟ್ಯತೆಯನ್ನು ಪ್ರಾದೇಶಿಕ ಭಾಷೆಯಿಂದ ಮಾತ್ರ ತಿಳಿಯಲು ಸಾಧ್ಯವಾಗುತ್ತದೆ. ಜಾಗತೀಕರಣ ಮತ್ತು ಆಧುನಿಕರಣ, ಖಾಸಗೀಕರಣದ ಭರಾಟೆಯಲ್ಲೂ ಕನ್ನಡ ಸೃಜನಶೀಲತೆಯಲ್ಲಿ ಇಡೀ ಜಗತ್ತಿಗೆ ಮಾದರಿಯಾಗಿದೆ. ಕನ್ನಡ ಭಾಷೆಯನ್ನು ವರ್ತಮಾನದ ಅಗತ್ಯಗಳಿಗೆ ಅನುಗುಣವಾಗಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಂದು ಕ್ಷೇತ್ರದ ಸಾಧಕರು ಕೈಜೋಡಿಸುವುದು ಅತ್ಯಗತ್ಯವಾಗಿದೆ ಎಂದರು.ಕನ್ನಡ ಸಾಹಿತ್ಯ ಸಾಮರಸ್ಯ, ಪ್ರೀತಿ, ನಿಸ್ವರ್ಥ ವನ್ನು ಮನುಕುಲಕ್ಕೆ ಪರಿಚಯಿಸಿ ಕೊಟ್ಟಿರುವುದನ್ನು ಯಾರು ಅಲ್ಲಗಳೆಯುವಂತಿಲ್ಲ. ಭಾಷೆ ಮತ್ತು ಜನ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಜನ ಬಳಸಿದರೆ ಮಾತ್ರ ಭಾಷೆ ಬೆಳೆಯುತ್ತದೆ. ಒಂದು ಭಾಷೆ ಒಡಲಲ್ಲಿ ಸ್ಥಳೀಯ ಸಂಸ್ಕೃತಿಯು ಅಡಗಿರುತ್ತದೆ. ಹಾಗಾಗಿ ಪ್ರಾದೇಶಿಕ ಭಾಷೆಗಳ ವಿಚಾರದಲ್ಲಿ ನಾವು ಎಂದಿಗೂ ಕೀಳರಿಮೆಯನ್ನು ಹೊಂದಿರಬಾರದು. ಈ ದೇಶದಲ್ಲಿ 33 ಕೋಟಿ ದೇವರು, 66 ಸಾವಿರ ಜಾತಿ, 8 ವರ್ಗ, 125 ಉಪಭಾಷೆಗಳು ಇದ್ದು , ವೈವಿಧ್ಯತೆಯಲ್ಲಿ ಏಕತೆಯ ಸಂಕೇತವಾಗಿ ಬದುಕುವುದು ವಿಸ್ಮಯದ ಸಂಗತಿಯಾಗಿದೆ ಎಂದರು.ಕನ್ನಡ ಸಾಹಿತ್ಯದ ಮಾನವೀಯ ಸಂಗತಿಗಳು ಇಡೀ ಜಾಗತಿಕ ಮಟ್ಟದಲ್ಲಿ ಚಿಂತನೆಗೆ ಒಳಗಾಗುತ್ತಿರುವುದು ಆ ಭಾಷೆಯ ಶ್ರೀಮಂತಿಕೆಯನ್ನು ತಿಳಿಸುತ್ತದೆ. ಬೇರೆ ಬೇರೆ ದೇಶದ ವಿದ್ವಾಂಸರು ಇಲ್ಲಿನ ಸಂಸ್ಕೃತಿಗೆ ಮಾರುಹೋಗಿ ಅತ್ಯಂತ ಶ್ರೇಷ್ಠ ಕೃತಿಗಳನ್ನು ರಚಿಸಿದ್ದಾರೆ. ಈ ನೆಲೆಯಲ್ಲಿ ಕಿಟೆಲ್ ಅವರ ಕನ್ನಡ ನಿಘಂಟು ಕೃತಿಯನ್ನು ಸ್ಮರಿಸಬಹುದು ಎಂದರು. ಸಂಶೋಧಕ ಡಾ.ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ಭಾಷಾಭಿಮಾನದ ವಿಚಾರದಲ್ಲಿ ಅಳುವವರ ನಡೆ ನುಡಿಯಲ್ಲಿ ಬದ್ಧತೆ ಇಲ್ಲದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಕನ್ನಡ ಭಾವನೆಯ ಭಾಷೆಯಾಗುವ ಜೊತೆಗೆ ಬದುಕಿನ ಭಾಷೆಯಾಗಬೇಕು. ಕರ್ನಾಟಕದಲ್ಲಿ ಕನ್ನಡಿಗರು ಬೇರೆ ಭಾಷೆಯ ಜನರೊಂದಿಗೆ ವ್ಯವಹರಿಸುವ ಸಂದರ್ಭದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು. ಹೊರ ರಾಜ್ಯದವರು ಬದುಕು ನಡೆಸುವ ಸಲುವಾಗಿ ಈ ರಾಜ್ಯದಲ್ಲಿ ನೆಲೆಸಿದ್ದರೆ ಈ ಭಾಷೆಯ ಸಂಸ್ಕೃತಿಗೆ ಕಳಂಕ ತರಬಾರದು. ಬ್ಯಾಂಕ್ ಮತ್ತು ಕರ್ಖಾಭನೆ, ಖಾಸಗೀಕರಣದ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗದ ಮೊದಲ ಆದ್ಯತೆ ನೀಡಬೇಕು.ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಅಸ್ಮಿತೆಯ ವಿಚಾರದಲ್ಲಿ ಸದಾ ಕ್ರಿಯಾಶೀಲತೆಯಿಂದ ಇರಬೇಕು ಎಂದರು.ಪ್ರಾಂಶುಪಾಲ ಡಾ.ಟಿ.ಬಿ.ನಿಜಲಿಂಗಪ್ಪ ಮಾತನಾಡಿ, ಆಡುಭಾಷೆಯ ಮೂಲಕ ವ್ಯವಹಾರವನ್ನು ಅತ್ಯಂತ ಸುಲಭವಾಗಿ ನಡೆಸಬಹುದು. ಸುದೀರ್ಘ ಇತಿಹಾಸವನ್ನು ಒಳಗೊಂಡಿರುವ ಕನ್ನಡ ಭಾಷೆಯ ಬೆಳವಣಿಗೆಗೆ ಅನೇಕ ಸಾಧಕರು ಗಣನೀಯ ಪ್ರಮಾಣದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ನಿಸ್ವರ್ಥ ಸೇವೆಯನ್ನು ಸ್ಮರಿಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ.ಡಾ.ಪದ್ಮಜ ವೈ .ಎಂ, ಡಾ.ಬಿ.ಆರ್.ಚಂದ್ರಶೇಖರ್, ಸೋಮಶೇಖರ್ ಎಲ್. ಆರ್. ಕ್ಯಾಪ್ಟನ್ ರಾಮಲಿಂಗಾರೆಡ್ಡಿ ಮಾರ್ಗದರ್ಶನದಿಂದ 2024 ರಲ್ಲಿ ಅಂತಾರಾಷ್ಟ್ರೀಯ ಸ್ಕೇಟಿಂಗ್ ಮಟ್ಟದಲ್ಲಿ ತೃತೀಯ ಸ್ಥಾನವನ್ನು ಪಡೆದು ಕರ್ನಾಟಕ ಮತ್ತು ತುಮಕೂರಿಗೆ ಕೀರ್ತಿ ತಂದ ಕಾಲೇಜಿನ ಕೆಡಿಟ್ ಜಯತೀಷ್ಣ ಅವರನ್ನು ಕಾರ್ಯಮಕ್ರಮದಲ್ಲಿ ಗೌರವಿಸಲಾಯಿತು.