ಬೀಳಗಿ: ಕನ್ನಡಪ್ರಭ ಮತ್ತು ಏಷಿಯಾನೆಟ್ ಸುವರ್ಣ ನ್ಯೂಸ್ ಕೇವಲ ಸುದ್ದಿ ಮತ್ತು ಮಾಹಿತಿಗಳಲ್ಲದೇ ಸಾಮಾಜಿಕ ಜವಾಬ್ದಾರಿ ನಿರ್ವಹಿಸುತ್ತ ಬಂದಿದೆ. ಬೇರೆ ಬೇರೆ ಕ್ಷೇತ್ರದಲ್ಲಿರುವ ಬಹುಮುಖ ಪ್ರತಿಭೆ ಗುರುತಿಸಿ, ಅವರನ್ನು ಪ್ರೊತ್ಸಾಹಿಸುವಂತ ಕೆಲಸ ಮಾಡುತ್ತ ಬಂದಿದೆ ಎಂದು ಮುಧೋಳ ರಾಯಲ್ ಸ್ಕೂಲ್ ಅಧ್ಯಕ್ಷೆ ಸವಿತಾ ತಿಮ್ಮಣ್ಣ ಅರಳಿಕಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬೀಳಗಿ: ಕನ್ನಡಪ್ರಭ ಮತ್ತು ಏಷಿಯಾನೆಟ್ ಸುವರ್ಣ ನ್ಯೂಸ್ ಕೇವಲ ಸುದ್ದಿ ಮತ್ತು ಮಾಹಿತಿಗಳಲ್ಲದೇ ಸಾಮಾಜಿಕ ಜವಾಬ್ದಾರಿ ನಿರ್ವಹಿಸುತ್ತ ಬಂದಿದೆ. ಬೇರೆ ಬೇರೆ ಕ್ಷೇತ್ರದಲ್ಲಿರುವ ಬಹುಮುಖ ಪ್ರತಿಭೆ ಗುರುತಿಸಿ, ಅವರನ್ನು ಪ್ರೊತ್ಸಾಹಿಸುವಂತ ಕೆಲಸ ಮಾಡುತ್ತ ಬಂದಿದೆ ಎಂದು ಮುಧೋಳ ರಾಯಲ್ ಸ್ಕೂಲ್ ಅಧ್ಯಕ್ಷೆ ಸವಿತಾ ತಿಮ್ಮಣ್ಣ ಅರಳಿಕಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ತನ್ನದೆಯಾದ ಪ್ರತಿಭೆ ಇದ್ದೇ ಇರುತ್ತದೆ. ಮಕ್ಕಳಲ್ಲಿ ಅಡಗಿರುವ ಕಲಾ ಪ್ರತಿಭೆ ಗುರುತಿಸಲು ಇದೊಂದು ವೇದಿಕೆ ಕಲ್ಪಿಸಿಕೊಡುವಂತಹ ಸುವರ್ಣಾವಕಾಶ, ಮಕ್ಕಳಲ್ಲಿರುವ ಸೃಜನಶೀಲತೆ ಹೊರಹಾಕಲು ಬಿಳಿ ಹಾಳೆಯಲ್ಲಿ ತಮ್ಮ ಕಲ್ಪನೆಗೆ ಸಂಬಂಧಿಸಿದ ವನ್ಯಜೀವಿ ಕಲೆಯನ್ನು ಚಿತ್ರಗಳ ಮೂಲಕ ಬಿಡಿಸಿ ಸಾಮಾಜಿಕ ಜವಾಬ್ದಾರಿ ನಿರ್ವಹಿಸಲು ಅವಕಾಶ ಇದಾಗಿದೆ. ಈಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆ ಮಾಡದಂತೆ ಪಾಲಕರು ಮತ್ತು ಶಿಕ್ಷಕರು ತಿಳಿಸಿಕೊಟ್ಟು ಅವರನ್ನು ಸನ್ಮಾರ್ಗದತ್ತ ಕರೆದೊಯ್ಯಬೇಕು ಎಂದು ಸಲಹೆ ನೀಡಿದರು.ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಅವರು ಸಮಾಜದಲ್ಲಿರುವ ಸಾಧಕರನ್ನು ಗುರುತಿಸಿ ಅವರನ್ನು ಸಮಾಜಕ್ಕೆ ಪರಿಚಯಿಸುವಂತ ಕೆಲಸ ಕಾರ್ಯಗಳನ್ನು ನಿಸ್ವಾರ್ಥ ಭಾವದಿಂದ ಮಾಡುತ್ತಾ ಬಂದಿದೆ, ಗ್ರಾಮೀಣ ಮತ್ತು ನಗರ ಭಾಗದ ಮಕ್ಕಳಲ್ಲಿರುವ ಕೌಶಲ್ಯ ಗುರುತಿಸುತ್ತಾ ಬಂದಿರುವುದು ಅಭಿನಂದನಾರ್ಹವಾದದು.ಕನ್ನಡಪ್ರಭ ಪ್ರೌಢಶಾಲೆಯ ಮಕ್ಕಳಿಗಾಗಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಚಿತ್ರಕಲಾ ಸ್ಪರ್ಧೆಯ ಮೂಲಕ ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರೊತ್ಸಾಹ ನೀಡುತ್ತಿರುವುದು ಮಾಧ್ಯಮ ಕ್ಷೇತ್ರದಲ್ಲಿಯೇ ಇದು ಪ್ರಥಮ ಮತ್ತು ಇತರೆ ಮಾಧ್ಯಮ ಕ್ಷೇತ್ರಕ್ಕೆ ಮಾದರಿಯಾಗಿದೆ.
