ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕನ್ನಡಪ್ರಭ ಯುವ ಆವೃತ್ತಿ ವರದಾನ

| Published : Aug 09 2025, 12:00 AM IST

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕನ್ನಡಪ್ರಭ ಯುವ ಆವೃತ್ತಿ ವರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ಯುವ ಆವೃತ್ತಿ ಸಂಚಿಕೆಯಲ್ಲಿ ವಿದ್ಯಾರ್ಥಿಗಳಿಗಾಗಿ ಮೀಸಲಾದ ಶೈಕ್ಷಣಿಕ ವಿಷಯಗಳು, ಅನೇಕ ಶೈಕ್ಷಣಿಕ ವಿಷಯದ ಚಟುವಟಿಕೆಗಳು ಮತ್ತು ಉದ್ಯೋಗ ವಾರ್ತೆಯಂತಹ ಉಪಯುಕ್ತ ಮಾಹಿತಿಗಳಿದ್ದು, ವಿದ್ಯಾರ್ಥಿಗಳು ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಮೊಬೈಲ್‌ ಬಿಡಿ ಕನ್ನಡಪ್ರಭದ ಯುವ ಆವೃತ್ತಿ ಕೈ ಲಿ ಹಿಡಿದು ಓದಿ, ಭವಿಷ್ಯದ ಅಭಿವೃದ್ಧಿಗೆ ಜ್ಞಾನ ಸಂಗ್ರಹ ಮಾಡಿಕೊಳ್ಳಬೇಕು. ಇದರ ಉಪಯೋಗವನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಕನ್ನಡಪ್ರಭದ ಯುವ ಆವೃತ್ತಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಒಂದು ವರದಾನವಾಗಿದೆ ಎಂದು ವಾಯ್ಸ್ ಪ್ರೆಸಿಡೆಂಟ್ ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್‌ನ ಪುನೀತ್ ರಾಜ್ ತಿಳಿಸಿದರು.

ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ವಿಭಜಿತ ಪ್ರೌಢಶಾಲಾ ವಿಭಾಗದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕನ್ನಡಪ್ರಭದ ಯುವ ಆವೃತ್ತಿ ವಿತರಿಸಿ ಮಾತನಾಡಿದ ಅವರು, ಕನ್ನಡಪ್ರಭ ಯುವ ಆವೃತ್ತಿ ಸಂಚಿಕೆಯಲ್ಲಿ ವಿದ್ಯಾರ್ಥಿಗಳಿಗಾಗಿ ಮೀಸಲಾದ ಶೈಕ್ಷಣಿಕ ವಿಷಯಗಳು, ಅನೇಕ ಶೈಕ್ಷಣಿಕ ವಿಷಯದ ಚಟುವಟಿಕೆಗಳು ಮತ್ತು ಉದ್ಯೋಗ ವಾರ್ತೆಯಂತಹ ಉಪಯುಕ್ತ ಮಾಹಿತಿಗಳಿದ್ದು, ವಿದ್ಯಾರ್ಥಿಗಳು ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಮೊಬೈಲ್‌ ಬಿಡಿ ಕನ್ನಡಪ್ರಭದ ಯುವ ಆವೃತ್ತಿ ಕೈ ಲಿ ಹಿಡಿದು ಓದಿ, ಭವಿಷ್ಯದ ಅಭಿವೃದ್ಧಿಗೆ ಜ್ಞಾನ ಸಂಗ್ರಹ ಮಾಡಿಕೊಳ್ಳಬೇಕು. ಇದರ ಉಪಯೋಗವನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಹೇಳಿದರು.

ನಮ್ಮ ಹಾಸನ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಹರೀಶ್ ಗೌಡ ಮಾತನಾಡಿ, ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಜೀವಿನಿಯಾಗಿದೆ. ವಿದ್ಯಾರ್ಥಿಗಳ ಭವಿಷ್ಯಕಾಗಿ ಕನ್ನಡಪ್ರಭ ದಿನಪತ್ರಿಕೆ ಅನೇಕ ಉಪಯುಕ್ತ ವಿಷಯಗಳ ವಿಭಿನ್ನ ಸಂಚಿಕೆಗಳನ್ನು ಪ್ರಕಟಿಸುತ್ತಿದ್ದು, ಗ್ರಾಮೀಣ ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು. ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಜೀವಿನಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಡಿ. ಆರ್. ಕುಮಾರ್, ಶಿಕ್ಷಕರಾದ ಮಂಜುನಾಥ್, ಸುಮನ್ ರಾವ್ ಮೂರ್ತಿ, ಶೈಲಜಾ, ಭವ್ಯ, ಗಾಯತ್ರಿ, ಶಾಂತಮ್ಮ, ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್‌ನ ಮಂಜುನಾಥ್, ಅನಿತಾ, ರಾಣಿ, ಚಂದ್ರಶೇಖರ್, ಜೀವನ್, ಅಶೋಕ್, ಬದ್ರೇಶ್, ಕನ್ನಡಪ್ರಭ ಪ್ರತಿನಿಧಿ ಕಿರಣ್ ಕುಮಾರ್ ಇದ್ದರು.