ಸಾರಾಂಶ
ನಾವು ನಮ್ಮ ಮುಂದಿನ ಪೀಳಿಗೆಗೂ ಸಹಾ ಭಾಷೆಯ ಮಹತ್ವ ತಿಳಿಸುವ ಅಗತ್ಯವಿದೆ. ನಾವು ಭಾಷಾಭಿಮಾನಿಗಳಾಗುವ ಜೊತೆ ಭಾಷೆ ಬೆಳೆಸುವ, ಬಳಸುವ ವಿಚಾರದಲ್ಲಿ ಕಟಿಬದ್ದರಾಗಬೇಕು.
ಕೊಳ್ಳೇಗಾಲ:
ಕನ್ನಡ ನಮ್ಮ ಮಾತೃಭಾಷೆ ಮಾತ್ರವಲ್ಲ . ನಮ್ಮೆಲ್ಲರ ಅಭಿಮಾನದ ಸಂಕೇತ. ಈಹಿನ್ನೆಲೆ ನಾವೆಲ್ಲರೂ ಕನ್ನಡ ಉಳಿಸಿ, ಬೆಳೆಸುವ ಮತ್ತು ಬಳಸವು ಮೂಲಕ ಕಣ ಕಣದಲ್ಲೂ ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಮಧುಸೂಧನ್ ಹೇಳಿದರು.ಅವರು ರೋಟರಿ ಮಿಟಡ್ ಟೌನ್, ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಅಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಅಯೋಜಿಸಿದ್ದ ರಸಪ್ರಶ್ನೆ ಕಾಯ೯ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಾವು ನಮ್ಮ ಮುಂದಿನ ಪೀಳಿಗೆಗೂ ಸಹಾ ಭಾಷೆಯ ಮಹತ್ವ ತಿಳಿಸುವ ಅಗತ್ಯವಿದೆ. ನಾವು ಭಾಷಾಭಿಮಾನಿಗಳಾಗುವ ಜೊತೆ ಭಾಷೆ ಬೆಳೆಸುವ, ಬಳಸುವ ವಿಚಾರದಲ್ಲಿ ಕಟಿಬದ್ದರಾಗಬೇಕು, ಕನ್ನಡ ನಮ್ಮೆಲ್ಲರ ಉಸಿರಾಗಬೇಕು ಎಂದರು.ಈಸಂದರ್ಭದಲ್ಲಿ ರೋಟರಿ ಮಿಡ್ ಟೌನ್ ಸಂಸ್ಥೆ ಅಧ್ಯಕ್ಷ ಶೇಖರ್, ಕಾರ್ಯದರ್ಶಿ ಸಂಪತ್ ಆಚಾರ್, ಹಿಂದಿನ ಅಸಿಸ್ಟೆಂಟ್ ಗವರ್ನರ್‌ಗಳಾದ ಶಿವಾನಂದ, ಡಾ.ಉಮಾಶಂಕರ, ಗಿರೀಶ್ ಜಡೆ , ವಲಯ ಸೇನಾಧಿಕಾರಿ ಮುಖೇಶ್, ನಿಕಟಪೂರ್ವ ಅಧ್ಯಕ್ಷರಾದ ಲೋಕೇಶ್, ವಿನಯ್, ಪ್ರದೀಪ್,ರಾಮಮೋಹನ್ ಇನ್ನಿತರಿದ್ದರು.------ 23ಕೆಜಿಎಲ್ 81ಕೊಳ್ಳೇಗಾಲದ ರೋಟರಿ ಭವನದಲ್ಲಿ ಅಯೋಜಿಸಿ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಧುಸೂಧನ್ ಮಾತನಾಡಿದರು. ಶೇಖರ್, ಶಿವಾನಂದ ಇನ್ನಿತರಿದ್ದರು.----;Resize=(128,128))
;Resize=(128,128))
;Resize=(128,128))