-ಸವಿತಾ ತಿಮ್ಮಣ್ಣ ಅರಳಿಕಟ್ಟಿ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಮಹಿಳಾ ಸುವರ್ಣ ಸಾಧಕಿ ಪ್ರಶಸ್ತಿ ಪುರಸ್ಕೃತೆಬಣ್ಣಗಳ ಮೂಲಕ ಜೀವ ತುಂಬುವ ಚಿತ್ರಕಲಾ ಸ್ಪರ್ಧೆ: ಧನಪಾಲ್ಬೀಳಗಿ: ಚಿತ್ರಕಲಾ ಸ್ಪರ್ಧೆ ಮೂಲಕ ಮಕ್ಕಳು ತಮ್ಮ ಸೃಜನಾತ್ಮಕ ಕಲ್ಪನೆ, ಬಣ್ಣಗಳ ಮೂಲಕ ಜೀವ ತುಂಬುವ ಕೆಲಸ ಮಾಡಿದ್ದಾರೆ. ಇಂತಹ ಸಂಸ್ಕಾರ ಇಂದಿನ ಮಕ್ಕಳಿಗೆ ಅತೀ ಅವಶ್ಯವಿದೆ. ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಇಂತಹ ವೇದಿಕೆಗಳು ಅತೀ ಅವಶ್ಯ ಮತ್ತು ಅನಿವಾರ್ಯವಿದೆ. ಅಂತಹ ಕೆಲಸವನ್ನು ಕನ್ನಡಪ್ರಭ ಮಾಡಿದೆ ಎಂದು ಬೀಳಗಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ದೇವಿಂದ್ರ ಧನಪಾಲ್ ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಯಾವುದೇ ಸ್ಪರ್ಧೆ ಇರಲಿ, ಬಹುಮಾನಗಳು ಮುಖ್ಯವಾಗಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯವಾಗುತ್ತದೆ. ವೇದಿಕೆ ಮತ್ತು ಅವಕಾಶಗಳು ತಮಗೆ ಬಂದಾಗ ಹಿಂದೇಟು ಹಾಕದೇ ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮಲ್ಲಿರುವ ಪ್ರತಿಭೆ ಹೊರಹಾಕಲು ಇದರಿಂದ ತಮಗೆ ಅನುಕೂಲಕರವಾಗಲಿದೆ ಎಂದು ತಿಳಿಸಿದರು.ರುದ್ರಗೌಡ ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಶ್ರೀದೇವಿ ಕೆ.ಪಾಟೀಲ ಮಾತನಾಡಿ, ತಮಗೆ ಅವಕಾಶಗಳು ಬಂದಾಗ ವಿದ್ಯಾರ್ಥಿಗಳು ಕಣ್ಣುಮುಚ್ಚಿಕೊಂಡು ಕುಳಿತುಕೊಳ್ಳದೇ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳು ಸಾಮಾಜಿಕ ಜವಾಬ್ದಾರಿ ಮತ್ತು ಸಾಮಾಜಿಕ ಕಳಕಳಿ ಮನೋಭಾವನೆ ಬೆಳಸಿಕೊಂಡು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಚಿತ್ರಕಲಾ ಸ್ಪರ್ಧೆ ಮೂಲಕ ಮಕ್ಕಳು ತಮ್ಮ ಸೃಜನಾತ್ಮಕ ಕಲ್ಪನೆ, ಬಣ್ಣಗಳ ಮೂಲಕ ಜೀವ ತುಂಬುವ ಕೆಲಸ ಮಾಡಿದ್ದಾರೆ. ಇಂತಹ ಸಂಸ್ಕಾರ ಇಂದಿನ ಮಕ್ಕಳಿಗೆ ಅತೀ ಅವಶ್ಯವಿದೆ. ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಇಂತಹ ವೇದಿಕೆಗಳು ಅತೀ ಅವಶ್ಯ ಮತ್ತು ಅನಿವಾರ್ಯವಿದೆ. ಅಂತಹ ಕೆಲಸವನ್ನು ಕನ್ನಡಪ್ರಭ ಮಾಡಿದೆ.
-ದೇವಿಂದ್ರ ಧನಪಾಲ್, ಬೀಳಗಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ
