ಸಾರಾಂಶ
ಆಧುನಿಕ ಕನ್ನಡ ಸಾಹಿತ್ಯದ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ಕಾದಂಬರಿಗಳು ಮೇರುಕೃತಿಗಳಾಗಿವೆ ಎಂದು ಜೆ.ಸಿ. ಶೇಖರ್ ತಿಳಿಸಿದರು.
ಕನ್ನಡಪ್ರಭವಾರ್ತೆ, ಸೋಮವಾರಪೇಟೆ
ಆಧುನಿಕ ಕನ್ನಡ ಸಾಹಿತ್ಯದ ಕಾದಂಬರಿಕಾರರಾದ ಎಸ್.ಎಲ್. ಭೈರಪ್ಪ ಅವರ ಕಾದಂಬರಿಗಳು ಮೇರುಕೃತಿಗಳಾಗಿವೆ. ಇವರ ಕೃತಿಗಳು ಇಂಗ್ಲೀಷ್ ಭಾಷೆ ಹಾಗು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿರುವುದು ಕನ್ನಡ ಭಾಷೆಗೆ ದೊಡ್ಡ ಗೌರವ ಸಿಕ್ಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಜೆ.ಸಿ.ಶೇಖರ್ ಅಭಿಪ್ರಾಯಿಸಿದರು.ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಘಟಕದ ವತಿಯಿಂದ ಸಾಹಿತ್ಯ ಭವನದಲ್ಲಿ ನಡೆದ ಭೈರಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಸಾಹಿತಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಇವರ ಹಲವಾರು ಕಾದಂಬರಿಗಳು ಮರುಮುದ್ರಣಗೊಂಡು ಜನಪ್ರಿಯ ಬರಹಗಾರರಾಗಿದ್ದು, 2023ನೇ ಸಾಲಿನಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಹೇಳಿದರು. ಪರಿಷತ್‌ನ ಗೌರವ ಕಾರ್ಯದರ್ಶಿ ಜ್ಯೋತಿ ಅರುಣ್ ಭೈರಪ್ಪ ಅವರ ಬಾಲ್ಯ, ಶೈಕ್ಷಣಿಕ ಸಾಧನೆ, ಕಾದಂಬರಿಗಳ ಬಗ್ಗೆ ಮಾತನಾಡಿದರು.ಪರಿಷತ್‌ನ ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಪದಾಧಿಕಾರಿಗಳಾದ ಎ.ಪಿ.ವೀರರಾಜು, ಕೆ.ಪಿ.ದಿನೇಶ್, ಬಿ.ಇ.ಜಯೇಂದ್ರ, ಕಾಟ್ನಮನೆ ಗಿರೀಶ್ ಇದ್ದರು.