ಪರಂಪರೆಯನ್ನು ಕಾಲಘಟ್ಟದಿಂದ ಕಾಲಘಟ್ಟಕ್ಕೆ ಭಾಷೆಯ ವಿಸ್ತರಿಸುತ್ತ ಭಾವ ತೀವ್ರತೆ ಪಾತ್ರಗಳ ಭಾಗವೆ ಆಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರುಅಭಿವ್ಯಕ್ತಿಗೆ ತಕ್ಕಂತೆ ಪುನರ್ ರಚನೆಗೆ ಒಳಗಾಗುತ್ತಾ ನಮ್ಮದಾಗಿಸಿದರೆ ಭಾಷೆ ಚಲನಶೀಲವಾಗಿರುತ್ತದೆ. ಸಾಹಿತ್ಯ ಓದುವುದು ನಮ್ಮವರ ಪರಂಪರೆಯನ್ನು ಅರ್ಥೈಸುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ‌ ಬಿಳಿಮಲೆ ತಿಳಿಸಿದರು.ನಗರದ ಕಲಾಮಂದಿರ ಕಿರು ರಂಗಮಂದಿರದಲ್ಲಿ ಎಂಎಂಕೆ ಮತ್ತು ಎಸ್ ಡಿಎಂ ಮಹಿಳಾ ಕಾಲೇಜಿನ ಕನ್ನಡ ವಿಭಾಗ, ಐಕ್ಯೂಎಸಿ, ಧ್ವನಿ ಫೌಂಡೇಶನ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ- ಪುನರಾವಲೋಕನ ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಪರಂಪರೆಯನ್ನು ಕಾಲಘಟ್ಟದಿಂದ ಕಾಲಘಟ್ಟಕ್ಕೆ ಭಾಷೆಯ ವಿಸ್ತರಿಸುತ್ತ ಭಾವ ತೀವ್ರತೆ ಪಾತ್ರಗಳ ಭಾಗವೆ ಆಗುತ್ತದೆ. ಸಾಹಿತ್ಯ ಓದುವುದು ನಮ್ಮವರ ಆದ್ಯ ಕರ್ತವ್ಯ ಬ್ರಾಮಿ ಲಿಪಿಯಲ್ಲಿರುವ 52 ಅಕ್ಷರಗಳನ್ನು ಕನ್ನಡಿಗರು ಉಳಿಸಿಕೊಂಡು ಭಾಷೆಯ ಬಳಕೆಯ ದೃಷ್ಟಿಯಲ್ಲಿ ಉದಾರಿಗಳಾಗಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.ಪರ ಧರ್ಮ ಸಹಿಷ್ಣುತೆ ನಮ್ಮ ಸಾಹಿತ್ಯದ ಜೀವಾಳ ಅಸಮಾನತೆ ದಿವೇಶಗಳ ನಡುವೆ ಬದುಕುತ್ತಿರುವ ವರ್ತಮಾನದ ಸಂದರ್ಭದಲ್ಲಿ ಸಾಹಿತ್ಯ ಸರ್ವರ ಭಾವನೆಗಳಿಗೆ ಸಮಾನತೆಯ ಸಮನ್ವಯತೆಯನ್ನು ಕಾಣುವುದೆ ಆಗಿದೆ. ಕುವೆಂಪು ಅವರ ಸರ್ವ ಜನಾಂಗದ ತೋಟದ ವರ್ಣನೆ ಸಾಹಿತ್ಯದ ಜಯವೇ ಆಗಿದೆ. ಹಾಗಾಗಿ ಕವಿಗಳು ಒಂದು ಶಕ್ತಿಶಾಲಿ ನಾಡನ್ನು ಕಟ್ಟುತ್ತಾರೆ ಎಂಬ ಮಾತು ಸತ್ಯವಾಗಿದೆ ಎಂದು ಅವರು ಹೇಳಿದರು.ವರ್ತಮಾನದಲ್ಲಿ ಕಾಣುತ್ತಿರುವ ದ್ವೇಷ, ಅಸಹನೆಗೆ ಕನ್ನಡ ವಿವೇಕವನ್ನು ತೊರೆಯುತ್ತಿರುವುದೇ ಕಾರಣ. ಇಂದಿನ ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ವಾಸ್ತವ ಅರಿಯಬೇಕು. ಆಗ ಮಾತ್ರ ನಮ್ಮ ಭಾಷೆ, ಸಂಸ್ಕೃತಿ ಉಳಿಯಲಿದೆ ಎಂದು ಅವರು ಹೇಳಿದರು.

ವಿವಿಧ ಗೋಷ್ಠಿಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರೊ. ಜಯಪ್ರಕಾಶ್ ಶೆಟ್ಟಿ ಅವರು ಪ್ರಾಚೀನ ಕನ್ನಡ ಸಾಹಿತ್ಯ– ಪ್ರಸ್ತುತತೆ, ಎಂ. ರಂಗಸ್ವಾಮಿ ಅವರು ನಡುಗನ್ನಡ ಸಾಹಿತ್ಯ– ಸಮಕಾಲೀನ ನೋಟ, ಸಂಸ್ಕೃತಿ ಚಿಂತಕ ನರೇಂದ್ರ ರೈ ದೇರ್ಲಾ ಅವರು ಹೊಸಗನ್ನಡ ಸಾಹಿತ್ಯ ಮತ್ತು ಕುವೆಂಪು ಕುರಿತು ವಿಚಾರ ಮಂಡಿಸಿದರು. ಸಹಾಯಕ ಕನ್ನಡ ಪ್ರಾಧ್ಯಾಪಕರಾದ ಬಿ.ಎನ್‌. ಮಾರುತಿಪ್ರಸನ್ನ, ಕೆ.ಎನ್‌. ಅರುಣ್‌ ಕುಮಾರ್‌ ನಿರ್ವಹಿಸಿದರು.ಧ್ವನಿ ಫೌಂಡೇಶನ್ ಅಧ್ಯಕ್ಷೆ ಶ್ವೇತಾ ಮಡಪ್ಪಾಡಿ ಮತ್ತು ತಂಡದಿಂದ ಕನ್ನಡ ಕಾಜಾಣ– ಹಾಡು ಪಾಡು ಹಾಗೂ ಕುವೆಂಪು ವಿರಚಿತ ಚಿತ್ರಾಂಗದ ಖಂಡಕಾವ್ಯದ ರಂಗ ಪ್ರಸ್ತುತಿ ನಡೆಯಿತು. ಮೈಸೂರು ವಿವಿ ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಕೆ‌.ಸಿ. ಶಿವಾರೆಡ್ಡಿ ಸಮಾರೋಪ ಭಾಷಣ ಮಾಡಿದರು.ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎನ್. ಭಾರತಿ, ಪಿಯು ಕಾಲೇಜು ಪ್ರಾಂಶುಪಾಲೆ ನಯನಕುಮಾರಿ, ಐಕ್ಯೂಎಸಿ ಸಂಚಾಲಕಿ ಕೆ.ಎಸ್. ಸುಕೃತಾ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ವಿನೋದಾ ಮೊದಲಾದವರು ಇದ್ದರು.