ಸಾರಾಂಶ
ಗಾಣಿಗರ ಯುವಕ ಸಂಘದಿಂದ 69ನೇ ಕನ್ನಡ ರಾಜ್ಯೋತ್ಸವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಇಲ್ಲಿನ ಗಾಣಿಗರ ಬೀದಿಯಲ್ಲಿರುವ ಧ್ವಜಸ್ತಂಭದಲ್ಲಿ ಕನ್ನಡ ಧ್ವಜ ಹಾರಿಸುವ ಮೂಲಕ ಜನಾಂಗದ ಯುವಕರು ನಾಡು ನುಡಿಯ ಬಗ್ಗೆ ಗೌರವ ಸಮರ್ಪಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಕೇವಲ ಕನ್ನಡ ರಾಜ್ಯೋತ್ಸವ ದಿನದಂದು ಕಾರ್ಯಕ್ರಮ ರೂಪಿಸದೆ ನಾಡು, ನುಡಿ, ಜಲ, ಭಾಷೆಗಾಗಿ ವರ್ಷಪೂರ್ತಿ ಕನ್ನಡ ಸೇವೆಗಾಗಿ ಮುಡಿಪಾಗಿಟ್ಟಗ ಮಾತ್ರ ರಾಜ್ಯೋತ್ಸವ ಅರ್ಥಪೂರ್ಣವಾಗಿರುತ್ತದೆ ಎಂದರು.
ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಗಾಣಿಗರ ಯುವಕ ಸಂಘದಿಂದ 69ನೇ ಕನ್ನಡ ರಾಜ್ಯೋತ್ಸವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಇಲ್ಲಿನ ಗಾಣಿಗರ ಬೀದಿಯಲ್ಲಿರುವ ಧ್ವಜಸ್ತಂಭದಲ್ಲಿ ಕನ್ನಡ ಧ್ವಜ ಹಾರಿಸುವ ಮೂಲಕ ಜನಾಂಗದ ಯುವಕರು ನಾಡು ನುಡಿಯ ಬಗ್ಗೆ ಗೌರವ ಸಮರ್ಪಿಸಿ ಸಿಹಿ ಹಂಚಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಜನಾಂಗದ ಹಿರಿಯರಾದ ಬಿ. ಎಸ್ ಮಂಜುನಾಥ್ ಮಾತನಾಡಿ, ಸಂಘದ ಯುವಕರು ಸಾಮಾಜಿಕ ಕಳಕಳಿಯೊಂದಿಗೆ ಕನ್ನಡ ಭಾಷೆ ಬಗ್ಗೆ ಅಪಾರವಾದ ಅಭಿಮಾನ ಹೊಂದಿದ್ದು, ಇದೇ ರೀತಿ ಕನ್ನಡ ಭಾಷೆಗಾಗಿ ತಮ್ಮ ತನು ಮನ ಸೇವೆಯನ್ನು ಸಮರ್ಪಿಸಿದಾಗ ಮಾತ್ರ ಇದು ಅರ್ಥಪೂರ್ಣವಾಗಿರುತ್ತದೆ ಎಂದರು.
ಗಾಣಿಗ ಸಂಘದ ಕಾರ್ಯದರ್ಶಿ ಎನ್. ಅನಂತು ಮಾತನಾಡಿ, ಜನಾಂಗದ ಯುವಕರು ಹತ್ತಾರು ವರ್ಷಗಳಿಂದ ಕನ್ನಡ ಧ್ವಜಾರೋಹಣ ನಡೆಸುತ್ತಿದ್ದು ಶ್ಲಾಘನೀಯವಾಗಿದೆ. ಕೇವಲ ಕನ್ನಡ ರಾಜ್ಯೋತ್ಸವ ದಿನದಂದು ಕಾರ್ಯಕ್ರಮ ರೂಪಿಸದೆ ನಾಡು, ನುಡಿ, ಜಲ, ಭಾಷೆಗಾಗಿ ವರ್ಷಪೂರ್ತಿ ಕನ್ನಡ ಸೇವೆಗಾಗಿ ಮುಡಿಪಾಗಿಟ್ಟಗ ಮಾತ್ರ ರಾಜ್ಯೋತ್ಸವ ಅರ್ಥಪೂರ್ಣವಾಗಿರುತ್ತದೆ ಎಂದರು.ಈ ವೇಳೆ ಗಾಣಿಗರ ಯುವಕ ಸಂಘದ ಅಧ್ಯಕ್ಷ ಬಿ.ಎಸ್. ಶ್ರೀಧರ, ಬಿ .ಆರ್. ಸಂಜು, ಬಿ.ಎಸ್ ಕೇಶವ ಮಂಜುನಾಥ ಮಹೇಶ್ ರಾಘವೇಂದ್ರ ಸಂಜು ಬಿ.ಎಂ ಜಗದೀಶ ಇದ್ದರು.